ಯಾದ್ ವಶೇಮ್, ಆಶ್ವಿಚ್… ಅಲ್ಲೇ ಎಲ್ಲೋ ನಿಂತಿದ್ದಂತಿದ್ದಳು “ಯಾದ್ ವಶೇಮ್” ಕಾದಂಬರಿಯ ನಾಯಕಿ, ಜಗತ್ತಿನ ಸಮಸ್ತ ಯಹೂದಿಗಳ ನೋವನ್ನು ಪ್ರತಿನಿಧಿಸುವ ಹ್ಯಾನಾ… ”ನೋಡಿ ಜಗತ್ತಿನ ಉದ್ದಗಲಕ್ಕೂ ಮಸಣದಲ್ಲಿ ಜಾಗದ ಪಾಲು ಪಡೆದಿರುವ ನನ್ನವರನ್ನು ನೋಡಿ” ಅನ್ನುತ್ತ ಮಾರಣಹೋಮದಲ್ಲಿ ಮಡಿದು ಸಾಲುಗಟ್ಟಿ ಮಲಗಿದ ಲಕ್ಷ ಲಕ್ಷ ಜೀವಸಮಾಧಿಯ ನೆಲದ ಹಾಡನ್ನು ಹಾಡುತ್ತಿದ್ದಳು. ತಮ್ಮ ಪಿತೃ ಭೂಮಿ ಅಂದು ಸಾಕ್ಷಿಯಾಗಿದ್ದ ಅಮಾನುಷ ಜೀವಹಿಂಸೆಯನ್ನು ಸ್ಮರಿಸಿ ಆ ಜೀವಗಳಿಗೆ ತಮ್ಮದೊಂದಿಷ್ಟು ಅಶ್ರುತರ್ಪಣ ನೀಡುವಂತೆ ನಿರ್ಮಿಸಿದ ಜಾಗವೇ ಬರ್ಲಿನ್ನಿನ ‘ಬ್ರಾಂಡೆನ್ ಬರ್ಗ್ ಗೇಟ್’ […]
