‘ಧರ್ಮಚಾವಡಿ’ ಕಾದಂಬರಿ ತುಳುನಾಡಿನ ಶ್ರಮಸಂಸ್ಕೃತಿ ಜತೆಗೆ ದೈವಾರಾಧನೆ ಕುರಿತ ಕಾದಂಬರಿ. ತುಳುನಾಡಿನುದ್ದಕ್ಕೂ ತುಳುವರನ್ನು ನಿಯಂತ್ರಿಸಿ ಕಾಪಾಡುವ ಆಂತರಿಕ ಶಕ್ತಿಗಳು ಹೇಗೆ ಒಂದು ಊರನ್ನು ನಿಯಂತ್ರಿಸಿ ಆ ಜನರ ಒಳಿತು ಕೆಡುಕುಗಳನ್ನು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿಯಾಗಿದೆ. ತುಳುನಾಡು ವೈವಿಧ್ಯಮಯ ಆರಾಧನೆಗಳ ಕೇಂದ್ರ. ದೈವಾರಾಧನೆ ಮತ್ತು ನಾಗಾರಾಧನೆಗಳು ಇಲ್ಲಿನ ಜನರ ನಡೆನುಡಿಯೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಇಲ್ಲಿನ ತುಳುವರು ಯಾವುದೇ ಬಗೆಯ ಜಾತಿ ತಾರತಮ್ಯವಿಲ್ಲದೆ ಈ ಆರಾಧನೆಗಳ ಜೊತೆಗೆ ದೈವತ್ವದ ನಂಟನ್ನು ಉಳಿಸಿಕೊಂಡಿದ್ದಾರೆ.
$1.80Original price was: $1.80.$1.08Current price is: $1.08.
ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಪಿಂಡಗೊಂಡ ಸಶಕ್ತ ಸಂಕಥನವಾಗಿದೆ. ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ.
$5.40Original price was: $5.40.$4.86Current price is: $4.86.
50-80 ವರ್ಷಗಳ ಹಿಂದಿನ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳಿಂದ ‘ಮಧ್ಯಘಟ್ಟ’ ಕಾಡಿನೂರಿನ ಕಾದಂಬರಿ ರೂಪುಗೊಂಡಿದೆ. ಮಧ್ಯಘಟ್ಟ ಕಾಲು ಶತಮಾನಗಳಿಂದ ಒಡನಾಡಿದ ಹಳ್ಳಿ ಬದುಕಿನ ಕುರಿತ ಕಾದಂಬರಿ. ಕಾಡು, ಸಸ್ಯ, ನದಿ ನೀರಿನಲ್ಲಿ ದಾರಿಯೇ ಇಲ್ಲದ ಕಾಲದ ಕಾಡು ಬದುಕನ್ನು ಕಣ್ಣೆದುರು ಹಿಡಿಯುವ ಮಹತ್ವದ ಕಾರ್ಯ ಮಾಡಿದ್ದಾರೆ. ಸಾಮಾಜಿಕ ಇತಿಹಾಸದ ಅದ್ಭುತ ಚಿತ್ರಣ ಇಲ್ಲಿದೆ.
$3.00Original price was: $3.00.$1.80Current price is: $1.80.