Your Cart

Need help? Call +91 9535015489

📖 Print books shipping available only in India. ✈ Flat rate shipping

ಅಮ್ಮಾ ಎಂದರೆ

ಅಮ್ಮಾ ಎಂದರೆ…! ( ಹ್ಯಾಪಿ ಬರ್ತ್ ಡೇ ಅಮ್ಮಾ!) ನಮ್ಮ ಅಮ್ಮ ಲೀಲಾ ಮೂರ್ತಿಯವರ 84 ನೇ ಜನ್ಮದಿನ ಇಂದು, ಅವರ ಆಶೀರ್ವಾದಗಳು ನನ್ನ ಮೇಲಿದೆ. ನಾವು ಚೆನ್ನೈನಲ್ಲಿ, ಅಮ್ಮ ಬೆಂಗಳೂರಲ್ಲಿ ತಮ್ಮನ ಮನೆಯಲ್ಲಿ. 6 ತಿಂಗಳ ಮೇಲಾಯಿತು ದರ್ಶನವಿಲ್ಲ. ಮೊಬೈಲಿನಲ್ಲೇ ಸಂಭಾಷಣೆ. ನನ್ನ ಅಮ್ಮ ಮೊದಲಿಂದಲೂ ತಾಯಿ ಮಮತೆ ಪ್ರೀತಿಯೊಂದಿಗೆ ನನಗೆ ಸಾಹಿತ್ಯಾಸಕ್ತಿಯನ್ನೂ ಹುಟ್ಟಿನಿಂದಲೇ ಉಣಬಡಿಸಿದ್ದಾರೆ. ನಾವು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಗಳಾಗಿ 25 ವರ್ಷ ಕಳೆದೆವು . ಆಗ 1970-80 ರ ದಶಕದಲ್ಲಿ ನಾನು ಶಾಲಾ- […]

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3 ಭಾಗ 3:- ಪಿತೂರಿ ಸಿದ್ಧಾಂತ ಅಥವಾ ಕಾನ್ಸ್ಪಿರೆಸಿ ಥಿಯರಿ ಎಂದರೇನು? ಆಂಗ್ಲ ಮಾಹಿತಿಯ ಕನ್ನಡ ಅನುವಾದ! ಆಕಾಶದಿಂದ ಧರೆಗಿಳಿದ ’ಗೊಂಬೆ’? ಮಂಗಳ ಗ್ರಹದ ಉಲ್ಲೇಖ ನಮ್ಮ ಆದಿಕಾಲದ ನಾಗರೀಕತೆಗಳಲ್ಲಿ, ಗುಹೆಯಲ್ಲಿ ಕಲ್ಲಲ್ಲಿ ಕಡೆದ ಚಿತ್ರಗಳಲ್ಲಿ, ಈಜಿಪ್ಟಿನ ಪುರಾಣಗಳಲ್ಲಿ, ಗ್ರೀಕ್ ಮತ್ತು ಬೈಬಲ್ಲಿನ ಉಪಕಥೆಗಳಲ್ಲಿ ಹೇರಳವಾಗಿ ಇವೆ: ಮಾರ್ಸ್ ಗ್ರಹವನ್ನು God Of War ಎಂದೇ ಕರೆದಿದ್ದರು. ಅಲ್ಲಿಯ ದೇವತೆಗಳು, ದೇವ ಮಾನವರು , ಇಲ್ಲಿ ಬಂದು ನಮಗೆಲ್ಲ ಕಲಿಸಿಕೊಟ್ಟರು, ನಮ್ಮ […]

ಮಂಗಳಗ್ರಹದಲ್ಲಿ ನಾಗರೀಕತೆ ಇತ್ತೆ? ಭಾಗ -2

ಮಂಗಳಗ್ರಹದಲ್ಲಿ ನಾಗರೀಕತೆ ಇತ್ತೆ? ಭಾಗ -2 2.ಮಂಗನಿಂದ ಮಾನವನಿಗೂ ಮುನ್ನ ಮಂಗಳನಲ್ಲಿ ಮಾನವ? ಮಂಗಳ ಗ್ರಹದಲ್ಲಿ ನಮಗೆ ಸಿಕ್ಕಿರುವ ಕೆಲವು ವಿಚಿತ್ರ ಚಿತ್ರಗಳು ಮತ್ತು ವಿಶ್ಲೇಷಣೆ: 2.1 ಈ ಭಾಗದಲ್ಲಿ ನಾನು ಉದ್ದೇಶಪೂರ್ವಕವಾಗಿ ಕೆಲವು ಅರೆ-ವೈಜ್ಞಾನಿಕ ಆದರೆ ಯೋಚಿಸಲರ್ಹ ಮಂಗಳ ಗ್ರಹದಲ್ಲಿ ಕಂಡ ಚಿತ್ರಗಳು ಅವುಗಳ ಬಗ್ಗೆ ಜಗತ್ತಿನಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ದೃಷ್ಟಿ ಹಾಯಿಸುತ್ತೇನೆ. ಮತ್ತೆ ಪೂರ್ಣ ವೈಜ್ಞಾನಿಕ ವಿಚಾರದತ್ತಲೂ ಬರುವೆ, ಸಂಧರ್ಭಕ್ಕೆ ತಕ್ಕಂತೆ. 2.2 ಇವು ಯಾವುವೂ ಯಾವುದೋ ಹುಚ್ಚು ಕಲಾವಿದನೊಬ್ಬನ ಮನಸ್ಸಿನಲ್ಲಿ ಮೂಡಿದ […]

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ? 1.1 ಪರಿಚಯ ಇತ್ತೀಚೆಗೆ ಮಂಗಳ ಗ್ರಹದ ಬಗ್ಗೆ ಅತಿ ಕುತೂಹಲಕಾರಿ ಬೆಳವಣಿಗೆಗಳೂ ವೈಜ್ಞಾನಿಕ ರಂಗದಲ್ಲಿಯೂ, ಮೂಗಿನ ಮೇಲೆ ಬೆರಳಿಡುವಂತಾ ಅನುಮಾನ, ಗುಮಾನಿ ಮತ್ತು ಸುಳಿವುಗಳು ಅರೆ-ವೈಜ್ಞಾನಿಕ ಅಂದರೆ conspirationalist ಅಥವಾ ರಹಸ್ಯವಾದಿಗಳ ಮೀಡಿಯಾ ಕಾರ್ಖಾನೆಯಿಂದಲೂ ಹೊರಬೀಳುತ್ತಲೇ ಇವೆ. ನಮ್ಮ ಮುಂದಿರುವ ದಾಖಲೆಗಳು, ಚಿತ್ರಗಳು, ಸಂದೇಹಗಳಲ್ಲದೇ ಕೆಲವು ಪ್ರಮುಖ ಮುಂದುವರಿದ ದೇಶಗಳಾದ ಅಮೆರಿಕಾ ಮತ್ತು ಚೀನಾ ಈಗ ಸ್ಪೇಸ್ ಯಾನಗಳ ಮುಂದಾಳತ್ವ ವಹಿಸಿರುವುವು- ಕುತೂಹಲಕಾರಿಯಾಗಿ ಹಲವಾರು ದಶ ಕೋಟಿ ಡಾಲರುಗಳ ವೆಚ್ಚದ ಮಂಗಳ […]

ರನಿಂಗ್ ಬ್ಲೈಂಡ್ / ಡೆಸ್ಮಂಡ್ ಬ್ಯಾಗ್ಲಿ (1970) ( ಇಂಗ್ಲೀಷ್)

ರನಿಂಗ್ ಬ್ಲೈಂಡ್ / ಡೆಸ್ಮಂಡ್ ಬ್ಯಾಗ್ಲಿ (1970) ( ಇಂಗ್ಲೀಷ್) ಕಾದಂಬರಿ ಹೀಗೆ ಆರಂಭವಾಗುತ್ತದೆ: ( ಕನ್ನಡ ಅನುವಾದ ನನ್ನದು): ನೋಡಿ, ಒಂದು ಹೆಣದ ಜತೆ ಇರುವುದೆಂದರೆ ಸ್ವಲ್ಪ ತಲೆ ನೋವಿನ ಕೆಲಸವೇ. ಅದೂ ಸಹಾ ಆ ಶವವಾಗಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ಇಲ್ಲದಿದ್ದರೆ ಇನ್ನೂ ತೊಂದರೆ. ಆದರೆ ಈ ಶವದ ಅವಸ್ಥೆ ನೋಡಿದರೆ ಡಾಕ್ಟರೇ ಏಕೆ, ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸಹಾ ಈತನ ಸಾವು ಹೃದಯ ಸ್ಥಂಭನ ಆಗಿಯೇ ಎಂದು ಸುಲಭವಾಗೇ ಹೇಳಿಬಿಡುತ್ತಿದ್ದ. ಏಕೆಂದರೆ ಸ್ವಲ್ಪ […]

“ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ್ಲೆಮಿಂಗ್

ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೬ “ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್  ಫ್ಲೆಮಿಂಗ್ ಗೂಢಚಾರ/ರಹಸ್ಯ ಏಜೆಂಟ್ ಎಂದರೆ ಜೇಮ್ಸ್ ಬಾಂಡ್ ಎಂದು ಪ್ರಪಂಚದ ಮೂಲೆಮೂಲೆಯಲ್ಲೂ ಚಿಕ್ಕ ಮಕ್ಕಳಿಗೂ ಇಂದು ಪರಿಚಿತ. ಇಂತಾ ಒಬ್ಬ ಲೋಕವೇ ಮರೆಯದ ನಾಯಕ ಪಾತ್ರವನ್ನು ಸೃಷ್ಟಿಸಿದ್ದು ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಖುದ್ದು ಅಧಿಕಾರಿಯಾಗಿ ಸೇವೆ ಸಲ್ಲಿಸಿ ನೈಜ ಅನುಭವ ಪಡೆದ ಪ್ರಸಿದ್ಧ ಲೇಖಕ ಇಯಾನ್( ಅಯಾನ್) ಫ಼್ಲೆಮಿಂಗ್(1908 – 1964). ಎರಡನೇ ಮಹಾಯುದ್ಧದಲ್ಲಿ ತನ್ನ ಸ್ವಂತ ಅನುಭವ […]

ಅಮೆಜಾನ್ ಇಲ್ಲದೆ ಕಿಂಡಲ್ ಪುಸ್ತಕ ಓದಿಗೆ …

ಅಮೆಜಾನ್ ಹೊರತಾಗಿ ಕಿಂಡಲ್ ಪುಸ್ತಕ ಕನ್ನಡದಲ್ಲಿ !! ~~~~~~~~~~~~~~~~~~~~~~~~~~~~~~~~~~~~~ ಅಮೆಜಾನ್ ಕಿಂಡಲ್ ಪುಸ್ತಕ ಮಳಿಗೆಯವರು (KDP) Kindle ಕನ್ನಡ ಪುಸ್ತಕಗಳ ನಿಷೇಧ ಇನೂ ತೆರವು ಮಾಡಿಲ್ಲ ಹಾಗಾಗಿ ನಾವೆಲ್ಲ ಕನ್ನಡ ಕಿಂಡಲ್ ಪುಸ್ತಕದ ನಮ್ಮ ಆಸೆಗೆ ತಡೆಯಾಜ್ಞೆಯಾಗಿದೆ ಎಂದಿದ್ದೆವು.. ಅದರೆ ಬೆಂಗಳೂರಿನ Instascribe.com ವೆಬ್ ತಾಣದವರ ರವರ ಪ್ರಕಾರ ಈಗ ಅವರು ಕನ್ನಡ .ಮೊಬಿ ಪುಸ್ತಕಗಳನ್ನು ಮಾರುತ್ತಿದ್ದಾರೆ..ಅವನ್ನು ನೀವು ನಿಮ್ಮ ಕಿಂಡಲ್ ಯಂತ್ರಗಳಿಗೆ ಕಾಪಿ (sideload)ಮಾಡಿಕೊಂಡರೆ ಮುಗಿಯಿತು. ಅದರಲ್ಲಿ ಕನ್ನಡ ಲಿಪಿ, ಫ಼ಾಂಟ್ಸ್ ಮೂಡಿ ಬರುವಂತೆ ಅವರು […]

ಕನ್ನಡ ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದು ಹೇಗೆ?

Kannada ebooks ( ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದರ ಬಗ್ಗೆ ಮಾಹಿತಿ): ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ – ಇ ಪುಸ್ತಕಗಳ ಖರೀದಿ/ ಜನಪ್ರಿಯತೆ/ ಲಭ್ಯತೆ ಹೆಚ್ಚಾಗಿದೆ. ಮುಂಚಿನಿಂದ ಹಾರ್ಡ್ ಕಾಪಿ ಪುಸ್ತಕಗಳು, ಪತ್ರಿಕೆಗಳು ನಮಗೆ ಪರಿಚಿತವಾದರೂ, ಪ್ರಿಯವಾದರೂ ಅವನ್ನು ಕೊಳ್ಳಲು ಅಂಗಡಿಗಳಿಗೆ ಹೋಗಿ ವಿಚಾರಿಸಿ ಕೊಳ್ಳಬೇಕು. ಈಗಿನ ಕಾಲದಲ್ಲಿ ಈ ಚಟುವಟಿಕೆಗೆ ಪ್ರತ್ಯೇಕ ಸಮಯ/ ಅವಕಾಶದ ಅಭಾವ ಇತ್ಯಾದಿ ಹಲವು ನಿರ್ಬಂಧಗಳು ನಮಗೆ ಕಾಡುತ್ತವೆ. ಅದರಲ್ಲೂ ಎಲ್ಲ ಲೇಖಕರ /ಎಲ್ಲ ವಿಷಯದ ಕನ್ನಡ […]