Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಶ್ವ ಪುಸ್ತಕ ದಿನ – ಉಚಿತ ಪುಸ್ತಕ ಪಡೆಯಿರಿ -ಕೋಪನ್ ಕೋಡ್ – WBD2020

ಓ ಹೆನ್ರಿ ಕಥೆಗಳು – https://vividlipi.com/shop/stories/o-henry-kathegalu/ ನಾದದ ನವನೀತ – https://vividlipi.com/shop/articles/naadada-navneeta/ ನೋಡಿರಿ ಧರ್ಮಜ ಫಲಗುಣಾದಿಗಳು – https://vividlipi.com/shop/articles/nodiri-dharmaja-phalugunaadiglu/ ೧. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl – ಇಲ್ಲಿಂದ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮ್ಮ ಮೊಬೈಲ್ಗೆ ಇಳಿಸಿ (ಡೌನ್ಲೋಡ್ ಮಾಡಿ) ೨. ಮೇಲಿನ ಲಿಂಕ್ ಬಳಿಸಿ, WBD2020 ಕೂಪನ್ ಕೋಡ್ ಉಪಯೋಗಿಸಿ ಪುಸ್ತಕಗಳನ್ನು ಖರೀದಿಸಿ. ೩. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಿಸಿ ಪುಸ್ತಕ ಓದಿರಿ – ನೀವು ನಮ್ಮ ಪುಸ್ತಕಗಳನ್ನು VIVIDLIPI ಮೊಬೈಲ್ ಅಪ್ಲಿಕೇಶನ್ ಮುಖಾಂತರ […]

ಅಮ್ಮಾ ನನಗೊಂದು ಕಥೆ ಹೇಳೆ

‘ಒಂದೂರಿನಲ್ಲಿ ಒಬ್ಬಳು ಮಡಕೆಯಕ್ಕಾ ಅನ್ನೋ ಹುಡುಗಿಯಿದ್ದಳಂತೆ. ಅವಳ ಅಮ್ಮ ಆವಳಷ್ಟೇ ಉದ್ದದ ಮಡಕೆಯನ್ನು ಕುಂಬಾರನ ಕೈಯಲ್ಲಿ ಮಾಡಿಸಿ ಅವಳಿಗೆ ಹಾಕಿಸಿದ್ದಳಂತೆ. ಇದರಿಂದ ನೋಡೋರಿಗೆ ಅವಳ ಕಣ್ಣುಗಳು ಮಾತ್ರ ಕಾಣಿಸ್ತಿದ್ವಂತೆ. ಎಲ್ಲರೂ ಅವಳು ಕುರೂಪಿ ಇರಬೇಕು, ಅದಕ್ಕೇ ಮಡಕೆಯಲ್ಲಿ ಅಡಗಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ. ಆದರೆ ವಾಸ್ತವನೇ ಬೇರೆಯಾಗಿತ್ತು…’ ಹೀಗೆ ಅಜ್ಜಿ ಕಥೆ ಹೇಳಲು ಪ್ರಾರಂಭ ಮಾಡಿದಳೆಂದರೆ ಸಾಕು, ನಮ್ಮೆಲ್ಲರ ಕಣ್ಣು ದೊಡ್ಡದಾಗಿ ಅವಳನ್ನೇ ನೋಡುತ್ತಿದ್ದವು. ಆಗೆಲ್ಲ ರಜೆಗೆಂದು ಹಳ್ಳಿಗೆ ಹೋಗುತ್ತಿದ್ದ ನಮ್ಮೆಲ್ಲರಿಗೆ ಆಟಕ್ಕೆ ಏನಿಲ್ಲದಿದ್ದರೂ ಅಜ್ಜಿಯ ಕಥೆ ಬೇಕಿತ್ತು. […]

ಕರ್ಣಚೈತ್ರನ ಪರ್ಣಶಾಲೆ

ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಅಯೋಧ್ಯಾ ಸಂಪುಟದ ‘ಚಿತ್ರಕೂಟಕೆ’ ಸಂಚಿಕೆಯಲ್ಲಿ ಭರದ್ವಾಜ ಋಷಿಗಳ ಆಶ್ರಮದ ಚಿತ್ರಣ ನೀಡಿದ್ದಾರೆ. ಮುನಿಗಳು ಶಿಷ್ಯ ಹಾರೀತನಿಗೆ ಹಿರಿಯ ಅತಿಥಿಗಳಾದ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಕಾಯ್ದು ಕರೆದುಕೊಂಡು ಬರಲು ತಿಳಿಸುತ್ತಾರೆ. ಆ ಆಶ್ರಮ ಧ್ಯಾನ, ಜಪತಪ ಶಾಂತಿಯ ನೆಲೆಯಾಗಿರುತ್ತದೆ. ಆಗ ಚೈತ್ರಮಾಸ. ವಸಂತ ಋತುವಿನ ಮೊದಲ ತಿಂಗಳು. ಭಾರತೀಯರಿಗೆ ಹೊಸ ವರ್ಷದ ಪ್ರಾರಂಭದ ಪವಿತ್ರ ಮಾಸ. ಇಂದು ನಾಡಿಗೆ ಅದರ ಮೊದಲ ದಿನ ಯುಗಾದಿ ಹಬ್ಬದ ಸಂಭ್ರಮ. ಇದು ಶ್ರೀ ಶಾರ್ವರಿ […]

ಬಾಳಿನ ಗಿಡ ಪುಸ್ತಕ ವಿಮರ್ಶೆ: ಸ್ವಾತಂತ್ರ್ಯಪೂರ್ವ ಬದುಕಿನ ರಮ್ಯಕಥನ

ಬಾಳಿನ ಗಿಡ ಲೇ: ಎಂ.ಹರಿದಾಸರಾವ್ ಪ್ರ:ಸಾಹಿತ್ಯ ಭಂಡಾರ, ಬೆಂಗಳೂರು ಮೊ: 94816 04435 ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ (1949) ಬರೆದ ಸಾಮಾಜಿಕ ಕಾದಂಬರಿಯಿದು. ಮೇಷ್ಟ್ರ ವೃತ್ತಿಯಿಂದ ನಿವೃತ್ತರಾದ ಗೋವಿಂದರಾಯ ಕಥಾನಾಯಕ. ಉಡುಪಿ ಪಕ್ಕದ ಬೈಲೂರಿನಲ್ಲಿ ವಾಸವಿದ್ದ ಗೋವಿಂದರಾಯ, ತನ್ನ ದೊಡ್ಡಮಗ ರಾಜ ಕಾಡಂಚಿನ ಜಮೀನು ಖರೀದಿಸಿದ ಬೆಳ್ತಂಗಡಿಯ ಬಳಿಯ ಬಂಗಾಡಿಗೆ ವಲಸೆ ಹೋಗಿ ಅಲ್ಲಿ ಉತ್ತು, ಬಿತ್ತು, ಬೆಳೆದು ಹೊಸ ಬದುಕು ಕಟ್ಟಿಕೊಳ್ಳುವುದು ಕಥೆಯ ಹಂದರ. ಗೋವಿಂದರಾಯ ಜೊತೆಗೆ ಪತ್ನಿ ಸೀತಮ್ಮ ಕಥೆಯ ಜೀವಾಳ. ಅದು […]

ಬತ್ತಿದ ನದಿ

ತುಂಬಿದಂಬರದಿಂದುದುರಿದಮೃತ ಫಲಿಸಿ ಬಸುರಿಯಾದಂತೆ ನದಿ ದುಂದುಮುಕುತ್ತಲೇ ಭೋರ್ಗರೆ ಯುವುದರದರದೊಳು ಜಿಗಿದು ಸೇರಿ , ಸುಳಿಯೊಳಗೆ ಈಜಿ ಕರಗಿ ಹೋಗಬಹುದು ನೋಡಲು ಬಾರದು ಬತ್ತಿದ ನದಿಯ ಬಳುಕಿ ಸಾಗುವ ನದಿಯೊಂದಿಗೆ ಓಡಿ ದಣಿದುದಡದಲಿ ಕುಳಿತುನ್ಮನ ತುಂಬಿಕೊಳ್ಳಬಹುದು ಘನ ಬಂಡೆ ತಬ್ಬಿ , ಸೀಳಿ ಇಬ್ಭಾಗ ಹರಿದರಿದು ಸವೆಸಿ ಕಾಲವನೇ ಮಸೆದು, ನುಣ್ಣನೆ ಸಾಗುವ ನದಿ ತಣ್ಣಗೆ ಬೊಗಸೆಯಲಿ ತುಂಬಿ ದಣಿವಾರಿಸಿಕೊಳ್ಳಬಹುದು ನೋಡಲು ಬಾರದು ಬತ್ತಿದ ನದಿಯ ಭುವಿಯೊಳಗೊಂದಾದಮೃತ ಬಿಂದು ವಿಕಸಿಸಿ ಹರಿದು ಧಾರುಣಿಯ ನೆನಸಿ ವಿಸ್ತರಿಸಿ ಗಿರಿ ಪಾತ್ರ […]

ಪಾಪು ಕೈಬರಹವೂ ಪದಮಿತಿಯ ನಿಖರತೆಯೂ!

ಬೆಂಗಳೂರು: ಹನ್ನೆರಡು ವರ್ಷಗಳ ಹಿಂದಿನ ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಏಪ್ರಿಲ್ ನಾಲ್ಕರ ಸುಡುಬಿಸಿಲಿನ ಮಧ್ಯಾಹ್ನ ಮೂರುವರೆ ಆಗಿತ್ತು. ಪಾಟೀಲ ಪುಟ್ಟಪ್ಪನವರ ಕೈಬರಹದ ನಿಖರತೆಯು ಹತ್ತಿರದಿಂದ ದರ್ಶನವಾದ ದಿನ ಅದು. ವಿಶ್ವೇಶ್ವರನಗರದಲ್ಲಿರುವ ಪಾಟೀಲ ಪುಟ್ಟಪ್ಪನವರ ಮನೆಯ ಗೇಟ್‌ ತೆಗೆದು ಒಳಗೆ ಅಡ್ಡಿಯಿಟ್ಟಾಗ, ಎದುರಾದ ವ್ಯಕ್ತಿಯೊಬ್ಬರಿಗೆ ನನ್ನ ಪರಿಚಯ ಮಾಡಿಕೊಂಡೆ. ಅವರು ನನ್ನನ್ನು ಒಳಗೆ ಕರೆದುಕೊಂಡು ಹೋದರು. ಸೋಫಾದಲ್ಲಿ ಕುಳಿತಿದ್ದ ಪಾಟೀಲ ಪುಟ್ಟಪ್ಪನವರು ‘ಪ್ರಜಾವಾಣಿಯವರೇನೂ ಬಾ. ಕುಂದ್ರು. ಹತ್ ನಿಮಿಷ್ ಇರು ಬರ್ತೇನಿ’ ಎನ್ನುತ್ತ ನಿಧಾನಕ್ಕೆ ತಮ್ಮ […]

ನಾಡೋಜ ಪಾಟೀಲ ಪುಟ್ಟಪ್ಪ ನಿಧನ

ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ ಪಾಟೀಲ ಪುಟ್ಟಪ್ಪ (100) ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪಾಟೀಲ ಪುಟ್ಟಪ್ಪ ಬದುಕು ಸಾಗಿಬಂದ ಹಾದಿ ಜನನ: ಜನವರಿ 14, 1921. ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕು ಕುರಬಗೊಂಡ ಶಿಕ್ಷಣ: ಕಾನೂನು ಪದವಿ, ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಹಸ್ತ ಪತ್ರಿಕೆ ಪ್ರಕಟಣೆ: 1935ರಲ್ಲಿ ಹಾವೇರಿ ಹೈಸ್ಕೂಲಿನಲ್ಲಿದ್ದಾಗ ‘ನನ್ನ ನಾಡು’ಸ್ವಾತಂತ್ರ್ಯ ಹೋರಾಟ: ಚಲೇಜಾವ್ ಚಳವಳಿಯಲ್ಲಿ ಭಾಗಿ. […]

ಸಾಧನೆಗಿಲ್ಲ ಸಂಸಾರದ ಬಂಧನ

ನಾನೀಗ ಹೇಳ ಹೊರಟಿರುವುದು ಗೌರಮ್ಮನ ಜೀವನದ ಒಂದು ಸಣ್ಣ ತುಣುಕು ಅಷ್ಟೆ. ಹಿರಿಯರಿಗೆಂದೇ ಅವರ ಊರಿನಲ್ಲಿ ನಡೆಯುವ ಕ್ರೀಡೆಯಲ್ಲಿ ಬಹುಮಾನ ಇವರಿಗೆ ಕಟ್ಟಿಟ್ಟ ಬುತ್ತಿ. ಪ್ರಾಯ 72 ಆದರೂ ನಾಟಕಗಳಲ್ಲಿ ಪಾತ್ರ ಮಾಡುವ ಆಸೆ ಇದೆ ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸುತ್ತಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಾಲೆಯಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಮದುವೆಯಾದ ಮೇಲೆ ಅದಕ್ಕೆಲ್ಲಾ ಅವಕಾಶವಿರಲಿಲ್ಲ ಎಂದು ನೆನಪಿಸಿಕೊಂಡು ನೊಂದುಕೊಳ್ಳುತ್ತಾರೆ. ‘ಮದುವೆಯಾಗಿ ಮಕ್ಕಳಾದ ಮೇಲೆ ನಿನಗೇಕೆ ಈ ಹುಚ್ಚು? ಇನ್ನು ಇದೊಂದು ಬಾಕಿ ಇತ್ತು ನೋಡು. […]

‘ಮಹಾಮಾರಿ ಕೊರೊನಾ’ ಆಯುರ್ವೇದ ಚಿಕಿತ್ಸಾ ವಿಧಾನ

‘ಕೊರೊನಾ ವೈರಾಣು ಕುರಿತ ಭೀತಿ, ಆತಂಕಗಳು ನಾಗರಿಕರನ್ನು ಕಂಗೆಡಿಸಿರುವುದು ನಿಜ. ಆದರೆ ಭಾರತೀಯ ಜನಸಮುದಾಯಗಳು ಶತಶತಮಾನದಿಂದ ಇಂಥ ಸಹಸ್ರಾರು ವಿದ್ಯಮಾನಗಳನ್ನು ಎದುರಿಸಿವೆ’ ಎಂದು ಮುನ್ನುಡಿಯೊಂದಿಗೆ ಪುಸ್ತಕದ ಓದು ಆರಂಭವಾಗುತ್ತದೆ. ‘ಅಂಗಳದ ತುಳಸಿ, ಹಿತ್ತಲಿನ ವೀಳ್ಯದೆಲೆಯೂ ವೈರಾಣು ನಿರೋಧಕ’ ಎಂಬ ಭರವಸೆ ಬಿತ್ತುವ ಈ ಪುಸ್ತಕದಲ್ಲಿ ಒಟ್ಟು 19 ಅಧ್ಯಾಯಗಳಿವೆ. ಆಯುರ್ವೇದ ವೈದ್ಯ ಡಾ.ಸತ್ಯನಾರಾಯಣ ಭಟ್ ಅವರು ಈ ಪುಸ್ತಕದ ಮೂಲಕ ತಿಳಿಗನ್ನಡದಲ್ಲಿ ಕೊರೊನಾವೈರಸ್ (ಕೋವಿಡ್–19) ಬಗ್ಗೆ ಮಾಹಿತಿ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯ ಮಾಹಿತಿ ನೀಡುವ ಪ್ರಯತ್ನ […]