ರೊಕ್ಕದ ಗಿಡ ಗೆಳೆತನವೆಂಬ ಬಾಂಧವ್ಯ ನಮ್ಮ ಎಳವೆಯಲ್ಲಿಯೇ ಹುಟ್ಟಿ ನಮ್ಮ ಜೊತೆ ಜೊತೆಗೇ ಬೆಳೆದು ಹೆಮ್ಮರವಾಗಿ ಸುಮಧುರ ನಾದದಂತೆ ಮೈಮನವೆಲ್ಲ ಪಸರಿಸುವುದು ಮತ್ತು ನಾವೆಲ್ಲ ಒಂದೊಂದು ದಿಕ್ಕಿನಲ್ಲಿ ನೆಲೆ ನಿಂತಾಗ ಆಗಿನ ಮಧುರ ನೆನಪಿನ ಸುರುಳಿಗಳು ಮುಡಿ ಮನದಾಳದಿಂದ ನಗೆಯ ಬುಗ್ಗೆ ಎಬ್ಬಿಸುವವು. ಗೆಳತಿಯರ ಜೊತೆ ಕಳೆದಂಥ ವೇಳೇ ಎಷ್ಟೊಂದು ಅಮೂಲ್ಯವಾದುದೆಂದು ಗೋಚರಿಸುವುದು. ಆವಾಗಿನ ಒಂದು ನೆನಪು. ನಾನು ಆಗ ಮೂರನೆಯೋ ಅಥವಾ ನಾಲ್ಕನೇ ಕ್ಲಾಸಿನಲ್ಲೊ ಇದ್ದಿರಬಹುದು. ನಾನು ಆಗ ಬಹಳೇ ಸುಳ್ಳು ಹೇಳುತ್ತಿದ್ದೆ (ಆದರೆ ಈಗಲ್ಲ). […]
