Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು – ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!

     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (28.3.2015) 118ವಸಂತಗಳನ್ನು ಕಂಡು 119ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.      ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, […]

ದೇವರು: ಒಂದು ತರ್ಕವಿತರ್ಕ- 3

      ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್,  ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು […]

ದೇವರು: ಒಂದು ತರ್ಕ ವಿತರ್ಕ – 2

‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ – ಒಬ್ಬನೇ ದೇವರು, ಒಂದೇ ಸತ್ಯ, ವಿಶೇಷ ಪ್ರಜ್ಞಾವಂತರು ಅದನ್ನು ಬಹುರೀತಿಯಲ್ಲಿ ಹೇಳುತ್ತಾರೆ. ಹಿಂದೂಗಳು ಬಹು ದೇವತಾರಾಧನೆ ಮಾಡುವವರಾದರೂ ಒಬ್ಬನೇ ದೇವರೆಂಬುದನ್ನು ನಂಬುತ್ತಾರೆ. ಮುಸ್ಲಿಮರೂ, ಕ್ರಿಶ್ಚಿಯನರೂ ಸಹ ಒಬ್ಬನೇ ದೇವರೆನ್ನುತ್ತಾರೆ. ಯಾರು ಆ ಒಬ್ಬ ದೇವರು? ಇಲ್ಲೇ ಸಮಸ್ಯೆ! ನಮ್ಮ ದೇವರೇ ಆ ಒಬ್ಬ ದೇವರು ಎಂದು ವಾದಿಸುವವರಿಂದಲೇ ಈ ಸಮಸ್ಯೆ. ಒಬ್ಬನೇ ದೇವರು ಅಂದಾಗ ಅವನನ್ನು ಯಾವ ಹೆಸರಿನಿಂದ ಕರೆದರೆ ಏನು? ಅಲ್ಲಾ ಅನ್ನಲಿ, ಏಸು ಅನ್ನಲಿ, ರಾಮ […]

ದೇವರು: ಒಂದು ತರ್ಕವಿತರ್ಕ – 1

‘ಮಾಮಿ ಜೋತ ಮಾಡು ಪುಟ್ಟಾ’      ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು ‘ಮಾಮಿ ಜೋತ ಮಾಡು’ ಎಂದಾಗಲೆಲ್ಲಾ ಕೈ ಜೋಡಿಸುತ್ತದೆ, ದೇವರ ಕೋಣೆಯ ಕಡೆಗೋ, ದೇವರ ಪಟವನ್ನೋ ನೋಡುತ್ತದೆ. ಮುಂದುವರೆದು ಹಣೆ ನೆಲಕ್ಕೆ ಮುಟ್ಟಿಸುತ್ತದೆ. ದೊಡ್ಡವರು ಅದನ್ನು ಕಂಡು ಸಂಭ್ರಮಿಸಿದಾಗ ಮಗುವೂ ಸಂತಸಪಡುತ್ತದೆ. ಸಾಮಾನ್ಯವಾಗಿ ಅವರವರ ಮನೆಯ ಪದ್ಧತಿ, ಸಂಸ್ಕಾರ, ರೀತಿ-ನೀತಿಗಳನ್ನು ಅನುಸರಿಸಿ ಮಕ್ಕಳಿಗೆ ಈ ರೀತಿಯ […]

ಮೊರೆ

ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು|| ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ| ಸರ್ವದೂಷಿತನಾಗಿ ನೆಲೆಗಾಣದಿದೆ ಮನವು|| ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ| ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಆಹಾ, ನಾವ್ ಆಳುವವರು!!

ಆಹಾ, ನಾವ್ ಆಳುವವರು ಓಹೋ ನಾವ್ ಅಳಿಸುವವರು ||ಪ|| ಕುರ್ಚಿಯ ಕಾಲ್ಗಳನೊತ್ತುವೆವು ತಡೆದರೆ ಕೈಯನೆ ಕಡಿಯುವೆವು| ದೇಶವ ಪೊರೆಯುವ ಹಿರಿಗಣರು ಖಜಾನೆ ಕೊರೆಯುವ ಹೆಗ್ಗಣರು| ಜಾತ್ಯಾತೀತರು ಎನ್ನುವೆವು ಜಾತೀಯತೆಯ ಬೆಳೆಸುವೆವು|

ಸತ್ಯ

ಕಷ್ಟವೇನಲ್ಲ, ಹುಡುಕಿದರೆ ಸಿಕ್ಕೀತು ಬದುಕಲಗತ್ಯದ ಪ್ರೀತಿ! ಕಠಿಣಾತಿ ಕಷ್ಟ, ಹುಡುಕಿದರೂ ಸಿಕ್ಕದು ಎಲ್ಲಿಹುದದು ಸತ್ಯ?

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ ಸಂಬಂಧ ಉಳಿಸುವ ಕಳಕಳಿಯ ಮಾತು ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ದಾರಿಯದು ಸರಿಯಿರಲಿ ಅನೃತವನಾಡದಿರಿ ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ಗೌರವಿಸಿ ಹಿರಿಯರ ಕಟುಮಾತನಾಡದಿರಿ ಅಸಹಾಯಕರ ಶಾಪ ತಂದೀತು ಪರಿತಾಪ ದೇವರನು […]

ಸ್ವಾರ್ಥ

ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು ಕಂಡ ಕಂಡವರ ಗುಂಡಿಗೆಯ ಬಗೆದಿತ್ತು ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ ನಗುವು ಬಂದೀತೆಂದು ಹಲ್ಲು ಮುರಿದಿತ್ತು ಓಡಿ ಹೋದಾರೆಂದು ಕಾಲ ತುಂಡರಿಸಿತ್ತು ಬೇಡವೆಂದವರ ಕೈಯ ಕಡಿದಿತ್ತು ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು ನೊಂದು ಬೆಂದ ಅತೃಪ್ತ ಆತ್ಮಗಳು ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು -ಕ.ವೆಂ.ನಾಗರಾಜ್