Your Cart

Need help? Call +91 9535015489

📖 Print books shipping available only in India. ✈ Flat rate shipping

ವಿವಿಡ್ಲಿಪಿ ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!”

ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!” ನಮ್ಮೊಡನೆ ಮಾತನಾಡುವವರು – ಪತ್ರಕರ್ತ ಶ್ರೀ. ಅನಂತ ಚಿನಿವಾರ್ ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕರಾಗಿ ದುಡಿದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗಳಲ್ಲಿ ಅನುಭವ ಪಡೆದುಕೊಂಡಿದ್ದವರು. “ಅತ್ತ ಇತ್ತಗಳ ಸುತ್ತ”, “ಗೇಮ್, ಹಾಗೂ “ಹೋರಾಟದ ಬದುಕು” ಎಂಬ ಅಂಕಣಗಳಿಂದ, ಮತ್ತು ‘ಹೇ ರಾಮ್’ ಎಂಬ ನಾಟಕದಿಂದ ಬರಹಗಾರರಾಗಿಯೂ ಗುರುತಿಸಿಕೊಂಡವರು. ದಿನಾಂಕ: ೨ ಮೇ […]

ಕನ್ನಡ ಸಾಹಿತ್ಯದ ಮಹಾನ್ ವ್ಯಕ್ತಿಗಳ ಪರಿಚಯ – ಡಾ. ಕಮಲಾ ಹಂಪನಾ ಅವರಿಂದ ” ದಾನಚಿಂತಾಮಣಿ ಅತ್ತಿಮಬ್ಬೆ ಪರಿಚಯ” ಕಾರ್ಯಕ್ರಮ

ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಪ್ರಸಿದ್ಧ ಮಹಿಳೆ, ಅವರ ಕನ್ನಡ ಸಾಹಿತ್ಯದ ಸೇವೆ ಮಹತ್ತರವಾದ್ದದ್ದು. ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ ‘ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪೊನ್ನನ ‘ಶಾಂತಿಪುರಾಣ’ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು. ಕನ್ನಡ ಸಾಹಿತ್ಯವನ್ನು ಪುನರುಜ್ಜೀವಿಸಿದ ಪುಣ್ಯಮೂರ್ತಿ ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ‘ದಾನಚಿಂತಾಮಣಿ’ […]

ವಿಶ್ವ ಪುಸ್ತಕ ದಿನ – ಉಚಿತ ಪುಸ್ತಕ ಪಡೆಯಿರಿ -ಕೋಪನ್ ಕೋಡ್ – WBD2020

ಓ ಹೆನ್ರಿ ಕಥೆಗಳು – https://vividlipi.com/shop/stories/o-henry-kathegalu/ ನಾದದ ನವನೀತ – https://vividlipi.com/shop/articles/naadada-navneeta/ ನೋಡಿರಿ ಧರ್ಮಜ ಫಲಗುಣಾದಿಗಳು – https://vividlipi.com/shop/articles/nodiri-dharmaja-phalugunaadiglu/ ೧. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl – ಇಲ್ಲಿಂದ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮ್ಮ ಮೊಬೈಲ್ಗೆ ಇಳಿಸಿ (ಡೌನ್ಲೋಡ್ ಮಾಡಿ) ೨. ಮೇಲಿನ ಲಿಂಕ್ ಬಳಿಸಿ, WBD2020 ಕೂಪನ್ ಕೋಡ್ ಉಪಯೋಗಿಸಿ ಪುಸ್ತಕಗಳನ್ನು ಖರೀದಿಸಿ. ೩. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಿಸಿ ಪುಸ್ತಕ ಓದಿರಿ – ನೀವು ನಮ್ಮ ಪುಸ್ತಕಗಳನ್ನು VIVIDLIPI ಮೊಬೈಲ್ ಅಪ್ಲಿಕೇಶನ್ ಮುಖಾಂತರ […]

“ಬಿಂಬ— ಆ ತೊಂಬತ್ತು ನಿಮಿಷಗಳು”

ಕಾರ್ಯಕ್ರಮ: “ಬಿಂಬ— ಆ ತೊಂಬತ್ತು ನಿಮಿಷಗಳು” ಚಲನಚಿತ್ರ ಪ್ರದರ್ಶನ ಮತ್ತು ಶ್ರೀನಿವಾಸ್ ಪ್ರಭು ಅವರೊಡನೆ ಮಾತುಕತೆ ದಿನಾಂಕ: ೧೮ ಏಪ್ರಿಲ್ ೨೦೨೦, ಶನಿವಾರ ಸಮಯ: ಯು ಕೆ ಸಮಯ ಮಧ್ಯಾಹ್ನ ೧.೩೦ – ೪.೦೦ ಗಂಟೆಗೆ , ಭಾರತೀಯ ಸಮಯ ಸಾಯಂಕಾಲ ೬.೦೦ – ೮.೩೦ ಗಂಟೆಗೆ ಸ್ಥಳ-Cisco WebEx, ಹೆಚ್ಚಿನ ವಿವರಕ್ಕೆ: https://vividlipi.com/events/ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl ಶ್ರೀನಿವಾಸ ಪ್ರಭು ಕನ್ನಡ ಕಿರು ತೆರೆ, ರಂಗಭೂಮಿ ಮತ್ತು ಚಿತ್ರರಂಗದ ಪರಿಚಿತ ಹೆಸರು, ನ್ಯಾಷನಲ್ ಸ್ಕೂಲ್ ಆಫ್ […]

ಅಮ್ಮಾ ನನಗೊಂದು ಕಥೆ ಹೇಳೆ

‘ಒಂದೂರಿನಲ್ಲಿ ಒಬ್ಬಳು ಮಡಕೆಯಕ್ಕಾ ಅನ್ನೋ ಹುಡುಗಿಯಿದ್ದಳಂತೆ. ಅವಳ ಅಮ್ಮ ಆವಳಷ್ಟೇ ಉದ್ದದ ಮಡಕೆಯನ್ನು ಕುಂಬಾರನ ಕೈಯಲ್ಲಿ ಮಾಡಿಸಿ ಅವಳಿಗೆ ಹಾಕಿಸಿದ್ದಳಂತೆ. ಇದರಿಂದ ನೋಡೋರಿಗೆ ಅವಳ ಕಣ್ಣುಗಳು ಮಾತ್ರ ಕಾಣಿಸ್ತಿದ್ವಂತೆ. ಎಲ್ಲರೂ ಅವಳು ಕುರೂಪಿ ಇರಬೇಕು, ಅದಕ್ಕೇ ಮಡಕೆಯಲ್ಲಿ ಅಡಗಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ. ಆದರೆ ವಾಸ್ತವನೇ ಬೇರೆಯಾಗಿತ್ತು…’ ಹೀಗೆ ಅಜ್ಜಿ ಕಥೆ ಹೇಳಲು ಪ್ರಾರಂಭ ಮಾಡಿದಳೆಂದರೆ ಸಾಕು, ನಮ್ಮೆಲ್ಲರ ಕಣ್ಣು ದೊಡ್ಡದಾಗಿ ಅವಳನ್ನೇ ನೋಡುತ್ತಿದ್ದವು. ಆಗೆಲ್ಲ ರಜೆಗೆಂದು ಹಳ್ಳಿಗೆ ಹೋಗುತ್ತಿದ್ದ ನಮ್ಮೆಲ್ಲರಿಗೆ ಆಟಕ್ಕೆ ಏನಿಲ್ಲದಿದ್ದರೂ ಅಜ್ಜಿಯ ಕಥೆ ಬೇಕಿತ್ತು. […]

ಕರ್ಣಚೈತ್ರನ ಪರ್ಣಶಾಲೆ

ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಅಯೋಧ್ಯಾ ಸಂಪುಟದ ‘ಚಿತ್ರಕೂಟಕೆ’ ಸಂಚಿಕೆಯಲ್ಲಿ ಭರದ್ವಾಜ ಋಷಿಗಳ ಆಶ್ರಮದ ಚಿತ್ರಣ ನೀಡಿದ್ದಾರೆ. ಮುನಿಗಳು ಶಿಷ್ಯ ಹಾರೀತನಿಗೆ ಹಿರಿಯ ಅತಿಥಿಗಳಾದ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಕಾಯ್ದು ಕರೆದುಕೊಂಡು ಬರಲು ತಿಳಿಸುತ್ತಾರೆ. ಆ ಆಶ್ರಮ ಧ್ಯಾನ, ಜಪತಪ ಶಾಂತಿಯ ನೆಲೆಯಾಗಿರುತ್ತದೆ. ಆಗ ಚೈತ್ರಮಾಸ. ವಸಂತ ಋತುವಿನ ಮೊದಲ ತಿಂಗಳು. ಭಾರತೀಯರಿಗೆ ಹೊಸ ವರ್ಷದ ಪ್ರಾರಂಭದ ಪವಿತ್ರ ಮಾಸ. ಇಂದು ನಾಡಿಗೆ ಅದರ ಮೊದಲ ದಿನ ಯುಗಾದಿ ಹಬ್ಬದ ಸಂಭ್ರಮ. ಇದು ಶ್ರೀ ಶಾರ್ವರಿ […]

ಬಾಳಿನ ಗಿಡ ಪುಸ್ತಕ ವಿಮರ್ಶೆ: ಸ್ವಾತಂತ್ರ್ಯಪೂರ್ವ ಬದುಕಿನ ರಮ್ಯಕಥನ

ಬಾಳಿನ ಗಿಡ ಲೇ: ಎಂ.ಹರಿದಾಸರಾವ್ ಪ್ರ:ಸಾಹಿತ್ಯ ಭಂಡಾರ, ಬೆಂಗಳೂರು ಮೊ: 94816 04435 ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ (1949) ಬರೆದ ಸಾಮಾಜಿಕ ಕಾದಂಬರಿಯಿದು. ಮೇಷ್ಟ್ರ ವೃತ್ತಿಯಿಂದ ನಿವೃತ್ತರಾದ ಗೋವಿಂದರಾಯ ಕಥಾನಾಯಕ. ಉಡುಪಿ ಪಕ್ಕದ ಬೈಲೂರಿನಲ್ಲಿ ವಾಸವಿದ್ದ ಗೋವಿಂದರಾಯ, ತನ್ನ ದೊಡ್ಡಮಗ ರಾಜ ಕಾಡಂಚಿನ ಜಮೀನು ಖರೀದಿಸಿದ ಬೆಳ್ತಂಗಡಿಯ ಬಳಿಯ ಬಂಗಾಡಿಗೆ ವಲಸೆ ಹೋಗಿ ಅಲ್ಲಿ ಉತ್ತು, ಬಿತ್ತು, ಬೆಳೆದು ಹೊಸ ಬದುಕು ಕಟ್ಟಿಕೊಳ್ಳುವುದು ಕಥೆಯ ಹಂದರ. ಗೋವಿಂದರಾಯ ಜೊತೆಗೆ ಪತ್ನಿ ಸೀತಮ್ಮ ಕಥೆಯ ಜೀವಾಳ. ಅದು […]

ಕೊರೋನಾ ವೈರಸ್ ಎಚ್ಚರಿಕೆಗಾಗಿ ಯಕ್ಷಗಾನದ ಮೂಲಕ ಜನಜಾಗೃತಿ

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ‘ಏಡ್ಸಾಸುರ’ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ಗೂ ಸ್ಪಂದಿಸಿದೆ. ಯಕ್ಷಗಾನ ಪ್ರದರ್ಶನ ಎಲ್ಲೆಲ್ಲ ಆಗುತ್ತದೆಯೋ ಅಲ್ಲೆಲ್ಲ ಹೆಚ್ಚಿನ ಕಲಾವಿದರು ಸ್ವಯಂಪ್ರೇರಿತವಾಗಿ ಕೊರೊನಾ ವೈರಸ್ ಹರಡದಂತೆ ತಡೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಗತ್ತಿನ ಯಾವುದೇ ಪ್ರಮುಖ ಆಗುಹೋಗುಗಳನ್ನು ಸಾಂದರ್ಭಿಕವಾಗಿ ಯಕ್ಷಗಾನದಲ್ಲೂ ಎತ್ತಿ ತೋರಿಸುವ […]

ಬತ್ತಿದ ನದಿ

ತುಂಬಿದಂಬರದಿಂದುದುರಿದಮೃತ ಫಲಿಸಿ ಬಸುರಿಯಾದಂತೆ ನದಿ ದುಂದುಮುಕುತ್ತಲೇ ಭೋರ್ಗರೆ ಯುವುದರದರದೊಳು ಜಿಗಿದು ಸೇರಿ , ಸುಳಿಯೊಳಗೆ ಈಜಿ ಕರಗಿ ಹೋಗಬಹುದು ನೋಡಲು ಬಾರದು ಬತ್ತಿದ ನದಿಯ ಬಳುಕಿ ಸಾಗುವ ನದಿಯೊಂದಿಗೆ ಓಡಿ ದಣಿದುದಡದಲಿ ಕುಳಿತುನ್ಮನ ತುಂಬಿಕೊಳ್ಳಬಹುದು ಘನ ಬಂಡೆ ತಬ್ಬಿ , ಸೀಳಿ ಇಬ್ಭಾಗ ಹರಿದರಿದು ಸವೆಸಿ ಕಾಲವನೇ ಮಸೆದು, ನುಣ್ಣನೆ ಸಾಗುವ ನದಿ ತಣ್ಣಗೆ ಬೊಗಸೆಯಲಿ ತುಂಬಿ ದಣಿವಾರಿಸಿಕೊಳ್ಳಬಹುದು ನೋಡಲು ಬಾರದು ಬತ್ತಿದ ನದಿಯ ಭುವಿಯೊಳಗೊಂದಾದಮೃತ ಬಿಂದು ವಿಕಸಿಸಿ ಹರಿದು ಧಾರುಣಿಯ ನೆನಸಿ ವಿಸ್ತರಿಸಿ ಗಿರಿ ಪಾತ್ರ […]