ಹಾಗೇ ಸುಮ್ಮನೇ ಸ್ಕೂಟೀ ತೆಗೆದುಕೊಂಡ ಹೊಸದಾಗಿ ಲೈಸನ್ಸು ಮಾಡಿಸುವುದಿತ್ತು. ಆರ್.ಟಿ.ಓ. ಆಫೀಸಿಗೆ ಹೋದೆ. ಯಾರನ್ನು ಭೆಟ್ಟಿಯಾಗುವುದೆಂದು ತಿಳಿಯದೆ ಅತ್ತಿತ್ತ ನೋಡುತ್ತ ನಿಂತಿದ್ದೆ. ಅಲ್ಲಿ RTO (ಲೋಕಲ್ ಹೆಡ್ ಆಫೀಸರ) ಅಂತ ಬರೆದ ಬೋರ್ಡು ಕಾಣಿಸಿತು. ಅಲ್ಲಿ ಹೋಗಿ ನಿಂತೆ. ‘ಕನ್ನಡಕ ಹಾಕಿದ ಬೋಳು ತಲೆಯ ವ್ಯಕ್ತಿಯೊಂದು ‘ಏನ ಬೇಕಾಗಿತ್ತು’ ಎಂಬುದನ್ನು ತನ್ನ ಹುಬ್ಬನ್ನಷ್ಟೆ ಮೇಲಕ್ಕೇರಿಸಿ ಕೇಳಿದ. ‘ಲೈಸನ್ನರೀ’ ‘ಹಂಗಾದ್ರೆ ಇನ್ನೊಂದು ಆ ಕಡೆ ಟೇಬಲ್ಲಿಗೆ ಹೋಗ್ರಿ’ ಎಂದು ತೋರಿಸಿ ತನ್ನ ಮುಂದಿನ ಪೈಲಿನಲ್ಲಿ ತಲೆ ಹುದುಗಿಸಿ ಕುಳಿತ. […]
