ಮಾನವೀಯತೆಯ ಮೆರೆಯೋಣ ಹುಣ್ಣಿಮೆಯ ಬೆಳ್ಳಬೆಳದಿಂಗಳಿನಲಿ ಸೂರ್ಯರಶ್ಮಿಯ ತುಣುಕೊಂದು ಮಾಯಾದೇವಿಯ ಮಡಿಲಲಿ ಬಂದಾಕ್ಷಣ ಯಾರಿಗರಿವಿತ್ತು ರಾಜನಾಗಿ ಮೆರೆಯಬೇಕಾದ ಹೊತ್ತು ಮಡಿಯುಟ್ಟು ವೈರಾಗ್ಯವೇ ಮೈಮೆತ್ತು ಕಾಡಲಿ ಅಡಿ ಇಡುವನೆಂದು ಜಗಕೆ ಶಾಂತಿಯ ಬೆಳಕಾಗುವನೆಂದು ದುಃಖವೆಂದರಿಯದ ಮನನೊಂದು ಶಾಂತಿಯನರಸುತ ನಡೆದ ವೀರ ಯಾಕಾಗಿ? ಯಾಕಾಗಿ? ತನ್ನಂತರಂಗದ ಕದವ ತೆರೆದು ಹೊಸಗಾಳಿ ಮೈಮನದಿ ಹೊಸ ಯುಗದಿ ಅಡಿಯನಿಡುತ ಬೋಧಿಯಡಿ ಬುದ್ಧನಾದ ಅನವರತ ಶಾಂತಿಯಾ ಚಿಲುಮೆಯಾದ ಜಗದ ಉದ್ದಾರವಾಯಿತೇ? ಜನರ ಬವಣೆ ಅಳಿಯಿತೇ? ಸಿದ್ದಾರ್ಥ ಬುದ್ಧನಾದ ಬುದ್ಧ ಮಹಾಪುರುಷನಾದ ಧರ್ಮಗಳ ಸಮಷ್ಠಿಗಳಲಿ ಮತ್ತೊಂದು ಧರ್ಮದ […]
