ಮದುವೆಯಾದ ಹೊಸತರಲ್ಲಿ ಮದುವೆಯಾದ ಹೊಸತರಲ್ಲಿ ಒಗಟಿನಲ್ಲಿ ಪತಿಯ ಹೆಸರು ಹೇಳಲು ಎಲ್ಲರೂ ದುಂಬಾಲು ಬೀಳುತ್ತಿದ್ದರು. ನಗಾದರೋ ಒಂದೂ ಒಗಟು ಬರುತ್ತಿರಲಿಲ್ಲ. ಸಿಂಪಲ್ಲಾಗಿ ಗಂಡನ ಹೆಸರನ್ನು ಹೇಳುತ್ತಿದ್ದೆ. ಒಂದಿನ ಸಂಬಂಧಿಕರ ಮನೆಗೆ ಅರಿಷಿಣ ಕುಂಕುಮಕ್ಕೆಂದು ಕರೆದಾಗ ಅಲ್ಲಿಯ ಹಿರಿಯರೊಬ್ಬರು, ‘ಏನವಾ ಇಷ್ಟ ಉದ್ದಕ ಕಲ್ತರನೂ ಒಂದ ಒಗಟಾ ಹೇಳ್ಳಿಕ್ಕೆ ಬರೋದಿಲ್ಲೇನು?” ಎಂದು ಕೇಳಿದಾಗ ನಾಚಿಕೆಯಿಂದ ತಲೆಕೆಳಗಾಗುವ ಹಾಗಾಯಿತು. ಮುಂದೆ ತವರು ಮನೆಗೆ ಬಂದಾಗ ನಮ್ಮ ತಾಯಿಯಿಂದ ಒಂದು ಒಗಟನ್ನು ಕಲಿತುಕೊಂಡೆ. ಆಕೆಯೋ ಪುಂಖಾನುಪುಂಖಲೇ ಒಗಟುಗಳನ್ನು ಹೇಳುತ್ತಿದ್ದಳು. ದಶಾವತಾರದ ಒಗಟುಗಳನ್ನು […]
