Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಶಿಷ್ಟ ಕೌಶಲದ ಕೌದಿ!

ವಿಶಿಷ್ಟ ಕೌಶಲದ ಕೌದಿ! ಕೌದಿ; ಬೇರೆ ಬೇರೆ ಬಟ್ಟೆಯ ಚೂರು ಚೂರುಗಳನ್ನೇ ಕುಡಿಸಿ ಹೊಲಿದು ಮಾಡಿದ ದಪ್ಪನಾದ ಹೊದಿಕೆ ಅಥವಾ ಹಚ್ಚಡ. ಕೌದಿ ಹಾಸಿದರೆ ಹಾಸಿಗೆ, ಹೊದ್ದರೆ ಹಚ್ಚಡ. ಬಣ್ಣ ಬಣ್ಣದ ಬಟ್ಟೆಗಳನ್ನು ಒಂದಕ್ಕೊಂದು ಸೇರಿಸಿ, ಸೂಜಿ- ದಾರದಿಂದ ಹೊಲೆದು ಸಿದ್ಧಪಡಿಸುವ ಹಚ್ಚಡ ಹೊದ್ದು ಮಲಗಿದರೆ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬೆಚ್ಚನೆಯ ಭಾವದ ಅನುಭವ ಕೊಡುತ್ತದೆ. ಕಾರಣ, ಮನೆಯ ಎಲ್ಲರ ಬಟ್ಟೆಗಳು ಅದರಲ್ಲಿ ಮಿಳಿತಗೊಂಡಿರುತ್ತವೆ. ಕೌದಿ ಹೊಲೆಯುವುದೂ ಒಂದು ಅಪರೂಪದ ಕಲೆ. ವಿಶಿಷ್ಟ ಕೌಶಲಗಳಲ್ಲಿ ಒಂದು. ಸೂಜಿ […]

ಕಾಫಿ ಬೀಜ ಪುಡಿ ಮಾಡುವ ಪರಿಕರ

ಕಾಫಿ ಬೀಜ ಪುಡಿ ಮಾಡುವ ಪರಿಕರ ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯ ಪೇಯಗಳಲ್ಲೊಂದಾಗಿದೆ. ಕೆಲವರಿಗೆ ಕಾಫಿ ಇಲ್ಲದೇ ದಿನ ಆರಂಭವಾಗುವುದಿಲ್ಲ. ಅದು ಈಗ ಬರಿಯ ಪಾನೀಯವಾಗಿಯಷ್ಟೇ ಉಳಿದಿಲ್ಲ. ಕೋಟ್ಯಂತರ ಜನರ ಜೀವನದ ಭಾಗ ಕೂಡಾ. ಎಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ನಾಸಿಕದ ಹೊಳ್ಳೆಗಳನ್ನು ಅರಳಿಸಿ, ಹಬೆಯಾಡುವ ಕಾಫಿಯ ಸುವಾಸನೆಯನ್ನು ಅಘ್ರಾಣಿಸುತ್ತಾ ಹನಿಹನಿಯಾಗಿ ಕಾಫಿಯನ್ನು ಹೀರುತ್ತಿದ್ದರೆ ಆ ಸುಖವೇ ಬೇರೆ. ಆಧುನಿಕತೆಯಿಂದಾಗಿ ಈಗ ಕಾಫಿ ಬೀಜವನ್ನು ಹುರಿದು, ಪುಡಿ ಮಾಡಲು ಅನೇಕ ಸ್ವಯಂಚಾಲಿತ […]

ಆವರ್ತಕ !

ಆವರ್ತಕ ! ಕೆಲ ದಶಕಗಳ ಹಿಂದೆ ಬೈಸಿಕಲ್ಲಿಗೆ ಹಿಂಬದಿಯ (ಕೆಲವೊಮ್ಮೆ ಮುಂದಿನ ಚಕ್ರಕ್ಕೆ) ಚಕ್ರದ ಹತ್ತಿರ ಡೈನಮೋ ಎಂದು ಕರೆಯುವ ಬಾಟಲಿ ಆಕಾರದ ಒಂದು ಸಾಧನವಿರುತ್ತಿತ್ತು. ಈ ಡೈನಮೋವನ್ನು ಅಲ್ಟ್ರನೇಟರ್ (ಆವರ್ತಕ ) ಎನ್ನುವರು. ಆವರ್ತಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ವಿದ್ಯು ತ್ಕಾಂತೀಯ ಸಾಧನ. ಪಕ್ಕದಲ್ಲೇ ಇರುವ ಒತ್ತುಗುಂಡಿಯನ್ನು ಅದುಮಿದರೆ ಈ ಡೈನಮೋದ ತುದಿಗೆ ಹೊಂದಿಸಿದ ಚಕ್ರವೊಂದು ಸೈಕಲ್ ಚಕ್ರದ ಟೈರ್ ಗೆ ತಾಗಿ ಚಕ್ರ ಚಲಿಸುವಾಗ ತಾನೂ ತಿರುಗುತ್ತಾ, ವಿದ್ಯುತ್ ಉತ್ಪಾದಿಸುತ್ತಿತ್ತು. […]

ಕಾಮಧೇನು….!

ಕಾಮಧೇನು….! ಸಮುದ್ರಮಥನದ ಸಮಯದಲ್ಲಿ ಕ್ಷೀರಸಮುದ್ರದಿಂದ ಉದ್ಭವವಾದ ವಸ್ತುಗಳಲ್ಲಿ ಕಾಮಧೇನುವೂ ಒಂದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ದೇವತೆಗಳು ಮೊದಲು ಸಪ್ತರ್ಷಿಗಳಿಗೆ ದಾನವಾಗಿ ಕೊಟ್ಟಿದ್ದು, ನಂತರ ದೇವತೆಗಳ ರಾಜನಾದ ಇಂದ್ರನಿಗೆ ಲೋಕ ಕಲ್ಯಾಣಾರ್ಥವಾಗಿ ನೀಡಲಾಯಿತಂತೆ. ದೇವಲೋಕದ ಹಸುವಾದ ಈ ಕಾಮಧೇನುವಿನ ಮಗಳೇ ನಂದಿನಿ. ಇದು ವಶಿಷ್ಟ ಋಷಿಗಳ ಆಶ್ರಮದಲ್ಲಿದ್ದ ಹಸು. ಕಾಮಧೇನು ಎಂದರೆ ಕಾಮಿಸಿದ್ದನ್ನು ಕೊಡುವ ಧೇನು; ಅಂದರೆ ನಾವು ಬೇಡಿದ್ದನ್ನು ಕೊಡುವ ಹಸು ಎಂಬರ್ಥ. ಈ ಕಲಾವಿದನ ಕಲ್ಪನೆಯಲ್ಲಿ ಅರಳಿ, ವಸ್ತು ಪ್ರದರ್ಶನವೊಂದರಲ್ಲಿ ಪ್ರದರ್ಶನಗೊಂಡು ತನ್ನ ರೂಪ, […]

ನಮ್ಮ ಗೋಕಾಕ ಫಾಲ್ಸ್ ಪ್ರವಾಸ ಕಥನ

ಅದು ಎಲ್ಲರಿಗೂ ಅತೀ ಕುತೂಹಲ ತುಂಬಿರುವ ಮುಂಜಾನೆ ೨೧ ಜುಲೈ ೨೦೧೯*ಗೋಕಾಕ್ ಫಾಲ್ಸ್ ಗೋಕಾಕ್ ಫಾಲ್ಸ್*..ನಾವೆಲ್ಲರೂ ರವಿವಾರ ಕಣ್ಣು ತೆಗೆದಾಗ ಮುಂಜ ಮುಂಜಾನೆ ೪:30 ಆಗಿತ್ತು ಎಲ್ಲರೂ ಅರ್ಭಾಟ ತಯಾರ ಆಗಿ ಕಬ್ಬೂರ ರಸ್ತೆ ಬದಿಯಲ್ಲಿ ಇರುವ ನೀರಿನ ಟಾಕಿಗೆ ಬಂದು ನಿಂತಾಗ ೬ ಹೊಡದಿತ್ತು.ಅವ್ರು ಬಂದ್ರಿಲ್ಲೋ ಇವ್ರು ಬಂದ್ರಿಲ್ಲೋ ಅನಕೋತ ಎಲ್ಲಾ ಲಗೇಜು ಪಗೇಜು ಹಾಕಿ ನಡ್ರಿ ಹೋಗುಣ ಇನ್ನ ಅಂದಾಗ ೭ ಹೊಡದಿತ್ತು.. ಎಲ್ಲಾರೂ ಟೈಂಶೀರ ಬಂದಿದ್ದರಿಂದ ನಾವು ಅಂದಕೊಡಂಗ *ಸೊಗಲ* ಕ್ಕೆ ೯:೩೦ […]

ಸ್ಟೀರಿಂಗ್ ಬೈಸಿಕಲ್ !

ಸ್ಟೀರಿಂಗ್ ಬೈಸಿಕಲ್ ! ಪ್ರಯಾಣಕ್ಕೆ ಬಳಕೆಯಾಗುವ ಅತ್ಯಂತ ಸರಳ ಸಾಧನವೆಂದರೆ ಅದು ಬೈಸಿಕಲ್. ಇದನ್ನು ಒಂದು ಸಾಮೂಹಿಕ ಆವಿಷ್ಕಾರವೆಂದು ಪರಿಗಣಿಸಬಹುದು. ಕಾರಣ, ಅನೇಕ ಜನರು ಇದರ ಸೃಷ್ಟಿಗೆ ತಮ್ಮ ಕೈ ಜೋಡಿಸಿದ್ದಾರೆ. ಆರಂಭದಿಂದಲೂ ಬೈಸಿಕಲ್ ಅನೇಕ ಬದಲಾವಣೆಗಳಿಗೆ ಒಳಗಾಗಿದ್ದರು ನವನವೀನ ಮಾದರಿಯ ಗೇರ್ ಅಳವಡಿಸಿದ ಸೈಕಲ್ ಬಂದರೂ ಇನ್ನೂ ಹಳೆ ಮಾದರಿಯ ಸೈಕಲ್ ಬಳಸುವವರು ಹೆಚ್ಚಿದ್ದಾರೆ. ಚಿತ್ರದಲ್ಲಿ ಕಾಣುವ ಬೈಸಿಕಲ್ ಗೆ ಪ್ರಯೋಗಶೀಲರೊಬ್ಬರು (ತಲವಾಟದ ಜಯಕೃಷ್ಣ ಗುಂಡೂಮನೆ ) ಮಾಮೂಲಿ ಹ್ಯಾಂಡಲ್ ಬದಲು ಕಾರಿನ ಹ್ಯಾಂಡಲ್ ಅಳವಡಿಸಿ […]

ವ್ಯಾಸ ಪೀಠ

ವ್ಯಾಸ ಪೀಠ ಗ್ರಂಥಗಳನ್ನು ಇಟ್ಟುಕೊಂಡು ಪಾರಾಯಣ ಮಾಡುವ ಈ ಸಾಧನಕ್ಕೆ ವ್ಯಾಸ ಪೀಠ ಎಂದು ಹೆಸರು. ಹಿಂದೆ ಭಾಗವತ, ರಾಮಾಯಣ, ಮಹಾಭಾರತ ಮುಂತಾದ ಧರ್ಮಗ್ರಂಥಗಳನ್ನು ಈ ಪೀಠದ ಮೇಲೆ ಇಟ್ಟುಕೊಂಡು ಅಧ್ಯಯನ ನಡೆಸುತ್ತಿದ್ದರು. ಓದಿನ ಅನುಕೂಲಕ್ಕೆ ತಕ್ಕಂತೆ ಎರಡೂ ಫಲಕಗಳನ್ನು ಹೊಂದಿಸಿಕೊಳ್ಳಬಹುದಾದ ಈ ಪರಿಕರ, ಕೈಯಲ್ಲಿ ಪುಸ್ತಕ ಹಿಡಿದು ಓದುವ ಶ್ರಮವನ್ನು ತಪ್ಪಿಸುತ್ತದೆ. ಅಧ್ಯಯನದ ನಂತರ ಸುಲಭವಾಗಿ ಮಡಚಿ ಎಲ್ಲಿಗೆ ಬೇಕಾದರೂ ಒಯ್ಯುವಂತಹ ರಚನೆಯಿರುವ ಈ ವ್ಯಾಸ ಪೀಠ ಇಡಿಯಾಗಿದ್ದು; ಒಂದೇ ಹಲಗೆಯನ್ನೇ ಮಧ್ಯದಲ್ಲಿ ಸೀಳಿ ತಯಾರಿಸಲಾಗಿದೆ. […]

ಸಾಂಬಾರ್ ಬಟ್ಲು !

ಸಾಂಬಾರ್ ಬಟ್ಲು ! ಕಳೆದ ಕೆಲವು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗಳಲ್ಲಿ ಹಲವಾರು ಮರದ ಆವುಗೆ ಪರಿಕರಗಳು ದಂಡಿಯಾಗಿರುತ್ತಿದ್ದವು. ಮರದ ಸೌಟು, ಚಮಚ, ಮರದ ಟ್ರೇ, ಮಜ್ಜಿಗೆ ಕೆಡೆಯಲು ಬಳಸುವ ಕಡೆಗೋಲು, ಲಟ್ಟಣಿಗೆ, ಚಪಾತಿ ಲಟ್ಟಿಸುವ ಮಣೆ, ಗೊಜ್ಜಿನ ಮರಿಗೆ, ರಂಗೋಲಿ ಮರಿಗೆ, ಬಳೆ ಸ್ಟ್ಯಾಂಡ್, ಕುಂಕುಮ ಭರಣಿ, ಬಾಚಣಿಗೆ,ಒಡವೆ ಪೆಟ್ಟಿಗೆ, ಮಕ್ಕಳ ಆಟಿಕೆಗಳು ಇತ್ಯಾದಿ ಇತ್ಯಾದಿ…… ಗತಕಾಲದಲ್ಲಿ ಬಳಕೆಯಲ್ಲಿದ್ದ ವಿಶಿಷ್ಟವಾದ ಅಡುಗೆ ಮನೆಯ ಸಲಕರಣೆಗಳು. ಎಲ್ಲವೂ ಮರದಿಂದಲೇ ತಯಾರಾಗಿರುವ ಸಾಧನಗಳು. ಚಿತ್ರದಲ್ಲಿ ಕಾಣುವ […]

ಎರಿಯಪ್ಪ ಎನ್ನುವ ಸಿಹಿ ಭಕ್ಷ್ಯ…!

ಎರಿಯಪ್ಪ ಎನ್ನುವ ಸಿಹಿ ಭಕ್ಷ್ಯ…! ಚಿತ್ರದಲ್ಲಿರುವ ಈ ಪರಿಕರ, ಎರಿಯಪ್ಪ ಎನ್ನುವ (ಕೆಲವು ಪ್ರದೇಶಗಳಲ್ಲಿ ಎರಿಯವ್ವ ಎಂದೂ ಹೆಸರಿಸುವರು ) ಸಿಹಿ ಭಕ್ಷ್ಯ ತಯಾರಿಸುವ ಬಂಡಿ (ಬಾಣಲೆ), ಎರಿಯಪ್ಪ ಅಜ್ಜಿ ಕಾಲದ ಅಡುಗೆಯ ಒಂದು ಬಗೆ; ಸಾಂಪ್ರದಾಯಿಕ ತಿನಿಸು. ಈ ಸಿಹಿ ಭಕ್ಷ್ಯ ಹವ್ಯಕ ಸಮುದಾಯದವರ ಮನೆಗಳಲ್ಲಿ ತಯಾರಿಸುವ ಜನಪ್ರಿಯವಾದ ಒಂದು ದೇಸಿ ತಿಂಡಿ. ಅಕ್ಕಿ, ಗೋಧಿ, ಅರಳು/ಅವಲಕ್ಕಿ, ಬೆಲ್ಲ, ಉಪ್ಪು, ನೀರು – ಈ ಪದಾರ್ಥಗಳ ಸರಿಯಾದ ಪ್ರಮಾಣದ ಮಿಶ್ರಣದ ಹಿಟ್ಟನ್ನು (ದೋಸೆ ಹಿಟ್ಟಿನ ಹದ […]