Your Cart

Need help? Call +91 9535015489

📖 Print books shipping available only in India. ✈ Flat rate shipping

ಪುರೋ(ಅ)ಹಿತ ವರ್ತನೆ

ಪುರೋ(ಅ)ಹಿತ ವರ್ತನೆ                                              – ರಘೋತ್ತಮ ಕೊಪ್ಪರ್ ಮೊನ್ನೆ ಒಂದು ಮಠಕ್ಕೆ ಹೋದಾಗ ನಡೆದ ಪ್ರಸಂಗವಿದು. ಅಲ್ಲಿ ಒಬ್ಬ ಮಧ್ಯ ವಯಸ್ಕ ತನ್ನ ತಾಯಿಯ ಶ್ರಾದ್ಧ ಮಾಡಿಸುತ್ತಿದ್ದ. ಅವನು ಅತಿ ವಿನಯದಿಂದ ಪುರೋಹಿತನ ಮುಂದೆ ಮುಂದೆ ಹೋಗಿ ಕುಳಿತುಕೊಂಡ. ‘ಏನ್ರಿ ಅದನ್ನು ತರಲಿಲ್ಲ ಇದನ್ನು ತರಲಿಲ್ಲ..’ ಹೀಗೆ ಆ ಪುರೋಹಿತ ಅವನ ಅವನ ಮೇಲೆ ರೇಗುತ್ತಿದ್ದ. ಆತ ಮಾತ್ರ ಇಲ್ಲ.. ಇಲ..್ಲ ಎಂದು ತಪ್ಪಿತಸ್ಥ ಭಾವನೆಯಿಂದ ಅವರ ಮುಂದೆ ತಲೆ ತಗ್ಗಿಸಿದ್ದ. ಅದಾದ ನಂತರ ಕರ್ಮವಿಧಿಗಳನ್ನು ಶುರು […]

ಹಿಂಗ್ಯಾಕೆ ನಾವೆಲ್ಲ….! ಭಾಗ -4

                                     ಸಾಮಾಜಿಕ ಜಾಲತಾಣಗಳು                                                                               — ರಘೋತ್ತಮ ಕೊಪ್ಪರ ಇಂದು ಯಾರ ಬಳಿ ನೋಡಿದರೂ ಮೊಬೈಲ್ ವಿಥ್ ಇಂಟರ್ ನೆಟ್ ಕನೆಕ್ಷನ್. ಅದರಲ್ಲೂ ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿರುವುದು ಒಂದು ಕಡ್ಡಾಯ ಮತ್ತು ಹೆಮ್ಮೆ ಎಂಬಂತಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಿರುವುದು ಒಂದು ಕಡೆ ಹೆಮ್ಮೆಯ ವಿಷಯವಾದರೆ ಇನ್ನೊಂದೆಡೆ ನಾವು ಎತ್ತಲೋ ಸಾಗುತ್ತಿದ್ದೇವೆ ಮುಂದೆ ಏನಾಗುವುದೋ ಎಂಬ ಆತಂಕ. ಸಾಮಾಜಿಕ ಜಾಲತಾಣ ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಮತ್ತು ಫೋಟೊಗಳನ್ನು ಶೇರ್ ಮಾಡುವುದು ಅಪಾಯಕರ ಎಂದು […]

ಹಿಂಗ್ಯಾಕೆ ನಾವೆಲ್ಲ….! ಭಾಗ-3 – ಕಸ ಚೆಲ್ಲಬೇಡಿ

  ಕಸ ಚೆಲ್ಲಬೇಡಿ – ರಘೋತ್ತಮ ಕೊಪ್ಪರ್ ಇಂದು ನಮ್ಮ ನಗರಗಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ವಿಲೇವಾರಿಯೂ ಪ್ರಮುಖ ಸಾಲಿನಲ್ಲಿ ಬರುತ್ತೆ. ಎಷ್ಟೋ ಜನರು ಘನ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸುವುದಿಲ್ಲ. ಒಂದೇ ಪ್ಲಾಸ್ಟಿಕ್ ಚೀಲದಲ್ಲಿ ಕಾಯಿಪಲ್ಯೆ ಸಿಪ್ಪೆ, ಒಡೆದ ಬಲ್ಬ್ ಇವೆಲ್ಲ ಹಾಕಿ ಒಗೆದರೆ, ಅದನ್ನು ಪ್ರತ್ಯೇಕಿಸುವವರ ಕೈಗೆ ಬಲ್ಬ್ ಚುಚ್ಚ ಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ! ನಮ್ಮ ಮನೆಯಿಂದ ಹೊರಗೆ ಹೋದರೆ ನಮ್ಮ ಕೆಲಸ ಆಯಿತು ಮುಂದೆ ಏನಾದರೂ ಆಗಲಿ ಎಂಬ […]

ಹಿಂಗ್ಯಾಕೆ ನಾವೆಲ್ಲ…! ಭಾಗ-2

ಮಾಧ್ಯಮಗಳು                                              —– ರಘೋತ್ತಮ ಕೊಪ್ಪರ್ ಇಂದು ಟಿವಿ ಚಾನೆಲ್‍ಗಳ ಸಂಖ್ಯೆ ಅಧಿಕವಾಗಿದೆ. ಎಲ್ಲ ಚಾನೆಲ್‍ಗಳೂ ಜನಮನ ಸೆಳೆಯೋಕೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನೊ ಅಥವಾ ದುರ್ಘಟನೆ, ಅಪರಾಧಗಳ ವೈಭವೀಕರಣವನ್ನು ಮಾಡುತ್ತಲೇ ಇದ್ದಾರೆ. ಟಿವಿ ಚಾನೆಲ್‍ಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಕೇವಲ ಟಿ.ಆರ್.ಪಿ (ಟೆಲಿವಿಷನ್ ರೇಟಿಂಗ್ […]

ಹಿಂಗ್ಯಾಕೆ ನಾವೆಲ್ಲ….! ಭಾಗ -1

ಹಿಂಗ್ಯಾಕೆ ನಾವೆಲ್ಲ….! — ರಘೋತ್ತಮ ಕೊಪ್ಪರ್ ಇಂದಿನ ದಿನಗಳಲ್ಲಿ ನಾವೆಲ್ಲ ಎಷ್ಟೇ ಸುಶಿಕ್ಷಿತರಾಗಿದ್ದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ಗೊತ್ತಿದ್ದೂ ಗೊತ್ತಿಲ್ಲದಂತೆ, ತಿಳಿದರೂ ತಿಳಿಯದವರಂತೆ ಯಾಕೆ ಮಾಡುತ್ತಿದ್ದೇವೆ ಅಥವಾ ಮಾತನಾಡುತ್ತಿದ್ದೇವೆ ಎಂಬುದು ಒಂದು ವಿಪರ್ಯಾಸವೇ ಸರಿ. ಅವುಗಳಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. (ಇಲ್ಲಿ ನಾವು ಎಂದರೆ ಸಾಮಾನ್ಯ ಜನರು.) ಅವುಗಳನ್ನು ಭಾಗಗಳನ್ನಾಗಿ ವಿಂಗಡಿಸಿದ್ದೇನೆ. ಹಿಂಗ್ಯಾಕೆ ನಾವೆಲ್ಲ….! ಭಾಗ – ೧ ಇದೆಂಥ ಸರ್ಕಾರ! ಎಷ್ಟೋ ಸಲ ನಾವು ನಮ್ಮ ಕೈಯಾರೆ ಮತ ಹಾಕಿದ ಸರ್ಕಾರವನ್ನು ಬಯ್ಯುತ್ತೇವೆ. ಮತದಾನದ ಸಮಯದಲ್ಲಿ ಇರಬೇಕಾದ […]

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ- ಶೈಲಜಾ ಹೂಗಾರ ಇಂಟ್ರೊ: ಹುಬ್ಬಳ್ಳಿ–ಧಾರವಾಡದವರು ವರ್ಗವಾಗಿ ಬೇರೆ ಯಾವುದಾದರೂ ರಾಜ್ಯ ಅಥವಾ ದೇಶಕ್ಕೆ ಹೋದಾಗಲೂ ಇಲ್ಲಿನ ಏನೆಲ್ಲವನ್ನು ಮಿಸ್‌ ಮಾಡಿಕೊಳ್ಳುವುದು ಇದೆ. ಹಾಗೇ ಹಳೆಯ ಸಂಗ್ಯಾಬಾಳ್ಯಾ ನಾಟಕದ ಝಲಕ್‌ಅನ್ನು ನಮ್ಮ ಮುಂದಿನ ಪೀಳಿಗೆಗೂ ತೋರಬಯಸಿದರೆ ಅದೂ ಸಾಧ್ಯ. ಬರೀ ಈ ವೆಬ್‌ಸೈಟ್‌ಗೆ ಹೋಗಿ ನಾಟಕ ಡೌನ್‌ಲೋಡ್‌ ಮಾಡಿ. ನಾವು ಮರೆತ ನಮ್ಮ ದೇ ಭಾಷೆಯ ಸೊಗಡಿನ ಡೈಲಾಗ್‌ ಕೇಳುತ್ತ ದೃಶ್ಯಗಳ ಸೊಬಗು ಸವಿಯುತ್ತ, ಪೂರ್ತಿ ಅರ್ಥವಾಗದೆ ಕಣ್‌ ಕಣ್‌ಬಿಡುವ […]

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ                                                                        – ರಘೋತ್ತಮ್ ಕೊಪ್ಪರ್ ವಾಸ್ತು ಶಾಸ್ತ್ರ ಹಾಗೂ ಅದರ ಅನ್ವಯಿಕೆಯ ನಿಯಮ, ವಿಧಿ ವಿಧಾನಗಳನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜಿಜ್ಞಾಸೆ ನಡೆದಿದೆ. ಈಗಾಗಲೇ ಎಷ್ಟೋ ಜನರು ಇಮಾರತುಗಳನ್ನು ಕಟ್ಟಿದ ಮೇಲೆ ಕೆಡವಿದ್ದಾರೆ. ಅದಕ್ಕೆ ಕಾರಣ ವಾಸ್ತು ಕುರಿತು ಅನೇಕ ಆತಂಕಕಾರಿ ಭಾವನೆಗಳನ್ನು ಬೆಳೆಸಿಕೊಂಡು ಕಳವಳ, ಭೀತಿಗೊಂಡು ಯಾರೋ ಏನೋ ಹೇಳಿದರೆಂದು ಮನ ಕೆಡಿಸಿಕೊಂಡು ಮನೆ ಕೆಡವಿದವರು ಹಲವರು.  ತಮ್ಮ ವೃತ್ತಿಯಲ್ಲಿ ಕಂಟಕ ಬರುತ್ತಿದೆ, ವ್ಯಾಪಾರದಲ್ಲಿ ನಷ್ಟವಾಗಿದೆ, ಆರೋಗ್ಯದಲ್ಲಿ ಸಮಸ್ಯೆಯುಂಟಾಗಿದೆ […]

ಇನಿತೇನಿಲ್ಲವೊ ಈ ಚಳಿಗಾಲ

ಇನಿತೇನಿಲ್ಲವೊ ಈ ಚಳಿಗಾಲ — ಶೈಲಜಾ ಹೂಗಾರ ಇನ್ನೇನು ಕುಳಿರ್ಗಾಳಿ ಬೀಸುತಲಿದೆ ಅನ್ನುವಾಗಲೂ ಮಳೆಗಾಲದ ಹಸಿ ಹಸಿ ನೆನಪ ಮಳಿ ಹನಿಯುವುದು ನಿಂತಿರಲಿಲ್ಲ. ಹಳೆಯದರ ಹಳವಂಡ ಅಷ್ಟು ಬೇಗ ಹೋಗಲೊಲ್ಲದಲ್ಲ. ಆ ಗುಟುರುವ ಕಪ್ಪೆ, ಮಳೆಹನಿಗೆ ತೊಪ್ಪೆಯಾದ ಮನವೀಗ ಚಳಿಗೆ ನಿಧಾನವಾಗಿ ಹೇಗೆ ಹೊಂದಿಕೊಳ್ಳುವುದೆಂದು ಹಲವು ಹಾದಿ ಹೊಳಹು. ಕನಸು ಕನವರಿಕೆಗಳಿಗೆಲ್ಲ ಪ್ರಶಸ್ತ ಸುದೀರ್ಘ ಕತ್ತಲು ಕಾಲ. ಅವುಗಳ ನನಸಿಗೆ ಇರುವ ಸಮಯ ಅತ್ಯಲ್ಪ ಎಂಬ ನೀತಿ ಸಾರಿಬಿಡುತ್ತದೆ ನಿಸರ್ಗ ಚಳಿಗಾಲದ ಹಗಲಿನಲೆ. ಮುಂದೆ ಇನ್ನೇನು ಆ […]

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು                                                                                — ರಘೋತ್ತಮ್ ಕೊಪ್ಪರ್ ಇಂದಿನ ದಿನಗಳಲ್ಲಿ ಹಳೆಯ ಕಾಲದ ಸಂತೆಗಳು ಸಿಗುವುದು ತೀರಾ ವಿರಳ. ಎಲ್ಲೊ ಹಳ್ಳಿಗಳಲ್ಲಿ, ಸಣ್ಣ ನಗರಗಳಲ್ಲಿ ಕಾಣಬಹುದು. ಈಗ ಎಲ್ಲಾ ಬದಲಾಗಿಬಿಟ್ಟಿದೆ. ಸೂಪರ್ ಮಾರ್ಕೆಟ್‍ಗಳು ಲಗ್ಗೆ ಇಟ್ಟು ಆ ಹಳೆಯ ಮಾರುಕಟ್ಟೆಯ ಸೊಗಡನ್ನು ನಮ್ಮಿಂದ ದೂರವಾಗಿಸಿಬಿಟ್ಟಿವೆ. ನಮ್ಮ ಮುಂದಿನ ಜನಾಂಗದವರಿಗೆ ಇವೆಲ್ಲವನ್ನು ಹೇಗೆ ತೋರಿಸಬೇಕು? ಚಿಂತಿಸಬೇಡಿ ಅದಕ್ಕೆಂದೆ ಇದೆ ಒಂದು ಸೂಕ್ತ ಪ್ರವಾಸಿ ಕೇಂದ್ರ. ಅದರ ಹೆಸರು ಉತ್ಸವ ರಾಕ್ ಗಾರ್ಡನ್. […]