ವಜ್ರದ ಕವಚ! ಸಂಧ್ಯಾ ಶೆಣೈ ನಮ್ಮ ಮನೆಗೆ ಹತ್ತಿರದವಳು. ಇಬ್ಬರೂ ಜೊತೆಯಾಗಿಯೇ ಶಾಲೆಯಿಂದ ಬರುವುದು ಹೋಗುವುದು ಮಾಡುತ್ತಿದ್ದೆವು. ಅವಳಿಗೂ ನನ್ನ ಮಾತನ್ನು ಕೇಳುತ್ತಾ ಬರುವುದು ಇಷ್ಟ. ಹೀಗಾಗಿ ಮತ್ತೆ ನನ್ನ ವರಸೆ ಶುರುವಾಯಿತು. ಒಂದಿನ ನಾನು ‘ನಮ್ಮ ಮನೆಯಲ್ಲಿ ನನ್ನದೇ ಆಕಾರದ ಮೂರು ಮೂರ್ತಿಗಳಿವೆ’ ಎಂದೆ. ‘ಎಂಥಾದ್ದು?’ ಎಂದಳಾಕೆ. ‘ಬಂಗಾರದ್ದೊಂದು, ಬೆಳ್ಳಿಯದೊಂದು ಮತ್ತು ವಜ್ರದ್ದು ಮೂರ್ತಿಗಳಿವೆ ಹಾಗೇ ಕವಚಗಳೂ. ಆಕೆ ಇಷ್ಟಗಲ ಕಣ್ಣಗಲಿಸಿ ‘ಖರೇನ’ ಎಂದು ಕೇಳಿದಾಗ ನನಗೆ ಆಕೆ ಕೆಣಕಿದಂತಾಯಿತು. ಅವಳು ‘ಮತ್ತೆ ನಾ ಯಾವಾಗೂ […]
