ರೇಷ್ಮೆ ಗಣಪ….! ವಿಶ್ವದ ಅತ್ಯಂತ ಆಕರ್ಷಕ ವಸ್ತ್ರವೆಂದರೆ ಅದು ರೇಷ್ಮೆಯೇ ಸರಿ. ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ರೇಷ್ಮೆ ಹುಳುಗಳು ಪತಂಗವಾಗುವ ಮೊದಲು ಸಣ್ಣ ದಾರದಿಂದ ತಮ್ಮನ್ನು ಸುತ್ತಿಕೊಂಡು ಗೂಡು ನಿರ್ಮಿಸಿಕೊಳ್ಳುತ್ತವೆ. ಈ ಗೂಡಿನಿಂದ ಎಳೆಗಳನ್ನು ತೆಗೆದು ವಸ್ತ್ರ ತಯಾರಿಸಲಾಗುತ್ತದೆ. ಈ ರೇಷ್ಮೆ ಗೂಡುಗಳು ಈಗ ಅಲಂಕಾರಕ್ಕೂ ಬಳಕೆಯಾಗಿವೆ. ಇತ್ತೀಚಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಡೆದ ಕೃಷಿಮೇಳದಲ್ಲಿ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ಕೌಂಟರ್ ನಲ್ಲಿ ಇರಿಸಿದ್ದ ಗಣಪನ ವಿಗ್ರಹ ನೋಡುಗರ […]
