ಹೆಳವನಕಟ್ಟೆ ಗಿರಿಯಮ್ಮ “ಅತ್ತೀ, ಮನ್ಯಾಗ ಅಡಿಗೀ ಮಾಡ್ಲಿಕ್ಕೆ ಉರಿಗಟಗೀ ಮುಗದಾವ… ಅಡಿಗೀ ಹ್ಯಾಂಗ ಮಾಡ್ಲಿ…” “ಅಳುಕುತ್ತ ಕೇಳಿದ್ದಳು ಸೊಸೀ.. ತೂಗುಮಂಚದ ಮೇಲೆ ಕುಳಿತು ಸರ ಸರಿಗೆಗಳನ್ನು ನೆಟ್ಟಗೆ ಮಾಡಿಕೊಳ್ಳುತ್ತಿದ್ದ ಅತ್ತೆ ಸೊಸೆಯನ್ನು ದುರುದುರು ನೋಡಿ ಹೇಳಿದ್ದಳು.. “ಮೂರ ಹೊತ್ತೂ ಆ ನಿನ್ನ ರಂಗನ್ನ ನೆನಕೋತ ಕೂತರಾತೇನು? ಇವತ್ತು ನಿನ್ನ ಕಾಲ ಹಚ್ಚಿ ಅಡಿಗೀ ಮಾಡೂ… ಆ ನಿನ್ನ ರಂಗನಾಥ ಬಂದು ಉಳಸತಾನೇನು ನೋಡತೇನಿ!” ಸೊಸೆ ಅತ್ತೆಯ ಆಜ್ಞೆಯನ್ನು ಪಾಲಿಸಿದ್ದಳು. ಕಾಲನ್ನು ಒಲೆಯಲ್ಲಿ ನೀಡಿ ಅಡುಗೆ ಪೂರೈಸಿದ್ದಳು! ಅತ್ತೆಗೆ […]
