Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಶ್ವಚೇತನ ಮಾತನಾಡಿದೆ

ನಾನಿದ್ದ ದೇಹದಾ ಹುಟ್ಟು ಹಬ್ಬವು ಇಂದು ನಡೆದಿಹುದು ಅವನಿಯಲಿ ಬಹು ಹಿಂದಿನಿಂದು ನವಮಿಯಲಿ ನೆನೆಯುವರು ಶ್ರೀ ರಾಮನೆಂದು ಅಷ್ಟಮಿಗೆ ನೆನೆಯುವರು ಶ್ರೀ ಕೃಷ್ಣನೆಂದು ಧರಿಸಿದ್ದ ಪಾತ್ರಗಳ ಉತ್ಸವದ ಮೂರುತಿಗೆ ವಿಧ ವಿಧದಲಂಕಾರ ಮಾಡಿ ಸಂಭ್ರಮಿಸಿಹರು ಎಲ್ಲ ಪಾತ್ರಗಳಲ್ಲು ಸಮನಾಗೆ ಇದ್ದೆ ದ್ವಂದ್ವದಾ ಕಂಗಳಲಿ ಕಂಡು ಕನಲಿದರು ಅಂದು ಇಂದೆಂದೆಂದು ನಾ ಎಲ್ಲರೊಳಗೊಂದೇ ಸರ್ವರಾಂತರ್ಯದಲು ಸಂಚರಿಸುತಿರುವೆ ರಾಮನನು ನೆನೆದರೂ ರಾವಣನ ನೆರಳು ಕೃಷ್ಣನೆಂದುಸುರಿದರೆ ಕಂಸನಾ ಕರಿನೆರಳು ಇಂತುನಡೆದಿಹುದೆನ್ನ ಮಾಯೆ ಮರೆದಾಟವು ಅರಿತವನ ಮನದಿಹುದು ಸರ್ವ ಸಮ ಭಾವವು

ಬರಿದಾಗದ ಬರಹ

ಏನ ಬರೆಯಲಿ ಎಲ್ಲ ಬರೆದಾಗಿದೆ, ಮುಂದಿನ ಕೋಟಿ ಯುಗಕ್ಕಾಗುವಷ್ಟು, ಬರೆದದ್ದು ಓದದೇ……………….. ಹೋಗಿಬಿಟ್ಟರೆ, ಜೀವಂತ ಹಡೆದರೂ ಹೋದ ಮಗುವಿನಂತೆ, ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ, ಬರೆದವನಿಗೂ ವಾಚಕನಿಗೂ ಹಿಂಸೆ, ಹಾಗೆಂದು ಸುಮ್ಮನಿರಲು ಭಾಷೆ ಬಿಡದಲ್ಲಾ, ವಿಚಾರಗಳ ಸಂತೆಯಲಿ, ಬಡಬಡಿಕೆಯ ವ್ಯಾಪಾರ, ಮೌನವಂತೂ ಬಹು ತುಟ್ಟಿ, ಅದಕೆಂದೇ ಬರೆದು’ಬಿಡು’ವೆ, ನೀ ಓದಿ ‘ಬಿಡು,’ ಇಬ್ಬರೂ ಬಿಟ್ಟು ನೋಡೋಣ ಭಾಷೆ ಹೇಗೆ ಓಡುತ್ತದೆಂದು, ಕೊನೆಗೆ ನೀನೂ ಬರೆದು ’ಬಿಡು’ ನಾನೂ ಓದಿ ’ಬಿಡುವೆ’. ಬಿಟ್ಟು ಹಿಡಿದು ಬಿಟ್ಟು ಹಾರಿಸುವ ಕನ್ನಡದ […]

ರವಿಯ ಉತ್ತರ

ರವಿ: ದುಃಖ ಬೇಗುದಿ ದುಮ್ಮಾನ ಕಳೆಯಲು ಸುತ್ತುವಿರಿ ನವ ಗ್ರಹಗಳನು ನೀವು, ನಿಮ್ಮೆಲ್ಲ ದೂರುಗಳ ಹೊತ್ತು ತಿರುಗುವ ಗ್ರಹರು ತಿರುಗುತ್ತ ಎಲ್ಲವನು ದಾಟಿಸುವರೆನಗೆ

ಧಗೆ ಬೇಸಿಗೆ

ಕಿರು, ಹುಸಿ, ಮಳ್ಳುನಗು ನಗುತಿದ್ದ ನೇಸರ ಧಗೆ ಹೇಗಿದೆಯೆಂದೊಮ್ಮೆ ಕಣ್ಕಿಸಿದ ಇದೇನು ಮಹಾ ಧಗೆಯೇ? ಇದಕಿಲ್ಲ ಬೇಗುದಿಗಳ ಕಾವು ದುಃಖದುರಿ ದಾವಾನಲ ಹೊರಧಗೆ ತಣಿಸಲು ಸಾಕಷ್ಟಿವೆ ಸಾಧನ, ರಜನಿಯ ಕೃಪೆಯೂ ಇದೆ. ತಿಳಿದಿದ್ದರೆ ಹೇಳಯ್ಯಾ ಓ ಸವಿತೃವೇ, ದುಃಖ ಬೇಗುದಿಗಳ ತಣಿಸೆ ಸಾಧನವದೇನುಂಟು ಸುತ್ತುವ ನವಗ್ರಹಗಳ ಬಳಿ ವಿಚಾರಿಸಿ ತಿಳಿಸು

ಜೀವಜಗ ನೀನೇ

ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು

ಮರಣ

‘ಜೀವ’ನ ನಾಟಕ ನೆತ್ತರ ಚಿತ್ರಣ ನರಕದ ದೃಶ್ಯಕೆ ಕೊನೆಯುಂಟೇ! ವಸ್ತ್ರವ ಕಳಚುವ ಪರಿಯದು ‘ಜೀವ’ನ ಪ್ರಶ್ನಿಸಲೆನಗೆ ಎಡೆಯುಂಟೆ ಜನ್ಮವ ತಳೆದಿಹ ‘ಜೀವ’ನ ಗತ್ಯವ ಕಾಣುವ ಕಣ್ಣು ನಮಗುಂಟೆ? ತೋರುವ ಸತ್ಯಕೆ ಮರುಗುವ ಮನವು ಅಂತಿಮ ಸತ್ಯವರಿಯಲುಂಟೆ! ಕೊಲ್ಲುವ ಕಾಯುವ ‘ಜೀವ’ನ ಕರವದು ಸತ್ತೂ ಬದುಕುವ ಪರಿಯೇನೆ! ತನ್ನದೆ ವಸ್ತ್ರ ತಾನ್ ಕಳಚಲುಬಳಸುವ ನಿನ್ನೊಂದಸ್ತ್ರವ ಸರಿಯೇನೇ! ‘ಜೀವ’ನಾಟವನು ಅರಿಯಲು ಲಭಿಸಿಹ ಅವನಿಯ ನೋಟವು ಹೀಗೇನೆ! ಹೇಳುವನವನಿಗೆ ತಿಳಿಯದುದೇನಿದೆ? ಕಾಲನ ಚಿತ್ರಣ ನಿಜವೇನೆ!

ರೂಪಾಂತರ

ನೋಡಬಂದೆ ಕೂಟವನ್ನು ಹುಟ್ಟುಸಾವಿನಾಟವನ್ನು ಆಟಗಾರ ಜಾಣನೀನು ತಿಳಿಯೆ ನಿನ್ನ ನಡೆಯನು ನಿನ್ನಾಟದ ಕಾಯಿನಾನು ನಡೆವೆ ನಿನ್ನ ಇಚ್ಛೆಯಂತೆ ಪ್ರಶ್ನಿಸೆನು ಯಾವುದನೂ ದಾಳ ನಿನ್ನ ಮಾಯೆಯಂತೆ ನಿನ್ನಿಚ್ಛೆಯ ಆಟವೇನು ಎಲ್ಲ ಒಂದೇ ಹೂಟವೇನು ಎಲ್ಲರಲ್ಲು ವಾಸಮಾಡಿ ಗೆಲುವೆ ಎಲ್ಲ ಹೇಗೆ ನೀನು ಎಲ್ಲ ನೀನೆ ಎಂದಮೇಲೆ ನಾನೇ ಇಲ್ಲಿ ಇಲ್ಲವೇನೊ ನಾನೇ ಇಲ್ಲವೆಂದಮೇಲೆ ಉಳಿಯಿತೇನು ಅಳಿಯಿತೇನು

ಅನನಾಸು

ಸುರೇಖಾ ಭೀಮಗುಳಿ 3 ನವೆಂಬರ್ 2015 ” ಅನಾನಾಸು ಸಂಭ್ರಮ !” *********************** ಪೆರಿಯ ಶಾಂತಿಯ ಅನಾನಾಸದು ನಮ್ಮ ಬಿಡದೇ ಸೆಳೆವುದು || ಎಷ್ಟು ತಿಂದರು ತೃಪ್ತಿಯಾಗದು ’ಹೀಗೆ ಯಾತಕೆ ?’ ತಿಳಿಯದು || ೧ || ಮಂಗಳೂರಿನ ಮುಖ್ಯ ರಸ್ತೆಯ ಬಲಕೆ ತಿರುಗಿದ ಮಾರ್ಗವು || ಹಸಿರು ಕಾನನ ನೆರಳ ಪರಿಸರ ಸುತ್ತ ಮಂಗನ ಆಟವು ! || ೨ || ಹಣ್ಣ ಸಿಪ್ಪೆಗೆ – ಕೊಳೆತ ಹಣ್ಣಿಗೆ ಕಾದು ಕುಳಿತಿವೆ ಮರ್ಕಟ || ಮರದ […]