ಮಹಾಶಿವರಾತ್ರಿ ಸಾಮಾನ್ಯವಾಗಿ ಶಿವನು ಸುಲಭವಾಗಿ ಒಲಿಯುವವನು ಎಂದು ಪ್ರತೀತಿ ಇದೆ. ನನಗಂತೂ ಹಾಗೆ ಎನ್ನಿಸುವುದಿಲ್ಲ. ಭಕ್ತನ ಭಕ್ತಿಯು ಪರಾಕಾಷ್ಠೆಯನ್ನು ತಲುಪಿ, ಆತ ತನ್ನ ಜೀವವನ್ನೇ ಪಣಕ್ಕೆ ಹಚ್ಚಿದಾಗಲೇ ಶಿವನೂ ಒಲಿಯುವುದು! ನೀವೆಲ್ಲ ಅರುವತ ಮೂರು ಶಿವಶರಣರ ಕಥೆಗಳೆಲ್ಲವನ್ನೂ ಓದಿರದಿದ್ದರೂ ಸಿರಿಯಾಳ, ಕಣ್ಣಪ್ಪ, ನಂಬಿಯಕ್ಕ, ತಿರುನೀಲಕಂಠ ಮುಂತಾದವರ ಕಥೆಗಳನ್ನು ಅರಿತೇ ಇರುತ್ತೀರಿ. ಯಾರಿಗಾದರೂ ಶಿವನು ಸುಲಭಕ್ಕೆ ಒಲಿದುದುಂಟೇ? ಇಲ್ಲವೇ ಇಲ್ಲ… ಅವನನ್ನು ಒಲಿಸಲು ನೀರಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಪಣೆಯೂ ಸಾಕು. ಪ್ರದಕ್ಷಿಣೆ ಬಂದು ನಾಮಜಪ ಮಾಡಿದರಂತೂ ಬಹಳ […]
