ಆಶ್ವಿಚ್ ಕ್ರಕಾವ್ ನಲ್ಲಿ ಇಳಿದುಕೊಂಡಿದ್ದ ನಮ್ಮ ಅಪಾರ್ಟ್ ಮೆಂಟಿನಿಂದ ಮುಂಜಾನೆ ನಾವು ಬುಕ್ ಮಾಡಿದ್ದ ಮಿನಿ ವ್ಯಾನ್ ಟೈಮಿಗೆ ಸರಿಯಾಗಿ ಆಶ್ವಿಚ್ ನತ್ತ ಹೊರಟಾಗ ಅದರ ಡ್ರೈವರ್ ಹೇಳುತ್ತಿದ್ದ ಸಂಗತಿಗಳ ಕಡೆಗೆ ಗಮನಿವಿತ್ತಿದ್ದೆ ನಾನು. ಯಾವುದೇ ದೇಶಕ್ಕೆ ಹೋದರೂ ಅಂತರ್ಜಾಲವಾಗಲಿ, ಇನ್ನಿತರ ಯಾವುದೇ ಪುಸ್ತಕವಾಗಲೀ ಕೊಡಲಾರದ ಸಂಗತಿಗಳನ್ನು ಅಲ್ಲಿನ ಡ್ರೈವರ್ ಗಳು ಕೊಡುತ್ತಾರೆ ಎನ್ನುವ ಮಾತು ನಿಜ. ಆದರೂ ನನ್ನ ಮನಸ್ಸು ಮಾತ್ರ ವಿಚಿತ್ರವಾದ ಕ್ಷೋಭೆಯ ಮಡಿಲಾಗಿತ್ತು.ಯಾಕೆ ಹೋಗಬೇಕು ಆಶ್ವಿಚ್ ಗೆ? ಅದರಿಂದ ಆಗುವುದಾದರೂ ಏನು? ಲಕ್ಷಾವಧಿ […]
