ಚಟವಂತರ ಕೂಟದ ಹರಟೆಗಳು ನಮ್ಮೂರ ಹೈದ, ನಡಮನೀ ನಾರ್ಯಾ ಯಾವಾಗ ಕೇಳಿದರೂ ಆತನ ಬಾಯಿಂದ ಉದುರುವ ಅಣಿ ಮುತ್ತುಗಳು, ನನಗ ಈಗ ಭಾಳ ಅಡಚಣೀ ಅದ ಎನ್ನುವುದೇ ಆಗುತ್ತಿತ್ತು. ಮದುವಿಗಿಂತ ಮೊದಲು ಒಂಥರಾ ಅಡಚಣಿ, ಮದುವೀ ಆದಮ್ಯಾಲೇ ಇನ್ನೊಂಥರ, ಒಟ್ಟ ಅಡಚಣೇ ಒಳಗ ಇರೂದನ ಅವನ ಜನ್ಮ ಸಿದ್ಧ ಹಕ್ಕು ಎಂಬಂತಾಗಿತ್ತು. ಊರ ನಡು ಹಣಮಂತದೇವರ ಗುಡಿ, ಗುಡಿಗೆ ಒಂದ ಲಠ್ಠ ಕಟ್ಟಿ, ಆ ಕಟ್ಟೀ ಮ್ಯಾಲ ಸಂಜೀ ಆತು ಅಂದರ ಅವನ ವಾಸ್ತವ್ಯ ಅಲ್ಲೇ. ಯಾಕೆಂದರೆ […]
