Need help? Call +91 9535015489

📖 Paperback books shipping available only in India.

✈ Flat rate shipping

someವಾದ someದರ್ಶನ – ಸಂಚಿಕೆ 1

someವಾದ someದರ್ಶನ – ಸಂಚಿಕೆ 1
ಆಹ್ವಾನಿತ ಅತಿಥಿಗಳ ಜೊತೆ ಅವರ ಯಾವುದಾದರೂ ಒಂದು ಗುಣವಿಶೇಷ ಅಥವಾ ಸಾಧನೆ ಕುರಿತಾಗಿ ಒಂದಷ್ಟು ಸಂಭಾಷಣೆ… ಒಂದಷ್ಟು ಮಾತುಕತೆ…. ಒಂದಷ್ಟು ಪರಸ್ಪರ ಕಲಿಕೆ. ಇದು “someವಾದ someದರ್ಶನ” ದ ಉದ್ದೇಶ.
ಮೊದಲ ಸಂಚಿಕೆಯಲ್ಲಿ ನಮ್ಮ ಜೊತೆ ಇರುತ್ತಾರೆ : ಸುಧಾ ಪತ್ರಿಕೆಯಲ್ಲಿ ವರ್ಷಗಳಿಂದ ಕೇಳುಗರ ಪ್ರಶ್ನೆಗಳಿಗೆ ತಮ್ಮದೇ ನವಿರಾದ ಸ್ಟೈಲಿನಲ್ಲಿ ಉತ್ತರಿಸುತ್ತ ಬಂದಿರುವ, ರಾಂ ಅವರು…

‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ

ಕಾರ್ಯಕ್ರಮ : ‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ
ದಿನಾಂಕ : ೦೫. ೦೮. ೨೦೨೦ ರಂದು
ಸಮಯ : ಮಧ್ಯಾಹ್ನ ೧೨:೦೦ ಗಂಟೆಗೆ

ಹೆಸರಾಂತ ಬರಹಗಾರ , ಪರಿಸರ -ಕೃಷಿ ಚಿಂತಕ ಶ್ರೀ. ಶಿವಾನಂದ ಕಳವೆ ಅವರದೊಂದು ತುಂಬಾ ಹೊಸಬಗೆಯ ಕಾದಂಬರಿ ‘ಮಧ್ಯಘಟ್ಟ’ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೧

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

ಥಟ್ ಅಂತ ಹೇಳಿ – “ಅನಿವಾಸಿ ಬಳಗ” ರಸಪ್ರಶ್ನೆ ಕಾರ್ಯಕ್ರಮ – ೧

“ಥಟ್ ಅಂತ ಹೇಳಿ” ನೇರ ಪ್ರಸಾರ, ಯು ಕೆ “ಅನಿವಾಸಿ ಬಳಗ” ರಸಪ್ರಶ್ನೆ ಕಾರ್ಯಕ್ರಮ. ಟಿ.ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ನಡೆಸುತ್ತಿರುವ ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮ.

ತತ್ವ ಪದ ಸಾಹಿತ್ಯದ ಸ್ವರೂಪ

ಈ ಕಾರ್ಯಕ್ರಮದ ಉದ್ದೇಶ ಒಂದು ವಿಶಿಷ್ಟ ಸಾಹಿತ್ಯದ ಪರಿಚಯ ಮಾಡುವುದು,
ತತ್ವ ಪದ ಸಾಹಿತ್ಯ – ‘ ತತ್ವ ‘ ಎಂದರೆ ಸಿದ್ಧಾಂತ , ಪರಮಾತ್ಮ , ನಿಜಸ್ಥಿತಿ ಎಂದರ್ಥವಾಗುತ್ತದೆ . ತತ್ವಜ್ಞಾನವನ್ನು ಬ್ರಹ್ಮಜ್ಞಾನವೆಂದು ಕರೆಯಲಾಗಿದೆ . ‘ ಪದ ‘ ಎಂಬುದನ್ನು ‘ ಹಾಡು ‘ ‘ ಹದಗೊಂಡ ಶಬ್ದ ” ಎಂದು ಕರೆಯಲಾಗಿದೆ . ಪರಮಾತ್ಮನಿಗೆ ಸಂಬಂಧಿಸಿದ , ಸಿದ್ಧಾಂತವನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎನ್ನುತ್ತಾರೆ .
ವಿವಿಡ್ಲಿಪಿ ನೇರ ಪ್ರಸಾರದಲ್ಲಿ ಡಾ. ಬಸವರಾಜ ಸಬರದ ಅವರಿಂದ ತತ್ವ ಪದ ಸಾಹಿತ್ಯದ ಬಗ್ಗೆ ಹೆಚ್ಚಿನ ವಿವರಣೆ ಕೇಳೋಣ ಬನ್ನಿ