ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಲಿ ಗಡಿನಾಡಿನ ಹುಲಿ ಕೆಚ್ಚೆದೆಯದಿ ಗಂಡುಗಲಿ ನಮ್ಮ ಸಂಗೊಳ್ಳಿರಾಯಣ್ಣ ಮುಳುಗದ ಸೂರ್ಯನ ನಾಡಿನರಸರಿಗೆ ಸಿಂಹಸ್ವಪ್ನ ನೀನಾದೆ ಜಮೀನ್ದಾರಿ ಜನರ ಆರ್ಭಟದ ನೀ ಮುರಿದೆ ಭಾರತಾಂಬೆಯ ತನುಜ ನೀನು ಚೆನ್ನಮ್ಮನ ಅನುಜನಾದೆ ನೀನು ಆಕೆಯ ಹೆಜ್ಜೆಗಳಿಗೆ ನೆರಳಾಗಿ ಕಾಯ್ದೆ ನಾಡನು ಸಿಂಹವಾಗಿ ಸಾವಿರ ಕಂಬನಿಗಳಲಿ ಬಿಸಿರಗುತದ ಧಮನಿಗಳಲಿ ನಿನ್ನದೇ ಛಾಯೆ ಪಡಿಮೂಡಿಸುತಲಿ ಸ್ವಾತಂತ್ರ್ಯ ಸಂಗ್ರಾಮಕೆ ಕಹಳೆ ಮೊಳಗಿಸುತಲಿ ಮೋಸದಲಿ ಲಕ್ಕಪ್ಪ ನಿನ್ನ ಸೆರೆ ಹಿಡಿಸಿದ ಕೊನೆಯುಸಿರುವವರೆಗೂ ನಾಡರಕ್ಷಣೆ ನಿನ್ನಿಂದ ನಿನ್ನ ಸಾವು ಜನಮನದಲಿ […]
