• -10%

    ಹಿಂದೂ ಅಸ್ಮಿತೆಗಾಗಿ ಹುಡುಕಾಟ

    0

    ಹಿಂದೂ ಅಸ್ಮಿತೆಯ ಕುರಿತಾಗಿ ರೂಪಕಾತ್ಮಕ ಮತ್ತು ಅನುಭವಜನ್ಯೀಯ ಅನುಭವಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ಅನೇಕ ಶಿಸ್ತುಗಳ ವಿದ್ವಾಂಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅಂತಹವರಲ್ಲಿ ಒಬ್ಬರಾದ ಡಿ.ಎನ್.ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು ವಾದ ಸರಣಿಯ ಪ್ರತಿಮೆಯೇ ಈ ಕೃತಿ.

    Original price was: $0.78.Current price is: $0.70.
    Add to basket
  • -10%

    ಭಾರತೀಯ ಕಾವ್ಯ ಮೀಮಾಂಸೆ

    0

    ಸರಳವಾದ ಭಾಷೆ, ನಿಸ್ಸಂದಿಗ್ಧ ನಿರೂಪಣೆ, ಸಂಗ್ರಹಶೀಲ ಅಭಿವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಈ ಪುಸ್ತಕಗಳು ಭಾಷಾದರ್ಶಿಕೆಗಳಾಗಿವೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಪುಸ್ತಕವು ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ.

    Original price was: $0.60.Current price is: $0.54.
    Add to basket
  • -40%

    ಬೇಂದ್ರೆ ಕಾವ್ಯದ ದೇಸಿಯತೆ

    0

    ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ.

    Original price was: $0.96.Current price is: $0.58.
    Add to basket
  • -20%

    ಹಸಿರು ಹಚ್ಚಿ ಚುಚ್ಚಿ

    0

    ಬೇಂದ್ರೆ ಕಾವ್ಯ ತಾಯ ಎದೆಹಾಲ ಚಿಲುಮೆಯಂತೆ. ಕಾವ್ಯದ ಮಾಯೆ, ಮೋಡಿ ಸುಮ್ಮನೆ ಮಂತ್ರ ಹಾಕಿದರೆ ಬರುವುದಿಲ್ಲ. ಬೇಂದ್ರೆ ಕಾವ್ಯದ ಶಬ್ದಶಿಲ್ಪ ಅತ್ಯುನ್ನತವಾದದ್ದು.
    ಅದು ಸಾಧ್ಯವಾದದ್ದು ನಾದಲೀಲೆಯ ಶಬ್ದಬ್ರಹ್ಮನ ಧ್ಯಾನದಿಂದ. ಶಬ್ದವೂ ಬ್ರಹ್ಮವೇ… ಅದರ ನಾದವೂ ಲೀಲೆಯೇ… ಇವುಗಳಿಂದಲೇ ಒಂದು ಭಾವದ ತೊಟ್ಟಿಲ ಜೀವ
    ನಮ್ಮ ಮನದಲ್ಲಿ ಜೋಗುಳದಂತೆ ತೂಗಾಡುವುದು. ಇಂತಹ ಒಬ್ಬ ಶ್ರೇಷ್ಠ ಕವಿಯ ಬಗ್ಗೆ ನನ್ನ ಹಳೆಯ ತಕರಾರುಗಳನ್ನು ಅತ್ತ ಇಟ್ಟು, ಬೇಂದ್ರೆ ಕಾವ್ಯದ ಶಬ್ದ ಚಮತ್ಕಾರದ
    ಲಯ ವಿನ್ಯಾಸಗಳ ಸೌಂದರ್ಯ ಮೀಮಾಂಸೆಯನ್ನು ಅರ್ಥಬದ್ಧವಾಗಿ ಡಾ. ಜಿ. ಕೃಷ್ಣಪ್ಪ ಅವರು ವಿವರಿಸಿರುವರು.

    Original price was: $1.80.Current price is: $1.44.
    Add to basket
  • -40%

    ಮಹಾಸತ್ಯ

    0

    `ಮಹಾಸತ್ಯ’ ವಿನೂತನ ಮಾದರಿಯ ಕೃತಿ.

    Original price was: $0.90.Current price is: $0.54.
    Add to basket
  • -10%

    ರಾಮಾಯಣ-ಒಂದು ಹೊಸ ಓದು

    0

    ರಾಮಾಯಣ- ಒಂದು ಹೊಸ ಓದು

    ಇದು ರಾಮಾಯಣದ ಕುರಿತಾದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $2.40.Current price is: $2.16.
    Add to basket
  • -40%

    ನೋಟ ನಿಲುವು-೩

    0

    ಬಸವರಾಜ ಡೋಣೂರ ಅವರ ವಿಮರ್ಶಾತ್ಮಕ ಲೇಖನಗಳನ್ನು ಒಳಗೊಂಡಿದೆ.

    Original price was: $1.20.Current price is: $0.72.
    Add to basket
  • -40%

    ನೋಟ ನಿಲುವು-೨

    0

    ವಿಮರ್ಶಾ ಲೇಖನಗಳ ಸಂಗ್ರಹ

    Original price was: $3.24.Current price is: $1.95.
    Add to basket
  • -40%

    ನೋಟ-ನಿಲುವು-೧

    0

    ‘ನೋಟ-ನಿಲುವು-೧’- ಆಯ್ದ ವಿಮರ್ಶಾ ಲೇಖನಗಳ ಮೊದಲನೆಯ ಸಂಪುಟ.

    Original price was: $3.60.Current price is: $2.16.
    Add to basket
  • -25%

    ರಾಮಾಯಣ-ಒಂದು ಹೊಸ ಓದು

    0

    ರಾಮಾಯಣ- ಒಂದು ಹೊಸ ಓದು

    ಇದು ರಾಮಾಯಣದ ಕುರಿತಾದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $2.40.Current price is: $1.80.
    Add to basket
  • -10%

    ಪ್ರತ್ಯಭಿಜ್ಞಾನ

    0
    Original price was: $1.80.Current price is: $1.62.
    Add to basket
  • -10%

    ಕನ್ನಡ ಸಾಹಿತ್ಯ ಸಂಗಾತಿ

    0
    Original price was: $5.40.Current price is: $4.86.
    Add to basket
  • -10%

    ಯುಗಧರ್ಮ ಹಾಗೂ ಸಾಹಿತ್ಯ ದರ್ಶನ

    0
    Original price was: $5.10.Current price is: $4.60.
    Add to basket
  • -10%

    ಕಥನ ಕಾರಣ

    0

    ಕಥನ ಕಾರಣ  –
    (
    ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)

    ಪುಸ್ತಕದಲ್ಲಿ  ೭೦  ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳುಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜಸಂಸ್ಕೃತಿರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ  ಎಂಬ ಎಚ್ಚರವನ್ನು    ಕೃತಿ ತಿಳಿಸುತ್ತದೆ.

    Original price was: $4.20.Current price is: $3.78.
    Add to basket
  • -20%

    ಮೆಲುದನಿ

    0

    ಮೆಲುದನಿ

    ಡಾ. ಪುರುಷೋತ್ತಮ ಬಿಳಿಮಲೆಯವರ ಓದು ಎಷ್ಟು ವ್ಯಾಪಕವಾದುದು ಎಂಬುದಕ್ಕೆ ಇಲ್ಲಿನ ಲೇಖನಗಳು ಹಾಗೂ ಮುನ್ನುಡಿಗಳೇ ಸಾಕ್ಷಿ ನುಡಿಯುತ್ತವೆ. ಹಿರಿಯ-ಕಿರಿಯ ಬರಹಗಾರರು ಎಂಬ ಭೇದವಿಲ್ಲದೆ ಎಲ್ಲರನ್ನೂ ಓದುವ, ಓದಿದುರ ಬಗೆಗೆ ನಾಲ್ಕು ಮಾತು ಬರೆದು ಗುಣಾವಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಪ್ರಾಮಾಣಿಕ ನಿಷ್ಠೆ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಸಾಹಿತ್ಯ, ಜಾನಪದ ವಲಯಗಳಲ್ಲಿ ಪ್ರಮುಖ ಚಿಂತಕರೂ ಬರಹಗಾರರೂ ಆದ ಡಾ. ಬಿಳಿಮಲೆಯವರ ಮುನ್ನುಡಿಗಳಲ್ಲಿ ಬರಹಗಾರರು ಸಾಗುವ ದಿಕ್ಕನ್ನು ಖಚಿತವಾಗಿ ತೆರೆದು ತೋರಿಸುವ ಗುಣವಿದೆ. ಎಲ್ಲವನ್ನು ವಸ್ತುನಿಷ್ಠವಾಗಿ ಪರಿಗ್ರಹಿಸುವ ದೃಷ್ಟಿಕೋನವೊಂದು ಇಲ್ಲಿ ಗಮನಸೆಳೆಯುತ್ತದೆ. 

    Original price was: $2.40.Current price is: $1.92.
    Add to basket
  • -10%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ

    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: $2.16.Current price is: $1.95.
    Add to basket
  • -40%

    ಅಭಿಮುಖ

    0

    ಅಭಿಮುಖ
    ಈ ಪುಸ್ತಕವು ವಿಮರ್ಶಾ ಲೇಖನಗಳನ್ನು ಒಳಗೊಂಡಿದೆ .

    Original price was: $1.56.Current price is: $0.94.
    Add to basket
  • -40%

    ರಾಜಧರ್ಮ ರಾಜನೀತಿ: ೨

    0

    ರಾಜಧರ್ಮ-ರಾಜನೀತಿ:೨

    ಈ ಪುಸ್ತಕದ ಶೀರ್ಷಿಕೆ ಓದಿ `ರಾಜಮಹಾರಾಜರ ಕಾಲದ ಹಳೆಯ ನೀತಿಯ ಶಾಸ್ತ್ರಪುಸ್ತಕ’ ಎಂದು ಯಾರೂ ಮೂಗುಮುರಿಯಬೇಕಿಲ್ಲ. ಆಳುವವರು ಆರಿಸಿ ಬಂದರೂ, ಪಾರಂಪರ್ಯವಾಗಿ ಹಕ್ಕಿನಿಂದ ಅಧಿಕಾರಕ್ಕೆ ಬಂದರೂ, “ಆಳಿಕೆ” ಎಂಬುದಿರುತ್ತದಲ್ಲ? ಅದಕ್ಕೆ ನೀತಿ, ನಿಯಮ, ಸಂಯಮ, ವಿಧಾನ, ಅಲ್ಲಿ ನ್ಯಾಯ, ಧರ್ಮ ಪರಿಪಾಲನೆ, ವ್ಯವಸ್ಥೆಯ ರಕ್ಷಣೆ, ಪ್ರಜಾಹಿತ ಎಂಬ ಕವಚಗಳೋ, ಕಡಿವಾಣಗಳೋ ಬೇಕಲ್ಲ? ಸಂವಿಧಾನ ಇರುತ್ತದೆ, ಮೀರುವವರು ಆಡಳಿತಾರೂಢರೇ ಆದರೇನು ಗತಿ? ಐಪಿಸಿ ಎಂಬ ಅಪರಾಧ ಸಂಹಿತೆ ಇರುತ್ತದೆ. ಆದರೆ ಕ್ರಿಮಿನಲ್ ಗಳೇ ಆರಿಸಿಬರುತ್ತಾರಲ್ಲ? ಯಾವ ಸಂಹಿತೆ ಇವರಿಗೇನು ಮಾಡಿದೆ? ಈ ನಿಟ್ಟಿನಲ್ಲಿ ಸರಿ-ತಪ್ಪು-ವಿವೇಕಗಳನ್ನು ಜಾಲಾಡಿ ಬರೆಯುವುದಕ್ಕೆ  ನನ್ನ ಅಂಕಣಕ್ಕೆ ಈ ಶೀರ್ಷಿಕೆಯನ್ನಾರಿಸಿಕೊಂಡೆ.  ಆ ಅಂಕಣಗಳನ್ನು ಈ ಪುಸ್ತಕ ಒಳಗೊಂಡಿದೆ.

     

    Original price was: $4.20.Current price is: $2.52.
    Add to basket
  • -40%

    ದೇವಕಿಯ ಚಿಂತನೆಗಳು

    0

    ದೇವಕಿಯ ಚಿಂತನೆಗಳು

    ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರ, ಬಾಹು ಇಲ್ಲಿ ಪಾತ್ರಧಾರಿಗಳು. ಎಲ್ಲರೂ ಕುಣಿಯುವುದು ಕೃಷ್ಣನ ಸುತ್ತವೇ. ಅವನೇ ಸೂತ್ರಧಾರ, ಪ್ರಧಾನ ಪಾತ್ರಧಾರಿ ಸಹ.

    Original price was: $4.20.Current price is: $2.52.
    Add to basket
  • -40%

    ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ

    0

    ಡಬ್ಲ್ಯು. ಬಿ . ಯೇಟ್ಸ್ ನ ಕಾವ್ಯದ ಮೇಲೆ  ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ

    ಯೇಟ್ಸನಿಗೆ ಭಾರತೀಯ ಪ್ರಭಾವಮೂಲಗಳು ಕೇವಲ ಕಾವ್ಯಸಾಮಗ್ರಿಯ ಮಟ್ಟದಲ್ಲಿ ಉಳಿದರೆ, ಎಲಿಯಟ್ಟನಿಗೆ ಅವು ತತ್ತ್ವನಿಷ್ಕರ್ಷೆಯ, ಜೀವನದರ್ಶನದ ಸ್ಫೂರ್ತಿಯೂ ಆಗಿದೆಯೆಂದು ಕಂಡಮೇಲೆ ವೇದೋಪನಿಷತ್ತುಗಳ ಬೆಲೆ, ಪಾಶ್ಚಾತ್ಯ ಸಂಸ್ಕೃತಿಯ ಮೋಹದ ಸುಳಿಯಲ್ಲಿ ಸಿಕ್ಕ ಅಂದಿನ ನನಗೆ ಅಪಾರವಾಗಿ ಕಂಡು, ನನ್ನನ್ನೇ ನಾನು ಅರಿಯುವ ಪ್ರಯತ್ನದಲ್ಲಿ ಈ ಕವಿದ್ವಯರ ಪಾತ್ರವನ್ನು ಚಿರಸ್ಮರಣೀಯವನ್ನಾಗಿಸಿದೆ. ನಷ್ಟಪ್ರಾಯನಾಗಿದ್ದ ನನ್ನನ್ನು ಇಂದಿನ ಸ್ಥಿತಿಗೆ ತಲುಪಿಸಿರುವ ಈ ಕವಿಗಳನ್ನು ಎಂದೆಂದೂ ಮರೆಯಲಾರೆ; ಇವರ ವಿಷಯಕ ನಿಬಂಧವನ್ನು ಬರೆದ ನನಗೆ ದೊರೆತ ಈ ಫಲ, ಡಾಕ್ಟೊರೇಟ್‍ಗಿಂತ ಅಮೌಲ್ಯವಾದ ಫಲ, ಇದೇ! ಈ ಮಾತನ್ನು ಧನ್ಯತೆಯಿಂದ ಬರೆಯುವ ಭಾಗ್ಯ ನನ್ನದು. ನಾಲ್ಕುಜನಕ್ಕೆ ಈ ಅಲ್ಪಕೃತಿಯಿಂದ ಪ್ರಯೋಜನವಾದರೆ, ಮುಂದೆ ಎಲಿಯಟ್ಟನ ವಿಷಯಕ್ಕೂ, ಇತರ ಆಂಗ್ಲ ಕವಿಗಳ ಬಗೆಗೂ ಈ ಮಾದರಿಯ ಗ್ರಂಥಗಳನ್ನು ಬರೆಯುವ ವಿಚಾರವಿದೆ. ಗೆಳೆಯ ಪ್ರೊ. ಶಿವಾನಂದ ಗಾಳಿಯವರು ಈ ಬಗೆಗೆ ಹಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಿಕೆಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಅದನ್ನು ನಿರ್ಧರಿಸಲಿದೆ.

    Original price was: $0.60.Current price is: $0.36.
    Add to basket
  • -40%

    ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?

    0

    ಗಾಂಧಿಯನ್ನು ನಿಜವಾಗಿ ಕೊಂದವರು  ಯಾರು?

    ನಾನು ರಾಜಕಾರಣಿಯೂ ಅಲ್ಲ. ರಾಜಕಾರಣ ವಿಶ್ಲೇಷಣೆಯು ನನ್ನ ಪ್ರಧಾನ ಕ್ಷೇತ್ರವೂ ಅಲ್ಲ. ಸಾಹಿತ್ಯದ ಅಧ್ಯಯನ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ಬಡಿಸುವ ಕಾಯಕ, ನಿರಂತರ ಚಿಂತನ-ಋಷಿಮುನಿಗಳ ಪ್ರಾಚೀನ ಪರಂಪರೆಯಲ್ಲಿ ಬಂದ ಲೋಕ ಸಂಗ್ರಹ ವಿಚಾರಗಳ, ಭಾವನೆಗಳ, ಅಧ್ಯಾತ್ಮಶಕ್ತಿಯ ಜಾಗೃತಿಗಳ ಕಾಯಕವನ್ನು ನನಗೆ ಸಾಧ್ಯವಾದ ಮಟ್ಟಿಗೆ ಮಾಡಿಕೊಂಡು ಲೋಕಕ್ಕೆ ಸ್ಪಂದಿಸುವ ಒಬ್ಬ ನಿವೃತ್ತ ಪ್ರಾಧ್ಯಾಪಕ. ಇದೆಲ್ಲ ನಿಮಗೆ ಗೊತ್ತೇ ಇದ್ದೂ ನಾನಿಲ್ಲಿ ನೆನಪಿಸುವ ಅಗತ್ಯ ಏಕೆ ಇದೆ? ಎಂದು ಹೇಳಲೇ ಬೇಕಾಗಿದೆ.
    ಅನೇಕ ಮುಗ್ಧ ಭಾರತೀಯರಂತೆ ನಾನೂ ಮ|| ಗಾಂಧಿಯವರನ್ನು ಮೆಚ್ಚಿಕೊಂಡ ಕಾಲ ಇತ್ತು. ‘ಗಾಂಧಿ, ನೆಹ್ರೂ’ ಎಂದೊಡನೆ `ಜೈ ಎನ್ನುವ ಬಾಲ್ಯ ಇತ್ತು. ೧೯೫೦ರ ಸುಮಾರಿಗೆ ನೆಹ್ರೂ ಭ್ರಮೆ ಬಿಡಲಾರಂಭಿಸಿತ್ತು. ಈ `ನೆಹ್ರೂ’ ಮೂಲ ಯಾವುದು? `ಇವರು ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತಾ ಹೋದಂತೆ, ಓದು ವ್ಯಾಪ್ತಿ, ಚಿಂತನ, ಚರ್ಚೆ, ಸಮಾಲೋಚನೆಗಳು ನಡೆಯುತ್ತಾ ಬಂದಂತೆ, `ಇವರು ಗಾಂಧಿ ಪ್ರಭಾವದ ದುರ್ಬಳಕೆಯ ಮಹಾಸ್ವಾರ್ಥಿ, ಎಷ್ಟೂ ಭಾರತೀಯತೆಯ ಪರಿಚಯವಿಲ್ಲದ ಢೋಂಗೀ ರಾಜಕಾರಣಿ’ ಎಂಬುದಕ್ಕೆ ಅವರದೇ ನಡೆವಳಿಕೆಗಳು, ರಾಷ್ಟ್ರಾವನತಿ, ತಪ್ಪು ಹೆಜ್ಜೆಗಳು ಪ್ರಮಾಣೀಕರಿಸುತ್ತಾ  ಬಂದವು. ಘಾತಕತನ, ಸಾಕ್ಷಿಗಳ ಕುಕ್ಕುವ ಬೆಳಕಿನಲ್ಲಿ ದೇವರೆಂದು ಭಾವಿಸಿದ್ದವನಿಗೆ ದೆವ್ವದ ಸಾಕ್ಷಾತ್ಕಾರವಾಯ್ತು. ಆಗುತ್ತಲೇ ಇದೆ. ಈ ಬೆಳಕಿನಲ್ಲೇ `ಸುಭಾಷರ ಕಣ್ಮರೆ’ ಪುಸ್ತಕವನ್ನು ನಾನು ಬರೆದದ್ದು. ರಾಮಾಯಣ, ಮಹಾಭಾರತ, ಭಾಗವತಗಳ ಆಸುರೀ ಶಕ್ತಿಗಳು, ಅವುಗಳ ಶಕ್ತಿ, ಹಿಡಿತ, ಅವುಗಳ ಬೇರು, ವಿಷಫಲಗಳು ಈಗಣ ಭಾರತದಲ್ಲೂ ಕಾಣಲಾರಂಭಿಸಿ, ನಾನು ಕ್ಷೇತ್ರಾಂತರದಲ್ಲೂ ದುಷ್ಟ ಪಾತ್ರಗಳ ಪರಿಚಯಕ್ಕೆ ಕೈ ಹಾಕುವ ಕೆಲಸಕ್ಕೆ ಬಂದುದು ಆಕಸ್ಮಿಕವಾಗಿ ಕಂಡರೂ ದೈವಪ್ರೇರಣೆಯೂ ಕಾಣಲಾರಂಭಿಸಿದೆ.

    Original price was: $1.80.Current price is: $1.08.
    Add to basket
  • -40%

    ಶ್ರೀರಾಮ ಜನ್ಮಭೂಮಿ ತೀರ್ಪು

    0

    ಶ್ರೀರಾಮ ಜನ್ಮಭೂಮಿ ತೀರ್ಪು
    ಹಿಂದು, ಇಂದು, ಮುಂದು, ಸುತ್ತ

    ಈ ಪುಟ್ಟ ಗ್ರಂಥದ ಮೂರು ಮುಖ್ಯ ಲೇಖನಗಳನ್ನು ನಾನು ಸಮೀಪ ಕಾಲದಲ್ಲಿ ಕರ್ನಾಟಕದ ಬೇರೆ ಬೇರೆ ಪತ್ರಿಕೆಗಳಿಗಾಗಿ ಬರೆದದ್ದು. 2ನೆಯದು ಒಂದು ಮಾತ್ರ ಈ ಪುಸ್ತಕದಲ್ಲಿ ಸೇರ್ಪಡೆಗಾಗಿಯೇ ಬರೆದದ್ದು. ಎಲ್ಲಾ ಪರಸ್ಪರ ಸಂಬಂಧಿಸಿದ್ದು. ಕೋಲಾಹಲಕರವಾದ ಇಂದಿನ ಅವ್ಯವಸ್ಥೆಯ ಸ್ಥಿತಿಯಲ್ಲಿ ಒಂದು ವಾಸ್ತವವಾದ, ಸರ್ವೇಕ್ಷಣ ಚಿತ್ರವನ್ನು ನೀಡುತ್ತದೆಂದು ನಂಬಿದ್ದೇನೆ. ನಮ್ಮ ಜನ ಮುಗ್ಧರು ಮಾತ್ರವಲ್ಲ, ಮೂಢರೂ, ಮತಿಭ್ರಷ್ಟಾವಸ್ಥೆಯಲ್ಲಿರುವ ವಿಭ್ರಮಶೀಲರು! ಗುಲಾಮಗಿರಿಯ ಗುಂಗಿನಿಂದ ಇನ್ನೂ ಹೊರಬರಲಾಗದ ಈ ಅಸಹಾಯಕ ದುಃಸ್ಥಿತಿಯ ಲಾಭ ಪಡೆಯುತ್ತಿರುವವರು ನೆಹ್ರೂ ಪರಂಪರೆಯ ಇತಿಹಾಸ ಪ್ರಜ್ಞಾಶೂನ್ಯ, ಭ್ರಾಂತ ರಾಜಕಾರಣಿಗಳು, ಅಸತ್ಯದ ವಿಲಾಸದಲ್ಲಿ ಅಸಂಬದ್ಧ ಕನಸು ಕಾಣುತ್ತಿರುವ ಉನ್ಮತ್ತರು, ದುರಾಸೆಯ, ದುರಾಲೋಚನೆಯ ಅಲ್ಪಸಂಖ್ಯಾತ ಮುಖಂಡ ರಾಜಕಾರಣಿಗಳು, ಕಾಮ್ರೇಡರು ಮತ್ತು ಪೊಳ್ಳು ಸೆಕ್ಯುಲರಿಜಂ ಪ್ರವಾಹದಲ್ಲಿ ಕೊಚ್ಚುತ್ತಿರುವವರ ಓಟು ಬೇಟೆಯಲ್ಲಿರುವ ಎಲ್ಲ ದುಷ್ಟ ಸಂಚಿನ ರಾಜಕಾರಣಿಗಳು, ವಿದೇಶೀ ದ್ರೋಹ ಶಕ್ತಿಗಳು.

    Original price was: $1.20.Current price is: $0.72.
    Add to basket
  • -40%

    ರಾಜಧರ್ಮ-ರಾಜನೀತಿ ಭಾಗ ೧

    0

    ರಾಜಧರ್ಮ, ರಾಜನೀತಿ ಭಾಗ ೧ 

    ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ಕಷ್ಟದ ಕೆಲಸ ಎಂದು ನನ್ನ ಅನುಭವ. ಬೇರೆಯವರ ಅಭಿಪ್ರಾಯವು ಬೇರೆಯೇ ಇದ್ದರೆ ಅದಕ್ಕೆ ಅವರವರೇ ಹೊಣೆ. ಬರೆಯುವವನ “ವ್ಯವಸಾಯ” – ಅಂದರೆ ಓದಿನ ವ್ಯಾಪ್ತಿ, ಅದರ ಸಾಂದರ್ಭಿಕ ಅನ್ವಯಿಕೆ, ಸಂಗತಿಗಳನ್ನು, ಸಂದರ್ಭಗಳನ್ನು ನೋಡುವಲ್ಲಿ, ಅರಿಯುವಲ್ಲಿ, ವಿಶ್ಲೇಷಣೆ ಮಾಡುವಲ್ಲಿ ಇರಬೇಕಾದ ನಿರ್ದಿಷ್ಟ ಸಾಮುದಾಯಿಕ, ಸಾರ್ವತ್ರಿಕ ಹಿತ, ನಿಷ್ಠುರವಾದರೂ ಸತ್ಯವನ್ನು ಹೇಳುವ ಛಲ, ಎದೆಗಾರಿಕೆ, ಅದಕ್ಕೆ ಬೇಕಾದ ಸಮರ್ಥನೆಗಳನ್ನು ಓದಿನಿಂದಲೂ, ಅನುಭವದಿಂದಲೂ ನಿರೂಪಿಸುವ ಪರಿಶ್ರಮ – ಅಡಕವಾಗಿ, ಓದುಗರ ಎಲ್ಲ ವರ್ಗಗಳನ್ನೂ ಮನದಲ್ಲಿಟ್ಟು, ತಿಳಿಯುವಂತೆ ಎಚ್ಚರ ವಹಿಸಬೇಕಾದ ಬರೆಹದ ಬಿಗಿ, ತಿಳಿ, ಭಾರವಾಗದ ಶೈಲಿ, ಅಲ್ಲಲ್ಲಿ ನೆನಪುಗಳು, ವ್ಯಕ್ತಿ ಚಿತ್ರಣ, anecdotes , ರೋಚಕವಾದ ಸಂಗತಿಗಳು ಎಲ್ಲೋ ಚದುರಿದ್ದರೂ, ಸಣ್ಣವಾಗಿದ್ದರೂ, ಹಿಡಿಯುವ ಸೂಕ್ಷ್ಮತೆ, ವಾರಾವಾರ ಪತ್ರಿಕಾಲಯಕ್ಕೆ ಸಕಾಲಕ್ಕೆ ತಲುಪಿಸಬೇಕಾದ ಹೊಣೆ, ಎಚ್ಚರ – ಇಂಥವು ಸುಲಭಸಾಧ್ಯವಾಗಿ ವಶವಾಗುವ ಗುಣಗಳಲ್ಲ. ಎಲ್ಲರೂ ಹೀಗೆ ಬರೆಯತ್ತಾರೋ ಇಲ್ಲವೋ, ಎಂಬುದು ನಿಮಗೂ ಗೊತ್ತಿದೆ. ಬರೀ Journalistic  ಎಂಬ ರೀತಿಯ ಸುದ್ದಿ ವಿಶ್ಲೇಷಣೆಗೇ ಮೀಸಲಾದ ಅಂಕಣ ಬರೆಹಗಾರರ ರೀತಿ ಬೇರೆ. ಅಲ್ಲಿ ಸೂಕ್ಷ್ಮತೆ, ವಿಶ್ಲೇಷಣಾ ಕುಶಲತೆ, ಸಮಗ್ರ ಸಂಗತಿಗಳ ಪಕ್ಷಿ ವೀಕ್ಷಣ, ಸುದ್ದಿ ಸಾಮೀಪ್ಯ, ತಕ್ಕಮಟ್ಟಿನ ನಿಷ್ಪಕ್ಷಪಾತತೆ, ಅತಿರೇಕ, ಆಕ್ರೋಶ, ಇಲ್ಲದ ಶೈಲಿ, ಓದುಗನನ್ನು ಮೆಚ್ಚಿಸಹೊರಡದ ಸುದ್ದಿನಿಷ್ಠೆ, ವಸ್ತು ನಿಷ್ಠೆ – ಬರೀ “report ” ಆಗದಂತೆ ವಹಿಸಬೇಕಾದ ಎಚ್ಚರ, ಇವು ಒಂದು ಬಗೆ.

    Original price was: $4.20.Current price is: $2.52.
    Add to basket
  • -40%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ
    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: $2.16.Current price is: $1.30.
    Add to basket
  • -40%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $4.32.
    Add to basket
  • -40%

    ಮೆಲುದನಿ

    0

    ಮೆಲುದನಿ
    ಡಾ. ಪುರುಷೋತ್ತಮ ಬಿಳಿಮಲೆಯವರ ಓದು ಎಷ್ಟು ವ್ಯಾಪಕವಾದುದು ಎಂಬುದಕ್ಕೆ ಇಲ್ಲಿನ ಲೇಖನಗಳು ಹಾಗೂ ಮುನ್ನುಡಿಗಳೇ ಸಾಕ್ಷಿ ನುಡಿಯುತ್ತವೆ. ಹಿರಿಯ-ಕಿರಿಯ ಬರಹಗಾರರು ಎಂಬ ಭೇದವಿಲ್ಲದೆ ಎಲ್ಲರನ್ನೂ ಓದುವ, ಓದಿದುರ ಬಗೆಗೆ ನಾಲ್ಕು ಮಾತು ಬರೆದು ಗುಣಾವಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಪ್ರಾಮಾಣಿಕ ನಿಷ್ಠೆ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಸಾಹಿತ್ಯ, ಜಾನಪದ ವಲಯಗಳಲ್ಲಿ ಪ್ರಮುಖ ಚಿಂತಕರೂ ಬರಹಗಾರರೂ ಆದ ಡಾ. ಬಿಳಿಮಲೆಯವರ ಮುನ್ನುಡಿಗಳಲ್ಲಿ ಬರಹಗಾರರು ಸಾಗುವ ದಿಕ್ಕನ್ನು ಖಚಿತವಾಗಿ ತೆರೆದು ತೋರಿಸುವ ಗುಣವಿದೆ. ಎಲ್ಲವನ್ನು ವಸ್ತುನಿಷ್ಠವಾಗಿ ಪರಿಗ್ರಹಿಸುವ ದೃಷ್ಟಿಕೋನವೊಂದು ಇಲ್ಲಿ ಗಮನಸೆಳೆಯುತ್ತದೆ. 

    Original price was: $2.40.Current price is: $1.44.
    Add to basket
  • -40%

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ

    0

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ :
    (ನಾಟಕಗಳ ವಿಮಶಾತ್ಮಕ ಅಧ್ಯಯನ)
    ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕರಲ್ಲಿ ಒಬ್ಬರಾದ ಡಾ.ಜಿ.ಎಸ್.ಅಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ ‘ಮಾ ನಿಷಾದ’ ವೂ ಸೇರಿದಂತೆ ಎಲ್ಲ ಹನ್ನೆರೆಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
    ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪಾಶ್ಚಾತ್ಯ ಹಾಗು ಪೌರ್ವಾತ್ಯ ರಂಗಭೂಮಿಗಳ ನಾಟಕಕಾರ, ಸಮಕಾಲೀನ ಸಂದರ್ಭದ ಪ್ರೇರಣೆ ಪ್ರಭಾವಗಳನ್ನು ಈ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ.
    ಇದು ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಸೂಚಿಯಾಗಬಲ್ಲ ಅಪರೂಪದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $1.80.Current price is: $1.08.
    Add to basket
  • -40%

    ಯು. ಆರ್. ಅನಂತಮೂರ್ತಿ

    0

    ಯು. ಆರ್. ಅನಂತಮೂರ್ತಿ 

    ವೈಚಾರಿಕತೆ ಹಾಗೂ ಸಾಹಿತ್ಯ  :
    ಅನಂತಮೂರ್ತಿಯವರು ನನ್ನ ಸಮಕಾಲೀನರಲ್ಲೇ ಅತ್ಯಂತ ಗಂಭೀರ ಮನೋಧರ್ಮದ ಲೇಖಕರು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ಮಾನವನ ದೈನಿಕ ಜೀವನದ ಬಗ್ಗೆ. ಅವನ ಭವಿತವ್ಯದ ಬಗ್ಗೆ ತಾವು ಅಭ್ಯಾಸ ಮಾಡಿದ್ದನ್ನು, ಗಾಢವಾಗಿ ಚಿಂತಿಸಿದ್ದನ್ನು ನಾಟ್ಯೀಕರಿಸುತ್ತ ವಿಚಾರವನ್ನೇ ಒಂದು ಜೀವಂತ ಅನುಭವದ ಪ್ರಭಾವಬೀರುವ ಸ್ಥಿತಿಗೆ ಒಯ್ದು ನಮಗೆ ಮುಟ್ಟಿಸುವ ಕಳಕಳಿಯ ಪ್ರಯತ್ನ ಇವರ ಸಾಹಿತ್ಯದ ಪ್ರಮುಖ ಲಕ್ಷ್ಯಗಳಲ್ಲೊಂದಾಗಿದೆ. ನಮ್ಮ ಪ್ರಜ್ಞೆಯನ್ನು ಹಿಗ್ಗಿಸುವಲ್ಲಿ ಸಾಹಿತ್ಯಕ್ಕಿರುವ ಮಹತ್ವದ ಪಾತ್ರವನ್ನು ಕುರಿತು ಇವರಿಗಿರುವ ಗಾಢವಾದ ಶ್ರದ್ಧೆಯೇ ಇವರು ಬರೆದ ಪ್ರತಿಯೊಂದು ನಮ್ಮ ಪ್ರೀತಿಗೆ, ಗೌರವಕ್ಕೆ ಪಾತ್ರವಾಗುವಂತೆ ಮಾಡುತ್ತದೆ.

    Original price was: $1.80.Current price is: $1.08.
    Add to basket