Your Cart

Need help? Call +91 9535015489

📖 Print books shipping available only in India. ✈ Flat rate shipping

ಆಶ್ವಿಚ್ ನ ಕರುಣಕತೆ.

ಆಶ್ವಿಚ್ ಕ್ರಕಾವ್ ನಲ್ಲಿ ಇಳಿದುಕೊಂಡಿದ್ದ ನಮ್ಮ ಅಪಾರ್ಟ್ ಮೆಂಟಿನಿಂದ ಮುಂಜಾನೆ ನಾವು ಬುಕ್ ಮಾಡಿದ್ದ ಮಿನಿ ವ್ಯಾನ್ ಟೈಮಿಗೆ ಸರಿಯಾಗಿ ಆಶ್ವಿಚ್ ನತ್ತ ಹೊರಟಾಗ ಅದರ ಡ್ರೈವರ್ ಹೇಳುತ್ತಿದ್ದ ಸಂಗತಿಗಳ ಕಡೆಗೆ ಗಮನಿವಿತ್ತಿದ್ದೆ ನಾನು. ಯಾವುದೇ ದೇಶಕ್ಕೆ ಹೋದರೂ ಅಂತರ್ಜಾಲವಾಗಲಿ, ಇನ್ನಿತರ ಯಾವುದೇ ಪುಸ್ತಕವಾಗಲೀ ಕೊಡಲಾರದ ಸಂಗತಿಗಳನ್ನು ಅಲ್ಲಿನ ಡ್ರೈವರ್ ಗಳು ಕೊಡುತ್ತಾರೆ ಎನ್ನುವ ಮಾತು ನಿಜ. ಆದರೂ ನನ್ನ ಮನಸ್ಸು ಮಾತ್ರ‌ ವಿಚಿತ್ರವಾದ ಕ್ಷೋಭೆಯ ಮಡಿಲಾಗಿತ್ತು.ಯಾಕೆ ಹೋಗಬೇಕು ಆಶ್ವಿಚ್ ಗೆ? ಅದರಿಂದ ಆಗುವುದಾದರೂ ಏನು? ಲಕ್ಷಾವಧಿ […]

ಮತ್ತೆ ಮಳೆ ಹುಯ್ಯುತಿದೆ..ಅದೇ ನೆನಪಾಗುತಿದೆ.

#ಮತ್ತೆ_ಮಳೆ_ಹುಯ್ಯುತಿದೆ_ನೆನಪಾಗುತಿದೆ… ಮುಂಬಯಿ ಮಳೆ.. ಆಹಾ..ಅಯ್ಯೋ ಎರಡೂ! **** ಗೋರೆಗಾಂವ್ ನ ನನ್ನಣ್ಣನ ಮನೆಗೆ ಮುಂಜಾನೆಯ ಒಂಬತ್ತಕ್ಕೆಲ್ಲ ಠಾಕೋಠೀಕ್ ಬಂದು ಬೆಲ್ ಒತ್ತುತ್ತಿದ್ದ ಮನೆಗೆಲಸದ ಜಾನಕಿಬಾಯಿ ಇನ್ನೂ ಪತ್ತೆ ಇರಲಿಲ್ಲ. ಹೇಗೆ ಬಂದಾಳು? ಹಿಂದಿನ ಸಂಜೆಯಿಂದಲೇ ಭೋರಿಡಿದು ಮಳೆ ಬಾರಿಸುತ್ತಿತ್ತು ಮುಗಿಲು. ಆದರೂ ಹತ್ತು ಹೊಡೆಯುವ ಹೊತ್ತಿಗೆ ಬಂದವಳು “ಬಗಾ ತಾಯೀ ಆಪಲ ಮುಂಬಯಿಚ ಪಾವೂಸ್ ಮ್ಹಣಜೆ ಸಾರಖ ವೇಡ್ಯಾಸಾರಖಚ ಕರತೇ. ಅಣಿ ಆತಾ ಲೋಕಲ್ ಆಲೀ ನಾಹೀ…” ಅನ್ನುತ್ತ ಮುಂಬಯಿ ಮಳೆ ಅಂದರೆ ಸದಾ ಹೀಗೆ ಹುಚ್ಚು […]

ಬುದ್ಧನ ಕಂಡೇನೇ…

ಬುದ್ಧನ ಕಂಡೇನೇ… ಸಿಂಗಾಪುರದ ಬುದ್ಧ ದಂತಾವಶೇಷ ಮಂದಿರ ಭೂಮಿಯಲ್ಲಿ ಜನಿಸಿ ಬರುವಾಗ ನಾವೆಲ್ಲಾ ಪಡೆದು ಬರುವ  ಆಯುಷ್ಯಾವಧಿಯ ಬಾಲ್ಯ, ಯೌವನ, ವೃದ್ಧಾಪ್ಯಗಳೆಂಬ  ಮೂರು ಹಂತಗಳಲ್ಲಿ ನಮಗೆ ಬೇಕಾದುದೇನು? ಒಂದು ನೆಮ್ಮದಿಯ ಬದುಕು, ನೋವಿಲ್ಲದ ಸಾವು ಮತ್ತದರ ನಡುವೆ ಜೀವನಸಾರ್ಥಕ್ಯ… ‘ವಿನಾ ದೈನ್ಯೇನ ಜೀವನಮ್..ಅನಾಯಾಸೇನ ಮರಣಂ’ ಎಂಬ ಮೂಲಪ್ರಾರ್ಥನೆ  ಪ್ರಪಂಚದ ಎಷ್ಟು ಜನಕ್ಕೆ ನಿಜಕ್ಕೂ ಫಲಿಸಿದೆ, ಫಲಿಸುತ್ತದೆ ಎಂದು ತಿಳಿಯಲೆತ್ನಿಸಿದರೆ  ಬೆಚ್ಚಿ ಬೀಳುವ ಸ್ಥಿತಿ! ಇದೇ ಇಂದು ನಮ್ಮ ಪ್ರಪಂಚದ ಹಣೆಬರಹದ ಚಿತ್ರಣವನ್ನು ಕೊಡುತ್ತಿದೆ.  ಹೌದು, ಜಗತ್ತಿನ  ಜನತೆ ಶಾಂತಿಗಾಗಿ […]

ಬುಡಾಪೆಸ್ಟ್ ನ ನಾಲಿಗೆಯಿಲ್ಲದ ಸಿಂಹಗಳು

ಬುಡಾಪೆಸ್ಟ್ ಡಾನ್ಯೂಬ್ಮ ತ್ತು ನಾಲಿಗೆಯಿಲ್ಲದ ಸಿಂಹಗಳು. ಗಜಗಾತ್ರದ ನಾಲ್ಕು ನಾಲಿಗೆಯಿಲ್ಲದ ಸಿಂಹಗಳು ಡಾನ್ಯೂಬ್ ನದಿಯ ಚೇನ್ ಬ್ರಿಜ್ ಮೇಲಿನ ನಾಲ್ಕೂ ನಿಟ್ಟಿನಲ್ಲಿ ಭವ್ಯವಾಗಿ ಕೂತು ಹೋಗುಬರುವವರನ್ನೇ ದಿಟ್ಟಿಸುತ್ತಿವೆಯಲ್ಲ ಅನಿಸಿ ಇದೇನಿದು? ಆ ಸಿಂಹಗಳ ಜಿಹ್ವಾರಹಿತ ಕಥನದ ಹಿಂದೇನಿರಬಹುದು‌? ಎಂದು ನಾನು ಕೆದಕಿದೆ. ನದೀತಟದ ಎರಡು ಬದಿಗಳನ್ನು ಬೆಸೆಯಲು ಸೇತುವೆ ಕಟ್ಟೋಣ ಸಹಜ ಅಲ್ಲವೇ? ಹಾಗೆ ಬುಡಾ ಮತ್ತು ಪೆಸ್ಟ್ ಎಂಬ ನಗರಗಳನ್ನು ಒಂದು ಮಾಡಲು ಅಲ್ಲಿನ ಡಾನ್ಯೂಬ್ ನದಿಯ ಮೇಲೆ ಚೇನ್ ಹೆಸರಿನ ಸೇತುವೆ ಎದ್ದು ನಿಂತಿತು.‌ […]

ನೋತ್ರ ದೇಮಿನ ಗೂನನ  ಚರ್ಚಿನಲ್ಲೆರಡು ಕ್ಷಣ

ನೋತ್ರ ದೇಮಿನ ಗೂನನ  ಚರ್ಚಿನಲ್ಲೆರಡು ಕ್ಷಣ! ನಿಮಗೂ ನೆನಪಿರಬಹುದಲ್ಲ? ಆ ಗೂನನನದು ? ನಿಜ, ಬಹಳ ದಿನಗಳಾದುವು “ದಿ ಹ೦ಚ್ ಬ್ಯಾಕ್ ಆಫ್ ನೋತ್ರ  ದೇಮ್” ಕಾದ೦ಬರಿಯನ್ನು   ಕೈಯಲ್ಲಿ ಹಿಡಿದು ಪುಟಗಳ ತಿರುಗಿಸಿದ್ದು .ಚರ್ಚಿನ ಗ೦ಟೆ ಬಾರಿಸುವ ಗೂನ ಕ಼್ವಾಸಿಮೊಡೊನ ದುರ೦ತ ಬದುಕಿನ ಚಿತ್ರದ ಪ್ರತಿಯೊ೦ದು ಪುಟವನ್ನು ತನ್ನ ಒಡಲಲ್ಲೇ ಬೆಳೆಸಿ ಕಟ್ಟಿಕೊಟ್ಟ ನೋತ್ರ ದೇಮ್  ಕಥೀಡ್ರಲ್ . ಕಥೆಗಾರ  ವಿಕ್ಟೋರ್ ಹ್ಯೂಗೋ ಇದೇ ಚರ್ಚನ್ನೇ ಸಮಗ್ರ ಹಿನ್ನೆಲೆಯನ್ನಾಗಿಸಿ  ಹ೦ಚ್- ಬ್ಯಾಕ್ ನ ಕಥೆಯಲ್ಲಿ ಮೂಡಿರುವ  ಪಾತ್ರಗಳನ್ನು […]

ಯಾದ್ ವಶೇಮ್, ಆಶ್ವಿಚ್

ಯಾದ್ ವಶೇಮ್, ಆಶ್ವಿಚ್… ಅಲ್ಲೇ ಎಲ್ಲೋ ನಿಂತಿದ್ದಂತಿದ್ದಳು  “ಯಾದ್ ವಶೇಮ್” ಕಾದಂಬರಿಯ ನಾಯಕಿ, ಜಗತ್ತಿನ ಸಮಸ್ತ ಯಹೂದಿಗಳ ನೋವನ್ನು ಪ್ರತಿನಿಧಿಸುವ ಹ್ಯಾನಾ… ”ನೋಡಿ ಜಗತ್ತಿನ ಉದ್ದಗಲಕ್ಕೂ ಮಸಣದಲ್ಲಿ ಜಾಗದ ಪಾಲು ಪಡೆದಿರುವ ನನ್ನವರನ್ನು ನೋಡಿ” ಅನ್ನುತ್ತ ಮಾರಣಹೋಮದಲ್ಲಿ ಮಡಿದು ಸಾಲುಗಟ್ಟಿ ಮಲಗಿದ ಲಕ್ಷ ಲಕ್ಷ  ಜೀವಸಮಾಧಿಯ ನೆಲದ ಹಾಡನ್ನು ಹಾಡುತ್ತಿದ್ದಳು. ತಮ್ಮ ಪಿತೃ ಭೂಮಿ ಅಂದು  ಸಾಕ್ಷಿಯಾಗಿದ್ದ ಅಮಾನುಷ ಜೀವಹಿಂಸೆಯನ್ನು ಸ್ಮರಿಸಿ ಆ ಜೀವಗಳಿಗೆ ತಮ್ಮದೊಂದಿಷ್ಟು ಅಶ್ರುತರ್ಪಣ ನೀಡುವಂತೆ ನಿರ್ಮಿಸಿದ ಜಾಗವೇ ಬರ್ಲಿನ್ನಿನ  ‘ಬ್ರಾಂಡೆನ್ ಬರ್ಗ್ ಗೇಟ್’ […]

ಮಧ್ಯರಾತ್ರಿ ಸೂರ್ಯನ ಕಂಡೆ

ಮಧ್ಯರಾತ್ರಿ ಸೂರ್ಯನ ಕಂಡೆ! ಗೋಧೂಳಿ ಮುಸ್ಸಂಜೆಯ ಮಂದಕಾಂತಿಯ ಪ್ರಭೆಯನ್ನು ದಿನವಿಡೀ ದಣಿದ ನಮ್ಮ ದೇಹ ಮನಸ್ಸುಗಳಿಗಿತ್ತು ನಕ್ಕು ಒಂದು ಬೈ ಹೇಳಿ, ದಿಗಂತದ ಅಂಚಿನಲ್ಲಿ ಮರೆಯಾಗುವ ಸೂರ್ಯ ನಮಗೆ ಮರಳಿ ಮುಖದೋರುವ ಸಮಯ ಬಹುಶ: ಮಾರನೆಯ ಬೆಳಗಿನ ಆರು ಅಥವಾ ಅದರ ಹಿಂಚೆ ಮುಂಚೆ. ಅದುವರೆಗೆ ನಿಶೆ, ರಾತ್ರಿ ಮತ್ತು ನಿದ್ದೆ ಇವು ನಮ್ಮ ಸಂಗಾತಿಗಳು. ಆದರೆ ಜಗತ್ತಿನಲ್ಲಿ ಸಂಜೆಯಾದೊಡನೆ ಮುಳುಗಿ ಹೋಗಲು ‘ಒಲ್ಲೆ’ನೆನ್ನುವ ಸೂರ್ಯನಿರುವ ಜಾಗಗಳೂ ಉಂಟು. ರಾತ್ರಿಯ ಹನ್ನೆರಡು ಗಂಟೆ ಮೀರಿ ಹೋದರೂ, ತನ್ನ […]