ನೋತ್ರ ದೇಮಿನ ಗೂನನ ಚರ್ಚಿನಲ್ಲೆರಡು ಕ್ಷಣ! ನಿಮಗೂ ನೆನಪಿರಬಹುದಲ್ಲ? ಆ ಗೂನನನದು ? ನಿಜ, ಬಹಳ ದಿನಗಳಾದುವು “ದಿ ಹ೦ಚ್ ಬ್ಯಾಕ್ ಆಫ್ ನೋತ್ರ ದೇಮ್” ಕಾದ೦ಬರಿಯನ್ನು ಕೈಯಲ್ಲಿ ಹಿಡಿದು ಪುಟಗಳ ತಿರುಗಿಸಿದ್ದು .ಚರ್ಚಿನ ಗ೦ಟೆ ಬಾರಿಸುವ ಗೂನ ಕ಼್ವಾಸಿಮೊಡೊನ ದುರ೦ತ ಬದುಕಿನ ಚಿತ್ರದ ಪ್ರತಿಯೊ೦ದು ಪುಟವನ್ನು ತನ್ನ ಒಡಲಲ್ಲೇ ಬೆಳೆಸಿ ಕಟ್ಟಿಕೊಟ್ಟ ನೋತ್ರ ದೇಮ್ ಕಥೀಡ್ರಲ್ . ಕಥೆಗಾರ ವಿಕ್ಟೋರ್ ಹ್ಯೂಗೋ ಇದೇ ಚರ್ಚನ್ನೇ ಸಮಗ್ರ ಹಿನ್ನೆಲೆಯನ್ನಾಗಿಸಿ ಹ೦ಚ್- ಬ್ಯಾಕ್ ನ ಕಥೆಯಲ್ಲಿ ಮೂಡಿರುವ ಪಾತ್ರಗಳನ್ನು […]
