Your Cart

Need help? Call +91 9535015489

📖 Print books shipping available only in India. ✈ Flat rate shipping

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು!

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು! ನನಗೆ ಗೊತ್ತಿರುವ ಉದ್ಯಮಿಯೊಬ್ಬರು ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿದ್ದರು. ದೇಶವಿದೇಶ ಸುತ್ತುತ್ತಿದ್ದರು. ತಾವೇ ಆಫೀಸಿನಲ್ಲಿ ಕೂತು ಅಕೌಂಟ್ಸು ನೋಡುತ್ತನಿ, ಸರಿಯಾಗಿ ಕಸ ಗುಡಿಸಿದ್ದಾರಾ ಅಂತ ಗಮನಿಸುತ್ತ, ಯಾರು ರಜೆ ಹಾಕಿದ್ದಾರೆ ಅನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತ, ಆಫೀಸಿಗೆ ಬಂದವರೊಂದಿಗೆ ತಾವೇ ಮಾತಾಡುತ್ತ, ವ್ಯವಹಾರಕ್ಕೆ ಬಂದೊಡನೆ ಹತ್ತು ಪೈಸೆಗೂ ಜಗಳ ಕಾಯುತ್ತ, ಬ್ಯಾಂಕಿನವರು ಹತ್ತುರೂಪಾಯಿ ಬ್ಯಾಂಕ್‌ ಛಾರ್ಜು ಹಾಕಿದರೂ ಯಾಕೆಂದು ವಿಚಾರಿಸಿ, ಅದನ್ನು ರಿವರ್ಸು ಮಾಡುವಂತೆ ಒತ್ತಾಯಿಸುತ್ತ ಇರುತ್ತಿದ್ದರು. ಅವರ ಕಣ್ತಪ್ಪಿಸಿ ಏನೂ ನಡೆಯುತ್ತಿರಲಿಲ್ಲ. ಅವರ […]

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ ನಿರುಮ್ಮಳವಾಗಿ ಶುರುವಾದ ಒಂದು ಬೆಳಗ್ಗೆ ಅವಳು ತೇಲಿಕೊಂಡು ಊರಿನೊಳಗೆ ಬಂದಳು. ಅವಳನ್ನು ಸ್ವಾಗತಿಸುವುದಕ್ಕೆ ಊರಿನ ಬಾಗಿಲಲ್ಲಿ ಯಾರೂ ಇರಲಿಲ್ಲ. ದಿಡ್ಡಿ ಬಾಗಿಲ ಹತ್ತಿರ ಸುಂಕ ವಸೂಲಿ ಮಾಡುವವನು ತಿಂಡಿಗೋ ಸ್ನಾನಕ್ಕೋ ಹೋಗಿದ್ದ. ಹೀಗಾಗಿ ಅವಳು ನುಸುಳಿ ಒಳಗೆ ಬಂದದ್ದು ಯಾರಿಗೂ ಗೊತ್ತೇ ಆಗಲಿಲ್ಲ. ಅವಳಿಗೆ ಆ ಊರಲ್ಲಿ ಗೊತ್ತಿದ್ದವರು ಯಾರೂ ಇರಲಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟಬಾರದು ಅಂತ ಅವಳು ನಿರ್ಧಾರ ಮಾಡಿಬಿಟ್ಟಿದ್ದಳು. ಏನಿದ್ದರೂ ರಾಜನ ಬಳಿ ಕೇಳಬೇಕು. […]

ಜೀವನದ ಉದ್ದೇಶ ಏನು?

ಜೀವನದ ಉದ್ದೇಶ ಏನು? ಹೀಗೆ ಪರ್ಪಸ್ ಹುಡುಕುತ್ತಾ ಹೊರಟವರೆಲ್ಲ ಕೊನೆಗೆ ಹೋಗಿ ಮುಟ್ಟಿದ ಜಾಗದ ಹೆಸರು ಸುಡುಗಾಡು. ಹಾಗಿದ್ದರೆ ಬದುಕು ಅಷ್ಟೊಂದು ಪರ್ಪಸ್‌ಲೆಸ್ಸಾ? ಯಾವ ಉದ್ದೇಶವೂ ಇಲ್ಲದೇ ನಾವಿಲ್ಲಿ ಇದೀವಾ? ಕಾಡಿನಲ್ಲಿ ದಂಡಿಯಾಗಿ ಬೆಳೆದ ಹುಲ್ಲನ್ನು ಜಿಂಕೆ ತಿನ್ನುತ್ತಾ, ಹೆಚ್ಚಿದ ಜಿಂಕೆಗಳನ್ನು ಹುಲಿ ಕಬಳಿಸುತ್ತಾ, ಹುಲಿಯನ್ನು ಮನುಷ್ಯ ಕೊಲ್ಲುತ್ತಾ, ಮನುಷ್ಯನನ್ನು ಕಾಲ ದಂಡಿಸುತ್ತಾ ಚಕ್ರ ಪೂರ್ಣ. ಇಲ್ಲಿ ಉದ್ದೇಶ ಯಾರದ್ದು? ಪ್ರಕೃತಿಯದೇ? ಹಾಗಿದ್ದರೆ ನಮ್ಮೆಲ್ಲರಿಗಿಂತ ದೊಡ್ಡ ಉದ್ದೇಶ ಪ್ರಕೃತಿಗಿದೆಯೇ? ಅದು ಈ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿಯೇ […]

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ!

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ! ಗುಡ್ಡ ಕಡಿದು ರಸ್ತೆ ಮಾಡಿದ ರಸ್ತೆಯಂತಿರುವ ಈ ಮಾತುಗಳ ಮೂಲಕ ಹಾದು ಹೋಗುವುದೆಂದರೆ ನನಗೆ ಅಂತಹ ಉತ್ಸಾಹವೇನೂ ಇಲ್ಲ. ದಾರಿಯಿಲ್ಲದ ದಟ್ಟ ಕಾಡಿನಲ್ಲಿ ಹಕ್ಕಿ ಕೂಗಿನಂತಿರುವ ಕವಿತೆಯ ಹಾದಿ ನನಗೆ ಯಾವತ್ತೂ ತುಂಬ ಕುತೂಹಲಕರ. *** ಸ್ನಾನದಲ್ಲಿ ಕದ್ದು ಕಿವಿಯೊಳಗೆ ಹೊಕ್ಕಿದ ನೀರಿನ ಬಿಂದು ಜೀವಗೊಂಡು. ದುಂಬಿಗಾನದ ಹಾಗೆ ಗುಂಗುಂ ಎಂಬ ನಾದ ಈಗ ನನಗೆ ಬೇರೇನೂ ಕೇಳಿಸುವುದಿಲ್ಲ ಕಿವುಡಿ ಎನ್ನುತ್ತಿದ್ದಾರೆ ಎಲ್ಲರೂ ನಾದದ ಕಡಲಿನಲ್ಲಿ ತೇಲುವ ನಾನು ಒಂದು […]

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು ಕನಕದಾಸರು ಉಡುಪಿಯ ಶ್ರೀಕೃಷ್ಣನನ್ನು ತಮ್ಮ ಕಡೆಗೆ ತಿರುಗಿಸಿಕೊಂಡದ್ದು, ಗೋಡೆಯಲ್ಲೊಂದು ಕಿಂಡಿ ಮೂಡಿ ಕೃಷ್ಣ ದರ್ಶನ ನೀಡಿದ್ದು ಜನಜನಿತ. ಹೊರಗಡೆ ನಿಂತು ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಕನಕದಾಸ ಹಾಡಿದ್ದೂ ಮನೆಮಾತು. ಈ ಭಕ್ತಿಗೀತೆಯಲ್ಲೇ ಬರುವ ಮತ್ತೊಂದು ಸಾಲು ನಿಮಗೆ ನೆನಪಿರಬಹುದು; ಕರಿರಾಜ ಕಷ್ಟದಲಿ ಆದಿಮೂಲ ಎಂದು ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಇಂಥ ಪದಗಳನ್ನು ಹಾಡುವವರಿಗೂ ಕೇಳುವವರಿಗೂ ಕರಿರಾಜನಿಗೆ ಬಂದ ಕಷ್ಟವೇನು? ಅವನ ಕಷ್ಟಕ್ಕೆ ಆದಿಮೂಲ ಬಂದು ಒದಗಿದ್ದಾದರೂ ಹೇಗೆ ಅನ್ನುವುದು […]

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ ಕತೆಗಾರರು ಬಡತನದಲ್ಲಿ ಹುಟ್ಟುತ್ತಾರೆ. ಬಡತನದ ಅನುಭವಗಳನ್ನು ಬರೆದು ಶ್ರೀಮಂತರಾಗುತ್ತಾರೆ. ಆ ಬಡತನದ ಅನುಭವಗಳನ್ನು ಓದಿದ ಶ್ರೀಮಂತರು ತಾವೆಷ್ಟು ಬಡವರು ಅಂದುಕೊಂಡು ಒಳಗೊಳಗೇ ಕೊರಗುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಗಾಲ್ಸ್ ವರ್ದಿ. ಜಾನ್ ಗಾಲ್ಸ್ ವರ್ದಿ. ಇಂಗ್ಲಿಷ್ ನಾಟಕಕಾರ ಮತ್ತು ಕಾದಂಬರಿಕಾರ. 1932ರಲ್ಲಿ ಅವನಿಗೆ ನೊಬೆಲ್ ಬಂತು. ಮೇಲ್ಮಧ್ಯಮ ವರ್ಗದ ಬ್ರಿಟಿಷರ ಬದುಕನ್ನೂ ಇಂಗ್ಲೆಂಡಿನ ಸಾಮಾಜಿಕ ಸ್ಥಿತಿಗತಿಯನ್ನೂ ತೆಳುವಾಗಿ ಗೇಲಿ ಮಾಡುತ್ತಾ ಬರೆದವನು ಗಾಲ್ಸ್ ವರ್ದಿ. ಆತ ಕಾದಂಬರಿಯೇ ತನ್ನ ಸಾಮಾಜಿಕ ನಿಲುವುಗಳನ್ನು […]

ಸರಳವಾಗಿ ಸಾಗುವ ಕತೆಗಳ ನಿರುತ್ಸಾಹದಿಂದ ನೋಡಬಾರದು

ಸರಳವಾಗಿ ಸಾಗುವ ಕತೆಗಳ ನಿರುತ್ಸಾಹದಿಂದ ನೋಡಬಾರದು ಕತೆಗಳು ವಿಚಿತ್ರವಾಗಿರುತ್ತವೆ. ಬಹಳಷ್ಟು ಕತೆಗಳಲ್ಲಿ ನಾವು ನಿರೀಕ್ಷಿಸುವಂಥ ನಾಟಕೀಯತೆಯೇನೂ ಇರುವುದಿಲ್ಲ. ಜೀವನ ಕಾಸರವಳ್ಳಿಯವರ ಸಿನಿಮಾದಂತೆ ಒಂದು ಲಯದಲ್ಲಿ ಸಾಗುತ್ತಲೇ ಇರುತ್ತದೆ. ಥಟ್ಟನೇ ಏನೋ ಬದಲಾವಣೆಯಾಗಬೇಕು. ಅಚ್ಚರಿಗಳು ಬೇಕು, ದಿಗ್ಭ್ರಮೆ ಹುಟ್ಟಿಸುವಂತ ತಿರುವುಗಳು ಬೇಕು. ಒಂದೊಂದು ಪಾತ್ರದ ವರ್ತನೆಯೂ ಬೆಚ್ಚಿ ಬೀಳಿಸಬೇಕು ಎಂದು ನಿರೀಕ್ಷಿಸುವವರಿಗೆ ಇಂಥ ಕತೆಗಳು ಇಷ್ಟವಾಗಲಾರವು. ಆದರೆ ನಮ್ಮ ಪರಿಸರ, ನಾವು ದಿನನಿತ್ಯ ನೋಡುವ ಸೀರಿಯಲ್ ಸಿನಿಮಾಗಳು ನಮ್ಮನ್ನು ಒಂದು ರೀತಿಯ ಅನಿರೀಕ್ಷಿತತೆಗೆ ಅಣಿಮಾಡಿವೆ. ಕಾಲೇಜಿಗೆ ಹೋಗುವ ಹುಡುಗಿಗೊಂದು […]

ಸೂರಿಯ ಷೇಕ್ಸ್ ಪಿಯರ್ ಸಂಜೆ

ಸೂರಿಯ ಷೇಕ್ಸ್ ಪಿಯರ್ ಸಂಜೆ ಷೇಕ್ಸ್ ಪಿಯರ್ ಹೇಗಿದ್ದ. ಅವನು ನಮ್ಮ ಹಾಗೆ ಕೊಂಚ ಎಡವಟ್ಟನೂ ಸೋಮಾರಿಯೂ ಆಗಿರಲಿಲ್ಲವೇ? ಎಲ್ಲರೂ ಮೇಷ್ಟ್ರುಗಳ ಥರ ಇದ್ದು ಬಿಟ್ಟರೆ ಬರೆದದ್ದೆಲ್ಲ ಪಠ್ಯವಾಗುತ್ತದೆಯೇ ವಿನಾ ಕಾವ್ಯವಾಗುವುದು ಸಾಧ್ಯವಾ? ಬದುಕಲ್ಲಿ ಶಿಸ್ತು ಮುಖ್ಯವಾ? ಶಿಸ್ತಿನಿಂದ ಬದುಕುತ್ತಾ ಬದುಕುತ್ತಾ ಯಾಂತ್ರಿಕವಾಗುತ್ತಾ ಹೋಗುತ್ತೇವಾ? ಷೇಕ್ಸ್ ಪಿಯರ್ ಅಸಾಧ್ಯ ಅಶಿಸ್ತಿನ ಜಗಳಗಂಟ, ವ್ಯಾಮೋಹಿ, ಕುಡುಕನಾಗಿದ್ದ ಅಂತ ಊಹಿಸಿದರೆ ಅದು ತಪ್ಪಾ? ಹಾಗೆಲ್ಲ ಯೋಚಿಸುವ ಹೊತ್ತಿಗೇ ಷೇಕ್ಸ್ ಪಿಯರ್ ಹೇಳಿದ್ದು ನೆನಪಾಗುತ್ತದೆ; Suit the word to the […]

ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ

ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ ಭಾಸ್ಕರ ಅಸ್ತಂಗತನಾದ ಎಂದು ಹೇಳಬೇಡಿ. ಸೂರ್ಯ ಕಂತಿದ ಎಂದು ಬರೆದರೆ ನಿಮ್ಮ ಗಂಟೇನು ಹೋಗುತ್ತದೆ ನೋಡುವಾ ಎಂದು ಸುಮಾರು ಇಪ್ಪತ್ತು ವರುಷಗಳ ಹಿಂದೆ ಶಿವರಾಮ ಕಾರಂತರು ಗುಡುಗಿದ್ದರು. ಹೀಗೆ ಹೇಳಿದ ಕಾರಂತರೇ ಕವಿತೆಗಳನ್ನೂ ಬರೆದಿದ್ದರು ಅಂದರೆ ಆಶ್ಚರ್ಯವಾಗುತ್ತದೆ. ಸರಳವಾಗಿ ಹೇಳುವುದೇ ಒಂದು ದೀಕ್ಷೆಯೋ ಪಟುತ್ವವೋ ಆಗಿಬಿಟ್ಟಾಗ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಅನಗತ್ಯವಾಗಿ ಎಲ್ಲವನ್ನೂ ಸರಳಗೊಳಿಸುವುದಕ್ಕೆ ನಾವು ಶುರುಮಾಡುತ್ತೇನೆ. ಹನ್ನೆರಡನೆಯ ಶತಮಾನದಲ್ಲೇ ವಚನಕಾರರು ಎಷ್ಟು ಸರಳವಾಗಿ ಬರೆದಿದ್ದರು ನೋಡಿ. ಇಪ್ಪತ್ತನೇ ಶತಮಾನದ […]