ಟಿ.ವಿ. ಟಿ.ವಿ ಎಂಬ ಯಡವಟ್ಟು ಮನೆಯ ಮೂಲೆಯಲಿ ತಂದಿಟ್ಟು ಆಗಿಹುದು ಪಡಿವಾಟಲು ಒಬ್ಬರಿಗೊಬ್ಬರದು ಮಾತಿಲ್ಲ ಕಥೆಯಿಲ್ಲ ಸೀರೆಯಲ್ಲುಗಳ ಕಂದರದಲಿ ಹುಗಿದಿಹರೆಲ್ಲ ಅವು ನಕ್ಕರೆ ಮನೆಮಂದಿಯ ಮುಖದಲಿ ರಾರಾಜಿಸುವುದು ನಗೆ ಎಂಬ ಸಕ್ಕರೆ ಅವು ಅತ್ತರೆ ಮನೆ ಮಂದಿಯ ಮುಖವೆಲ್ಲ ಹ್ಯಾಪು ಮೋರೆ ಟಿವಿ ಕಲಾಕಾರರದೇ ಭಾವಗಳೂ ನಮ್ಮವೂ ಆದುವಲ್ಲ ಅನ್ನದ ಜೊತೆಗೆ ಚಟ್ನಿಯ ತಿಂಬುವರಲ್ಲ ಚಪಾತಿಗೆ ಹುಳಿಯೇ ಗತಿಯಾಯ್ತಲ್ಲ! ಉಪ್ಪು ಹುಳಿ ಸಿಹಿ ಬಾರದ ರುಚಿಯೇ ಮರೆತೋಯ್ತಲ್ಲ ಕಣ್ಣುಗಳೆಲ್ಲ ಟಿವಿಯಲಿ ನೆಟ್ಟು ಕುಳಿತಿರುವವರೆಲ್ಲ ಕಂಗೆಟ್ಟು ಆಟವೂ ಉಂಟು […]
