ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.

  • -40%

    ಮೆಲುಕು

    0

    ಮೆಲುಕು
    (ಲೇಖನಗಳು)

    ಈ ಪುಸ್ತಕವನ್ನು ಗಿರೀಶ ಕಾರ್ನಾಡ   ಅವರು ಬರೆದಿದ್ದಾರೆ.

    Original price was: $2.40.Current price is: $1.44.
    Add to basket
  • -40%

    ಸ್ಮೃತಿ ಸೌರಭ

    0

    ಸ್ಮ ತಿ ಸೌರಭ
    ಚೆನ್ನವೀರ ಕಣವಿ
    ಚೆನ್ನವೀರ ಕಣವಿಯವರು ಚಿತ್ರಿಸುವ ಯಾವುದೇ ವ್ಯಕ್ತಿಚಿತ್ರದಲ್ಲಿಯೂ ಕೊಂಕು, ವ್ಯಂಗ್ಯ, ಉಡಾಫೆಗಳಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಇತ್ಯಾತ್ಮಕ ಮತ್ತು ಆದರ್ಶದ ಗುಣಗಳನ್ನು ಅವರು ಕಂಡಿದ್ದಾರೆ. ಅವರಿಂದ ನಾಡು – ನುಡಿಗೆ ಸಂದ ಸೇವೆಯನ್ನು ಸ್ಮರಿಸಿದ್ದಾರೆ. ವ್ಯಕ್ತಿಯ ಇನ್ನೊಂದು ಮುಖವಾದ ದೌರ್ಬಲ್ಯಗಳನ್ನು, ಸಣ್ಣತನಗಳನ್ನು ಅವರು ಕೆಲಮಟ್ಟಿಗೆ ಉಪೇಕ್ಷೆಯಿಂದಲೇ ಕಂಡಿದ್ದಾರೆ. ಅಂತಹ ಸಾಧಕರ ಸಾಧನೆಯ ಮುಂದೆ ಇವಷ್ಟು ದೊಡ್ಡವಲ್ಲ ಹಾಗೂ ಎತ್ತಿ ಆಡುವವುಗಳಲ್ಲವೆಂದು ಅವರು ಭಾವಿಸಿದಂತೆ ತೋರುತ್ತದೆ. ಕಣವಿಯವರು ಇಂತಹ ವ್ಯಕ್ತಿಚಿತ್ರಗಳನ್ನು ಹಾಗೂ ನವ್ಯದ ಸಂದರ್ಭದಲ್ಲಿ ಪ್ರಕಟವಾದ ವ್ಯಕ್ತಿಚಿತ್ರವನ್ನು ಒಂದು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿದರೆ ಕಣವಿಯವರ ಕಣ್ಣಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದ ಮಹತ್ವ ಮತ್ತು ಗುಣಾತ್ಮಕತೆ – ನಿರ್ವಾಜ್ಯ – ಅಜಾತಶತ್ರುತನದ ಮನೋಭಾವ ಗಮನಕ್ಕೆ ಬರುತ್ತದೆ.
    ಆಧುನಿಕತೆ ಹಾಗೂ ಪರಂಪರೆಯ ಒಂದು ಹದವಾದ ಬೆಸುಗೆಯಂತಿರುವ ಕಣವಿಯವರ ಗದ್ಯಬರವಣಿಗೆಯ ವೈಶಿಷ್ಟ್ಯಕ್ಕೆ ಪ್ರಸ್ತುತ ಕೃತಿ ಒಂದು ನಿರ್ದೇಶನದಂತಿದೆ.

    Original price was: $1.44.Current price is: $0.86.
    Add to basket
  • -40%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $4.32.
    Add to basket
  • -50%

    ಸಮಾಹಿತ – ವರ್ಷ ಸಂಚಿಕೆ (೨೦೧೬)

    0

    ಸಮಾಹಿತ

    ಸಮಾಹಿತ – ವರ್ಷ ಸಂಚಿಕೆ (೨೦೧೬)
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -40%

    ಕೈಗೆ ಬಂದ ತುತ್ತು 

    0

    ಕೈಗೆ ಬಂದ ತುತ್ತು
    ‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
    ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.

    Original price was: $3.00.Current price is: $1.80.
    Add to basket
  • -40%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $4.68.
    Add to basket
  • -50%

    ಸಮಾಹಿತ- ವಸಂತ್ ಸಂಚಿಕೆ ೨೦೧೬

    0

    ಸಮಾಹಿತ
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -50%

    ಸಮಾಹಿತ-ಶಿಶಿರ ಸಂಚಿಕೆ ೨೦೧೬

    0

    ಸಮಾಹಿತ
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -40%

    ತೇರು

    0

    ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
    ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ.

    Original price was: $2.04.Current price is: $1.22.
    Add to basket
  • -40%

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ

    0

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ
    ಈ ಮನೋಹರ ಗ್ರಂಥಮಾಲೆ ೧೯೫೮ – ೬೦ ರಲ್ಲಿ ಗ್ರಂಥಮಾಲೆಯು ನಡೆದು ಬಂದ ದಾರಿ ಸಂಪುಟಗಳನ್ನು ಪ್ರಕಟಿಸಿತ್ತು. ಈ ವ್ಯಕ್ತಿಚಿತ್ರ ೩ ನೇ ಸಂಪುಟದಲ್ಲಿ ಪ್ರಕಟವಾಗಿತ್ತು.ಸುಮಾರು ೫೦ ವರ್ಷಗಳ ನಂತರ ಪಂ.ಭೀಮಸೇನ ಜೋಷಿಯವರು ಮುಗಿಲೆತ್ತರಕ್ಕೆ ಬೆಳೆದು “ಭಾರತ  ರತ್ನ” ಪ್ರಶಸ್ತಿಯನ್ನು ಅಲಂಕರಿಸಿದ ಮೇಲೆ ಅವರ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗತೊಡಗಿದವು.  ಪಂ.ಭೀಮಸೇನ ಜೋಷಿಯವರು ೨೪ ಜನೇವರಿ ೨೦೧೧ ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

    Original price was: $0.48.Current price is: $0.29.
    Add to basket
  • -40%

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….

    0

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….
    ಆಚಾರ್ಯ ಪ್ರಹಸನ  ಮತ್ತು ಏನ್ ಹುಚ್ಚುರೀ ಇವು ಎರಡು  ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ  ಪ್ರಹಸನ’ವು  ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ.  ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೇರ ಬಲ್ಲ ಕೃತಿಗಳಿವು.

    Original price was: $1.44.Current price is: $0.86.
    Add to basket
  • -40%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ
    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪ್ರಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $1.80.
    Add to basket
  • -40%

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು

    0

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:
    “ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ.

    Original price was: $1.44.Current price is: $0.86.
    Add to basket
  • -40%

    ಮುಖಾಂತರ

    0

    ಮುಖಾಂತರ
    ‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು  ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
    ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ.

    Original price was: $6.60.Current price is: $3.96.
    Add to basket
  • -40%

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ

    0

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ :
    (ನಾಟಕಗಳ ವಿಮಶಾತ್ಮಕ ಅಧ್ಯಯನ)
    ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕರಲ್ಲಿ ಒಬ್ಬರಾದ ಡಾ.ಜಿ.ಎಸ್.ಅಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ ‘ಮಾ ನಿಷಾದ’ ವೂ ಸೇರಿದಂತೆ ಎಲ್ಲ ಹನ್ನೆರೆಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
    ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪಾಶ್ಚಾತ್ಯ ಹಾಗು ಪೌರ್ವಾತ್ಯ ರಂಗಭೂಮಿಗಳ ನಾಟಕಕಾರ, ಸಮಕಾಲೀನ ಸಂದರ್ಭದ ಪ್ರೇರಣೆ ಪ್ರಭಾವಗಳನ್ನು ಈ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ.
    ಇದು ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಸೂಚಿಯಾಗಬಲ್ಲ ಅಪರೂಪದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $1.80.Current price is: $1.08.
    Add to basket
  • -40%

    ಯು. ಆರ್. ಅನಂತಮೂರ್ತಿ

    0

    ಯು. ಆರ್. ಅನಂತಮೂರ್ತಿ 

    ವೈಚಾರಿಕತೆ ಹಾಗೂ ಸಾಹಿತ್ಯ  :
    ಅನಂತಮೂರ್ತಿಯವರು ನನ್ನ ಸಮಕಾಲೀನರಲ್ಲೇ ಅತ್ಯಂತ ಗಂಭೀರ ಮನೋಧರ್ಮದ ಲೇಖಕರು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ಮಾನವನ ದೈನಿಕ ಜೀವನದ ಬಗ್ಗೆ. ಅವನ ಭವಿತವ್ಯದ ಬಗ್ಗೆ ತಾವು ಅಭ್ಯಾಸ ಮಾಡಿದ್ದನ್ನು, ಗಾಢವಾಗಿ ಚಿಂತಿಸಿದ್ದನ್ನು ನಾಟ್ಯೀಕರಿಸುತ್ತ ವಿಚಾರವನ್ನೇ ಒಂದು ಜೀವಂತ ಅನುಭವದ ಪ್ರಭಾವಬೀರುವ ಸ್ಥಿತಿಗೆ ಒಯ್ದು ನಮಗೆ ಮುಟ್ಟಿಸುವ ಕಳಕಳಿಯ ಪ್ರಯತ್ನ ಇವರ ಸಾಹಿತ್ಯದ ಪ್ರಮುಖ ಲಕ್ಷ್ಯಗಳಲ್ಲೊಂದಾಗಿದೆ. ನಮ್ಮ ಪ್ರಜ್ಞೆಯನ್ನು ಹಿಗ್ಗಿಸುವಲ್ಲಿ ಸಾಹಿತ್ಯಕ್ಕಿರುವ ಮಹತ್ವದ ಪಾತ್ರವನ್ನು ಕುರಿತು ಇವರಿಗಿರುವ ಗಾಢವಾದ ಶ್ರದ್ಧೆಯೇ ಇವರು ಬರೆದ ಪ್ರತಿಯೊಂದು ನಮ್ಮ ಪ್ರೀತಿಗೆ, ಗೌರವಕ್ಕೆ ಪಾತ್ರವಾಗುವಂತೆ ಮಾಡುತ್ತದೆ.

    Original price was: $1.80.Current price is: $1.08.
    Add to basket
  • -40%

    ಭಾಷೆ ಮತ್ತು ಸಂಸ್ಕೃತಿ

    0

    ಭಾಷೆ ಮತ್ತು ಸಂಸ್ಕೃತಿ
    ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.

    Original price was: $1.80.Current price is: $1.08.
    Add to basket
  • -40%

    ತಂತ್ರಯೋನಿ

    0

    ತಂತ್ರಯೋನಿ
    ‘ತಂತ್ರಯೋನಿ’  ಗ್ರಂಥ  ತಂತ್ರದ  ಶಾಸ್ತ್ರವನ್ನು  ಕುರಿತು  ವಿವರವಾಗಿ  ಹೇಳುತ್ತದೆ.  ತಂತ್ರ  ಒಂದು  ರಹಸ್ಯವಿದ್ಯೆ.  ಈ  ವಿದ್ಯೆಯನ್ನು  ಗುರುವಿನಿಂದ  ಪಡೆಯಲು  ಶಿಷ್ಯ  ಅಧಿಕಾರಿಯಾಗಿರಬೇಕು.  ‘ಅಶಿಷ್ಯಾಯ  ನ  ದೇಯಂ’  ಎನ್ನುವದು  ಇಂಥ  ವಿದ್ಯೆಗಳಿಗೆ  ಒಂದು  ನಿಷೇಧವಾಕ್ಯ. ದೀಕ್ಷೆ,  ಧ್ಯಾನ,  ಜಪ,  ಮಂತ್ರ  ಮೊದಲಾದವುಗಳು  ಕೂಡ  ತಂತ್ರವಿದ್ಯೆಯ  ಅಂಗಗಳಾಗಿರುವುದರಿಂದ  ಅವುಗಳನ್ನು  ಕುರಿತು  ಸಾಕಷ್ಟು  ವಿವರಗಳನ್ನು  ಈ  ಗ್ರಂಥದಲ್ಲಿ  ನೀಡಲಾಗಿದೆ.

    Original price was: $4.50.Current price is: $2.70.
    Add to basket
  • -40%

    ಹೊಳೆಮಕ್ಕಳು

    0

    ಇದು ಬಿದರಹಳ್ಳಿ ನರಸಿಂಹಮೂರ್ತಿಯವರ ಕಾದಂಬರಿ.

    Original price was: $2.40.Current price is: $1.44.
    Add to basket
  • -40%

    ಸರದಿ

    0

    ಸರದಿ
    ಡಾ.ನಾ. ದಾಮೋದರ ಶೆಟ್ಟಿ ಅವರ ‘ಸರದಿ’ ಕಾದಂಬರಿಯು ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ.

    Original price was: $0.84.Current price is: $0.50.
    Add to basket
  • -40%

    ಅಂತರಂಗದ ಮೃದಂಗ

    0

    ಅಂತರಂಗದ ಮೃದಂಗ
    (ವೈಚಾರಿಕ ಪ್ರಬಂಧಗಳು)
    ನರಹಳ್ಳಿಯವರ ಪ್ರಬಂಧಗಳದ್ದು ಸಾವಧಾನದ ವಿಲಂಬಿತ ನಡೆ ಆದುದರಿಂದ ಅದಕ್ಕೆ ದಕ್ಕುವ ಸೂಕ್ಷ್ಮಗಳು ಅಪರೂಪದವು. ಆಧುನಿಕ ಜೀವನದ ಬಿಕ್ಕಟ್ಟುಗಳ ಬಗ್ಗೆ ನರಹಳ್ಳಿಯವರ ಚಿಂತನೆಗಳು ಸ್ವಾನುಭವ ಅನುಸಂಧಾನದಿಂದಲೇ ತತ್ವೀಕರಣಗೊಳ್ಳುವುದರಿಂದ ಅಧೀಕೃತತೆಯ ಮುದ್ರೆಯನ್ನು ಅನಾಯಾಸವಾಗಿ ಪಡೆಯುತ್ತವೆ. ಲಲಿತ ಪ್ರಬಂಧಕ್ಕೆ ಬೌದ್ಧಿಕತೆಯ ಬೆನ್ನೆಲುಬು ದೊರಕಿಸಿದ್ದು ನರಹಳ್ಳಿಯವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ಸಮಕಾಲೀನ ಜೀವನದ ಉಪಯೋಗಿ ದೃಷ್ಟಿಯ ಅವಸರ ಗತಿಗೆ ವಿಲಂಬಿತ ನಡೆಯ ಎದುರೀಜು ಹಾಕುವ ಪ್ರಬಂಧಗಳ ಚಿಂತನ ದ್ರವ್ಯ ಹೊಸ ನೆಲೆಯಲ್ಲಿ ಓದುಗ ಯೋಚಿಸುವುದನ್ನು ಒತ್ತಾಯಿಸುವಷ್ಟು ಸಮರ್ಥವಾಗಿವೆ. ಪ್ರಬಂಧಗಳ ಶೈಲಿ ಪು.ತಿ.ನ. ಅವರ ಪ್ರಬಂಧಗಳ ರಚನಾ ಕ್ರಮವನ್ನು ನೆನಪಿಸುವಂತಿವೆ. ಈ ಹೊತ್ತಿನ ಸಾಮಾಜಿಕ ಪಲ್ಲಟಗಳನ್ನು ಗಾಢವಾದ ವಿಶಾದದ ನೆಲೆಯಲ್ಲಿ ಹಿಡಿದಿಡುವ ಈ ಪ್ರಬಂಧಗಳು ನಿರ್ಭಾವುಕ ವೈಚಾರಿಕ ಪ್ರಬಂಧಗಳಿಗೆ ಸಮರ್ಥ ಪರ್ಯಾಯಗಳೆನಿಸುತ್ತವೆ.

    Original price was: $1.20.Current price is: $0.72.
    Add to basket
  • -40%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಈ ಆಸಕ್ತಿ ಈ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಈ ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.

    Original price was: $0.84.Current price is: $0.50.
    Add to basket
  • -40%

    ಸಾಹಿತ್ಯಲೋಕದ ಸುತ್ತ-ಮುತ್ತ

    0

    ಸಾಹಿತ್ಯಲೋಕದ ಸುತ್ತ–ಮುತ್ತ :
    (ಪ್ರಸಂಗಗಳು)

    ತುಂಬಾ ಗಂಭೀರ ಧಾಟಿಯ ನಿಷ್ಠುರ ವಿಮರ್ಶಕರೆಂದೇ ಪ್ರಸಿದ್ಧರಾಗಿರುವ ಗಿರಡ್ಡಿ ಗೋವಿಂದರಾಜರ ವ್ಯಕ್ತಿತ್ವ ಮತ್ತು ಬರವಣಿಗೆಯ ಮತ್ತೊಂದು ಮುಖ್ಯ ಆಯಾಮವನ್ನು ತೋರುವ ಕೃತಿ ”ಸಾಹಿತ್ಯ ಲೋಕದ ಸುತ್ತ–ಮುತ್ತ ”. ಪಠ್ಯ ಕೇಂದ್ರಿತ ವಿಮರ್ಶಕ ಈಗ ಪಠ್ಯದ ಸುತ್ತಮುತ್ತಲೂ ನೋಡುತ್ತಿದ್ದಾನೆ. ತನ್ನ ಗಮನಕ್ಕೆ ಬಂದ ಸ್ವಾರಸ್ಯಕರ ಸಂಗತಿಗಳನ್ನು ಪೂರ್ವ ಗ್ರಹಗಳಿಲ್ಲದೆ ಆಸ್ವಾದಿಸುತ್ತಾ ಅವುಗಳನ್ನು ಇತರ ಸಾಹಿತ್ಯಾಸಕ್ತರಿಗೂ ದಾಟಿಸುತ್ತಿದ್ದಾನೆ. ಈ ಪುಸ್ತಕವನ್ನು ‘ಪ್ರಸಂಗಗಳು‘ ಎಂದು ಕರೆದಿರುವುದು ಉಚಿತವಾಗಿಯೇ ಇದೆ. ಸಾಹಿತ್ಯ, ರಂಗಭೂಮಿಗಳನ್ನು ಹತ್ತಿರದಲ್ಲಿ ಬಲ್ಲ ಗಿರಡ್ಡಿಯವರು ಪ್ರಸಂಗ‘ಗಳ ಹಲವು ಮಾದರಿಗಳನ್ನು ಇಲ್ಲಿ ಲವಲವಿಕೆ ಇಂದ ನಿರೂಪಿಸಿದ್ದಾರೆ.ಈ ಪ್ರಸಂಗಗಳಲ್ಲಿ ಕೆಲವು ಸಾಂದರ್ಭಿಕ ಹಾಸ್ಯ, ಸಂದಿಗ್ಧತೆ ಮತ್ತು ಅವುಗಳ ಅನಿರೀಕ್ಷಿತತೆಗಳಿಂದ ಮುದಗೊಳಿಸಿದರೆ, ಮತ್ತೆ ಕೆಲವು ಪರಿಚಿತ ಲೇಖಕರ ಅಪರಿಚಿತ ಮುಖಗಳನ್ನು ಕಾಣಿಸಿ ಬೆಚ್ಚಿಬೀಳಿಸುವಂತಿದೆ. ಮತ್ತೆ ಕೆಲವು ಸಾಹಿತ್ಯ ಚರಿತ್ರೆಯ ಭಾಗಗಳಾಗಿಯೂ ಮುಖ್ಯವೆನಿಸುತ್ತದೆ. ಸಾಹಿತ್ಯ ಲೋಕದ ಸುತ್ತಮುತ್ತ ಹಬ್ಬಿರುವ ಗಾಸಿಪ್ಪುಗಳಿಗೆ ಮತ್ತಷ್ಟು ಬಣ್ಣ ತುಂಬುವ ಕೆಲಸವನ್ನಿ ಇಲ್ಲಿ ಗಿರಡ್ಡಿ ಮಾಡ ಹೊರಟಿಲ್ಲ. ಸಾಹಿತ್ಯ ಸಂಶೋಧಕರಂತೆ ಕೆಲವು ವದಂತಿಗಳ ಜಾಡು ಹಿಡಿದು ಇತರ ವ್ಯಕ್ತಿಗಳಿಂದ ಸಾಕ್ಷ್ಯಗಳನ್ನು ಕಲೆಹಾಕಿ, ಕೆಲವೊಮ್ಮೆ ಲಿಖಿತ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಅನಗತ್ಯ ಗೋಜಲುಗಳಿಂದ ಮುಕ್ತಗೊಳಿಸಲು ಶ್ರಮಿಸಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಗಿರಡ್ಡಿಯವರ ಸಣ್ಣಕತೆಗಳು

    0

    ಗಿರಡ್ಡಿಯವರ ಸಣ್ಣಕತೆಗಳು :

    ಗಿರಡ್ಡಿಯವರು ಮೊದಲ ಓದಿಗೆ ಮನಸ್ಸಿಗೆ ತೆಕ್ಕೆ ಬೀಳುವಂಥ… ಕಥೆಗಳನ್ನು ಕೊಟ್ಟಿದ್ದಾರೆ. ಇವರ ಕಥೆಗಳಲ್ಲಿ ಥಟ್ಟನೆ ಓದುಗರ ಮನಸ್ಸನ್ನು ಆಕರ್ಷಿಸುವ ಗುಣಗಳೆಂದರೆ ಸದ್ದಿಲ್ಲದೆ ಭಾಷೆ ಕೊಡುವ ಅನುಭವ. ಇಲ್ಲಿ ಕಥೆಗಾರರ ನಿರ್ಲಿಪ್ತತೆಯಿಂದ ಹಲವು ಶಕ್ತಿಗಳು ಹೆಣೆದುಕೊಂಡು ತುಂಬಾ ಪರಿಣಾಮಕಾರಿಯಾದ ಮುಕ್ತಾಯವನ್ನು ಮುಟ್ಟಿ ಒಂದು ಸಂಕೀರ್ಣ, ಪರಿಪೂರ್ಣ ಅನುಭವವನ್ನು ಸಾಧಿಸುತ್ತದೆ.

    Original price was: $3.00.Current price is: $1.80.
    Add to basket
  • -40%

    ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

    0

    ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

    ಕಳೆದ ಎರಡು–ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ–ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವಾದ ಕೆಲವು ಸೈದ್ಧಾಂತಿಕ ಧಾರೆಗಳನ್ನು ಇಲ್ಲಿ ಪರಿಚಯಿಸಲಾಗಿದೆ.

    Original price was: $2.10.Current price is: $1.26.
    Add to basket
  • -40%

    ಸೊನಾಟಾ

    0

    ಸೊನಾಟಾ –

    ಪಾಶ್ಚಾತ್ಯ ಸಂಗೀತದಲ್ಲಿ ಪಿಯನೋದಂಥಹ ಏಕ ವಾದ್ಯಕ್ಕಾಗಿ ಅಥವಾ ಅದರ ಜೊತೆಗೆ ಹೆಚ್ಚೆಂದರೆ ಪಿಟೀಲು – ಚೆಲೋದಂಥಹ ಒಂದು ತಂತು ವಾದ್ಯಕ್ಕಾಗಿ ರಚಿಸಿರುವ ಬೃಹತ್ ಗಾತ್ರದ ಕೃತಿ. (ಮರಾಠಿಯಲ್ಲಿ ‘ಸನ್ನಾಟಾ‘ ಎಂದರೆ ‘ಸ್ಮಶಾನ ಮೌನ‘ ಎಂದರ್ಥ.)
    ಈ ನಾಟಕದ ಮೂಲ ಮರಾಠಿ ಲೇಖಕರು ಶ್ರೀ ಮಹೇಶ ಎಲಕುಂಚವಾರ . ಕನ್ನಡ ಅನುವಾದ ಶ್ರೀ ಗಿರೀಶ ಕಾರ್ನಾಡ

    Original price was: $0.60.Current price is: $0.36.
    Add to basket
  • -40%

    ಕುವೆಂಪು : ಯುಗದ ಕವಿ

    0

    ಕುವೆಂಪು ಅವರ ವ್ಯಕ್ತಿತ್ವದ ಮೂಲನೆಲೆಯಾಗಿ ಆಧ್ಯಾತ್ಮಿಕತೆ, ಅವರ ಬರವಣಿಗೆಯು ಸ್ಥಳೀಯ ಮತ್ತು ವೈಶ್ವಿಕಗಳನ್ನು ಹೆಣೆಯುವ ಬಗೆ, ಅವರು ಲೌಕಿಕ ಮತ್ತು ಆಗಮಿಕಗಳ ನಡುವೆ ಸಾಧಿಸಿರುವ ಸಹಯೋಗದ ಸ್ವರೂಪ, ಅವರ ನಾಟಕಗಳ ಸಮಕಾಲೀನತೆ ಮತ್ತು ಸಾಮಾಜಿಕತೆ, ಕಾದಂಬರಿಗಳ ದಾರ್ಶನಿಕ ನೆಲೆಗಟ್ಟು ಮುಂತಾದ ಸಂಗತಿಗಳು ಇಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿವೆ.

    Original price was: $1.80.Current price is: $1.08.
    Add to basket
  • -39%

    ಬೆಂದ ಕಾಳು ಆನ್ ಟೋಸ್ಟ್

    0

    ಬೆಂದ ಕಾಳು ಆನ್ ಟೋಸ್ಟ್

    ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿ ತಪ್ಪಿ, ರಾತ್ರಿಯಿಡೀ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬ ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ‘ಬೆಂದಕಾಳೂರು’ ಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆ ‘ಬೆಂಗಳೂರು’ ಆಯಿತು.

    Original price was: $0.76.Current price is: $0.46.
    Add to basket
  • -40%

    ಮದುವೆಯ ಆಲ್ಬಮ್

    0

    ಮದುವೆಯ ಆಲ್ಬಮ್
    – ನಾಟಕ –
    ಮದುವೆಯ ಅಲ್ಬಮ್ ಸಮಕಾಲೀನ ಜೀವನದ ಬಗ್ಗೆ ಗಿರೀಶ ಕಾರ್ನಾಡ ಅವರು ಬರೆದ ನಾಟಕ. ಇದರಲ್ಲಿರುವುದು ಸಮಕಾಲೀನ ಸಂವೆದನೆಯೇ ಹೊರತು ವಿಷಯವಲ್ಲ ಎಂದು ಗಿರೀಶ ಕಾರ್ನಾಡರ ಅಭಿಪ್ರಾಯ.
    ‘ಮದುವೆಯ ಆಲ್ಬಮ್’ ನಾಟಕದ ಮೊದಲನೆಯ ಪ್ರಯೋಗವನ್ನು Prime Time Theatre Company ಅವರು ಇಂಗ್ಲಿಷ್ ನಲ್ಲಿ Wedding Album ಎಂಬ ಹೆಸರಿನಲ್ಲಿ ಮುಂಬಯಿಯ National Centre for the Performing Arts ಅವರ ಟಾಟಾ ನಾಟ್ಯಗೃಹದಲ್ಲಿ ಶನಿವಾರ ೧೦ಮೇ ೨೦೦೮ರಂದು ಸಾದರಪಡಿಸಿದರು.

    Original price was: $1.08.Current price is: $0.65.
    Add to basket
  • -40%

    ಎಷ್ಟು ಕಾಡತಾವ ಕಬ್ಬಕ್ಕೀ…

    0

    ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಮತ್ತು ‘ಎಷ್ಟು ಕಾಡತಾವ ಕಬ್ಬಕ್ಕೀ…’ ಓದುವಾಗ ನಾವು ಬದುಕಿನೊಂದಿಗೇ, ಅದರ ನಿಷ್ಠುರ ಅನಿಯತಿಯೊಂದಿಗೇ ಹೊಕ್ಕಾಡುವ ಅನುಭವವಾಗುತ್ತದೆ. ಕಥೆಯನ್ನೂ ಅದೊಂದು ಬದುಕು ಎನ್ನುವಂತೆ ಬೆಳೆದುಕೊಳ್ಳುವುದು ಅಸಾಮಾನ್ಯ ಕತೆಗಾರನಿಗೆ ಮಾತ್ರ ಸಾಧ್ಯ. ಕಥೆಗಾಗಿ ಬದುಕು ಇರುವುದಿಲ್ಲ. ಲೇಖಕ ಎಂಬ ಹುಲುಮಾನವನು, ತಾನು ಕಂಡುಂಡು ಕಳವಳಿಸಿದ ಬದುಕನ್ನು ಅದರ ಎಲ್ಲ ವೈರುಧ್ಯ, ತೀವ್ರತೆ, ಅತಾರ್ಕಿಕತೆಯೊಂದಿಗೆ ಭಾಷೆಯ ಪಾದಯಾತ್ರೆಯಲ್ಲಿ ಹಿಡಿಯಲು ಸಾಧ್ಯವೇ ಎಂದು, ಪಾಟೀಲರ ಕಥೆಗಳು ಪರಮ ವಿನಯದಲ್ಲಿ ಪ್ರಯತ್ನ ಮಾಡುತ್ತವೆ. ಪಾಟೀಲರ ಹೊಸ ಸಂಗ್ರಹದಲ್ಲಿ ನಾವು ನೋಡುತ್ತಿರುವುದು ಅಂಥ ಕಥೆಗಳನ್ನು. ಬದುಕಿನ ನಿಬಿಡತೆಯನ್ನು ಯಾವ ಸಂವಿಧಾನದಲ್ಲಿ ಮಂಡಿಸಿದಾಗ ದರ್ಶನದ ಹೊಳಹೊಂದು ಫಳಕ್ಕನೆ ಮಿಂಚುವುದು ಎಂಬ ಸಂಗತಿಯು ಹಗಲೆಚ್ಚರಕ್ಕೆ ಏನು ಗೊತ್ತು? ಚಾರಣವೇ ತುದಿಗುರಿಯೆಂಬಂತೆ ಪಾಟೀಲ ತಮ್ಮ ಕಥೆಗಳನ್ನು ಬರೆಯುತ್ತಾರೆ. ಅದೇ ಅವರ ಅನನ್ಯತೆ.

    Original price was: $1.56.Current price is: $0.94.
    Add to basket