Avala Murthy A O

Avala Murthy A O

ಎ.ಓ. ಆವಲಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಅಧ್ಯಾಪಕರು. ಕಳೆದ ಹಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಬದಲಿ ಶಕ್ತಿ ಮೂಲಗಳು, ವಿಜ್ಞಾನ ಸೂರ್ಯ ಅವರ ಪ್ರಕಟಿತ ಕೃತಿಗಳು.

Books By Avala Murthy A O