ದಾಸ ಸಾಹಿತ್ಯದ ಮುಖ್ಯ ತತ್ವ ಭಕ್ತಿ, ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು. ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ದಾಸರು ಭಕ್ತಿಯ ದಾರಿಯಲ್ಲಿ ಭಗವಂತನೆಂಬ ಮೂಲ ಸತ್ಯವನ್ನು ಹುಡುಕಲು ಹೊರಟವರು. ಹಾಗೆ ಅವರು ಹೊರಟಾಗ ಭಕ್ತಿಯ ದಾರಿಗೆ ತಮ್ಮನ್ನಷ್ಟೇ ತೆರೆದುಕೊಳ್ಳಲಿಲ್ಲ. ಅದನ್ನು ಇಡೀ ಸಮುದಾಯಕ್ಕೆಯೇ ತೆರೆದಿಟ್ಟರು. ಅದುವೆ ಇಲ್ಲಿಯ ವಿಶೇಷ. ಹಾಗೆ ತೆರೆದಿಡುವಾಗ ಬದುಕೆಂದರೇನು? ಹೇಗೆ ಬದುಕಬೇಕು ? ಎಂಬುದನ್ನು ತಿಳಿಸುತ್ತ ಹೋದರು. ಕನ್ನಡ ದಾಸ ಸಾಹಿತ್ಯ […]
Author: Krishna Kolhar
ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೧
‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ. ಆದರೆ ದಾಸರು ಈ ಬಗ್ಗೆ ಚಿಂತಿಸಿದವರಲ್ಲ. ‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು ಕೇಳಿದ್ದಾರೆ. ೧೨ನೆಯ ಶತಮಾನದ ಬಸವಣ್ಣನವರು ಇದೇ ರೀತಿಯಲ್ಲಿ ‘ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ […]