ಬಡ್ಗಿ ಬರಮ್ಯಾ ಅಂತೂ ಮನೆ ಮನೆ ಎಂದು ದಿನಂಪ್ರತಿ ಗೋಳು ಹೊಯ್ದುವುದಕ್ಕೆ ಫುಲ್ ಸ್ಟಾಪ್ ಸಿಕ್ಕಿತು. ಎರಡು ಬೆಡ್ ರೂಂ, ಕಿಚನ್, ಹಾಲು, ವರಾಂಡಾದಿಂದ ಕೂಡಿದ ನಮ್ಮದೇ ಸ್ವಂತದ್ದು ಎನ್ನುವಂಥ ಚಿಕ್ಕ ಕುಟೀರವೊಂದು ಸಿದ್ಧಗೊಂಡಿತ್ತಾದರೂ ಕೈ ಪೂರ್ತಿ ಖಾಲಿ, ಮೈ ತುಂಬ ಸಾಲ! ಅಂಥದ್ರಲ್ಲಿ ಮೇಲಿಂದ ಮೇಲೆ ವಕ್ರಿಸುತ್ತಿದ್ದ ಹಿತೈಷಿಗಳ ಪುಕ್ಕಟೆ ಸಲಹೆಗಳಿಂದ ಕಿವಿಗೆ ತೂತು ಬಿದ್ದಂತಾಗಿತ್ತು. ಅವರ ಸಲಹೆಗಳೆಂದರೆ ಎಂಥಾವು ಅಂತೀರಿ, ಇಡೀ ಮನೆಯನ್ನು ಮುದ್ದಿ ಮಾಡಿ ಮತ್ತೆ ಕಟ್ಟುವುದಕ್ಕೆ ಪ್ರೇರೇಪಿಸುವಂತಿದ್ದವು. ಅಲ್ರೀ ಈ ಕಿಚನ್ನು […]
