Your Cart

Need help? Call +91 9535015489

📖 Print books shipping available only in India. ✈ Flat rate shipping

ಶ್ರೀ ವಿಷ್ಣು ಸಹಸ್ರನಾಮ — ಭಾಗ 6

ಶ್ರೀ ಗುರುಭ್ಯೋ ನಮಃ ಹರಿಃ ಓಂ ಸಂಪತ್ತು ಬೇಕೆನ್ನುವವರುˌ ದುಡ್ಡು-ಕಾಸು ಬೇಕೆನ್ನುವವರುˌ ಶ್ರೀಮಂತಿಕೆಯ ಅಪೇಕ್ಷೆ ಉಳ್ಳವರುˌ ಬಡತನದ ಬೇಗೆಯಿಂದ ಬೆಂದವರುˌ ಆರ್ಥಿಕ ತೊಂದರೆಯಿಂದ ನೊಂದವರುˌ ದಾರಿದ್ರ್ಯದ ಸಂಕಟದಿಂದ ಕುಗ್ಗಿ ಹೋದವರುˌ ಸಾಲದ ಹೊರೆಯಿಂದ ಬಗ್ಗಿ ಹೋದವರುˌ ಭಾಗ್ಯ ಸೌಭಾಗ್ಯಗಳು ಬೇಕೆಂದು ಪ್ರಾರ್ಥಿಸುವರು ಈ ಕೆಳಗಿನ ಶ್ಲೋಕವನ್ನು ಪಠಿಸಬೇಕು ಪಠಿಸಬೇಕು. ” ಶ್ರೀಧಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿ ಶ್ರೀವಿಭಾವನಃ | ಶ್ರೀಧರಃ ಶ್ರೀಕರ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ||” ಗಂಡು ಹೆಣ್ಣುಗಳಲ್ಲಿ ಪ್ರೇಮ ಇನ್ನೂ ಧೃಡವಾಗದಿದ್ದರೆˌ ಪ್ರೇಮ ವೈಫಲ್ಯದ ಲಕ್ಷಣಗಳು ಇದ್ದರೆˌ […]

ಶ್ರೀ ವಿಷ್ಣು ಸಹಸ್ರನಾಮ — ಭಾಗ 5

ಶ್ರೀ ಗುರುಭ್ಯೋ ನಮಃ ಹರಿಃ ಓಂ ಮಕ್ಕಳಿಗೆˌ ವಿದ್ಯಾರ್ಥಿಗಳಿಗೆˌ ಒಳ್ಳೆಯ ಬುದ್ಧಿˌ ಒಳ್ಳೆಯ ಭಾವನೆˌ ಗುರುಹಿರಿಯರಲ್ಲಿ ಗೌರವˌ ವಿದ್ಯೆಯಲ್ಲಿ ಆಸಕ್ತಿˌ ಓದಿದ್ದು ನೆನಪಿನಲ್ಲಿ ಉಳಿಯಬೇಕಾದರೆˌ ಅಭ್ಯಾಸದಲ್ಲಿ ಉತ್ತಮ ಯಶಸ್ಸು ಗಳಿಸಬೇಕಾದರೆˌ ಶಿಕ್ಷಣದಲ್ಲಿ ಯಾವ ಅಡೆತಡೆಗಳಿಲ್ಲದೆ ಹಂತಹಂತವಾಗಿ ಮುಂದಿನ ತರಗತಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ಯಶಸ್ವಿ ವಿದ್ಯಾರ್ಥಿ ಅಂತ ಆಗಬೇಕಾದರೆ ಈ ಸ್ತೋತ್ರವನ್ನು ಹೇಳಿಕೊಳ್ಳಬೇಕು. ತುಂಬಾ ಚಿಕ್ಕವರಾದರೆ ಮಕ್ಕಳ ಪರವಾಗಿ ತಂದೆ-ತಾಯಿಯರು ಹೇಳಿಕೊಳ್ಳಬಹುದು. ಸರ್ವಗಸ್ಸರ್ವವಿದ್ಭಾನುಃ ವಿಷ್ವಕ್ಸೇನೋ ಜನಾರ್ಧನ | ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ|| ನಮ್ಮ […]

ಶ್ರೀ ವಿಷ್ಣು ಸಹಸ್ರನಾಮ ಭಾಗ 4

||ಶ್ರೀ ಗುರುಭ್ಯೋ ನಮಃ ಹರಿಃ ಓಂ|| ನಮಗೆ ಅನೇಕಬಾರಿ ವಿಚಿತ್ರವಾದ ತೊಂದರೆಯಾಗಿ ನೋವು ದುಃಖದ ತೀವ್ರತೆ ಜೀವನದಲ್ಲಿ ಜಿಗುಪ್ಸೆ ತರಬಹುದು. ರೋಗ-ರುಜಿನˌ ಆದಿವ್ಯಾದಿˌ ಸಾಲಗಾರರ ಬಾಧೆˌ ಆರ್ಥಿಕ ತೊಂದರೆˌ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆˌ ಅಂದುಕೊಂಡ ಕೆಲಸ ಆಗದೇ ಇರುವುದುˌ ವೈವಾಹಿಕ ಜೀವನದ ಸಮಸ್ಯೆˌ ಪ್ರೀತಿಗಳಲ್ಲಿ ವೈಫಲ್ಯˌ ದಾಂಪತ್ಯದಲ್ಲಿ ಬಿರುಸುˌ ಗಂಡ-ಹೆಂಡಿರ ಮುನಿಸುˌ ಕೆಲಸದಲ್ಲಿ ಬಡ್ತಿ ದೊರಕದಿರುವುದು! ಉತ್ತಮ ಕೆಲಸ ದೊರೆಯದಿರುವುದುˌ ಕೆಟ್ಟ ಸ್ವಪ್ನಗಳುˌ ಶತ್ರು ಬಾಧೆˌ ಭಯ ಮುಂತಾದ ನಾನಾ ಸಮಸ್ಯೆಗಳು ನಮ್ಮ ಬದುಕಿನಲ್ಲಿ ಬರಬಹುದು. ಈ […]

ಶ್ರೀ ವಿಷ್ಣು ಸಹಸ್ರನಾಮ (ಭಾಗ 3)

ಶ್ರೀ ಗುರುಭ್ಯೋ ನಮಃ ಹರಿಃ ಓಂ ಮಹಾಭಾರತದ ಪ್ರತಿಯೊಂದು ಶ್ಲೋಕˌ ಪ್ರತಿಯೊಂದು ಪದˌ ಪ್ರತಿಯೊಂದು ಅಕ್ಷರ ಎಲ್ಲರಿಗಿಂತ ಎತ್ತರದಲ್ಲಿರುವ ಭಗವಂತನ ಬಗ್ಗೆ ಹೇಳುತ್ತವೆ. ಭಾರತದಲ್ಲಿ 100000 ಶ್ಲೋಕಗಳಿವೆ. ಅಂದರೆ ಒಟ್ಟಿಗೆ 31ಲಕ್ಷ ಅಕ್ಷರಗಳಿವೆ. ಪ್ರತಿಯೊಂದು ಅಕ್ಷರ ಭಗವಂತನ ನಾಮವಾಗಿವೆ. ಈ ರೀತಿ ಭಗವಂತನ ಗುಣಗಾನ ಮಾಡುವ ಪದಪುಂಜ. ಸಾಮಾನ್ಯ ಜನರಿಗೆ 100000 ಶ್ಲೋಕಗಳನ್ನು ತಿಳಿಯಲು ಕಷ್ಟವಾಗಬಹುದು ಎಂದು ಮಹಾಭಾರತದಿಂದ ಅಮೂಲ್ಯವಾದ ರಸಗಳನ್ನು ವೇದವ್ಯಾಸರು ನಮ್ಮ ಮುಂದೆ ಇಟ್ಟಿದ್ದಾರೆ. ಅವೇ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ. ವೇದಗಳಿಗೆ ಕನಿಷ್ಠ […]

ಶ್ರೀ ವಿಷ್ಣು ಸಹಸ್ರನಾಮ (ಭಾಗ 2)

ಶ್ರೀ ಗುರುಭ್ಯೋ ನಮಃ ಹರಿಃ ಓಂ ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮ್ಮ ಹೆಸರು ಗುಣವಾಚಕವಲ್ಲ. ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತ ಸಹಸ್ರನಾಮˌ ಶಿವ ಸಹಸ್ರನಾಮˌ ಗಣೇಶ ಸಹಸ್ರನಾಮˌ ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವˌ ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವˌ ಮಹಾಭಾರತದ ಭಾಗವಾಗಿರುವˌ ಸುಪ್ರಸಿದ್ಧ ಸಹಸ್ರನಾಮ […]

ಶ್ರೀ ವಿಷ್ಣು ಸಹಸ್ರ ನಾಮ-ಭಾಗ-1

ಶ್ರೀ ವಿಷ್ಣು ಸಹಸ್ರ ನಾಮ ಶ್ರೀ ಗುರುಭ್ಯೋ ನಮಃ ಹರಿಃ ಓಂ ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರುˌ ಹಿರಿಯರುˌ ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ನಂತರ ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಭೀಷ್ಮಾಚಾರ್ಯರ ಬಳಿಗೆ ಕರೆತಂದು ಆತನಿಗೆ ಧರ್ಮ ಪಾಠವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಧರ್ಮದ ಪರ […]

ಪಂಚಾಂಗ – ಭಾಗ 1

ನಾವು ನಮ್ಮ ದೈನಿಕ ಜೀವನದಲ್ಲಿ ಅನೇಕ ಬಾರಿ ಪಂಚಾಂಗ ಎಂಬ ಶಬ್ದವನ್ನು ಬಳಸುತ್ತೇವೆ. ಆದರೆ ಬಹಳಷ್ಟು ಜನರಿಗೆ ಪಂಚಾಂಗ ಅಂದರೆ ಏನು ಎಂದು ತಿಳಿದಿರುವದಿಲ್ಲ. ನಮ್ಮ ಹಿರಿಯರು ಆ ಪದವನ್ನು ಬಳಸುತ್ತಿದ್ದರು, ನಾವೂ ಬಳಸುತ್ತಿದ್ದೇವೆ ಎಂಬುದು ಅವರ ವಿವರಣೆ. ಈ ಲೇಖನಮಾಲೆ ಪಂಚಾಂಗ ಅಂದರೇನು? ಅದರಲ್ಲಿನ ವಿವಿಧ ಅಂಗಗಳು ಯಾವವು ? ಎಂಬುದರ ಬಗ್ಗೆ ಒಂದು ಪ್ರಯತ್ನ. ನಾವು ನಮ್ಮ ದೈನಂದಿ ಕಾರ್ಯಗಳಲ್ಲಿ ಗಂಟೆ, ತಾರಿಖು, ತಿಂಗಳು ಮುಂತಾದವುಗಳನ್ನು ಬಳಸುತ್ತೇವೆ. ಪಂಚಾಂಗ ಐದು ಅಂಗಗಳಿಂದ ಕೋದಿದ್ದಾಗಿದೆ. ಅವು […]

ಅಧಿಕ ಮಾಸ – ಸಂಕ್ಷಿಪ್ತ ವಿವರಣೆ

ರವಿ ಅಶ್ವಿನಿ ನಕ್ಷತ್ರದ ಆರಂಭದ ಬಿಂದುವಿನಿಂದ ಪ್ರಾರಂಭಿಸಿ ಕ್ರಾಂತಿವ್ರತ್ತದಲ್ಲಿ ಸಂಚರಿಸುತ್ತ ತಿರುಗಿ ಅದೇ ಬಿಂದುವಿನ ಬಳಿ ಬರುವ ಕಾಲಾವಧಿಗೆ ಒಂದು ಸೌರ ವರ್ಷ ಎನ್ನುತ್ತಾರೆ. ಸೂರ್ಯ ಸಿದ್ಧಾಂತದ ಪ್ರಕಾರ ಸೌರ ವರ್ಷದ ಕಾಲಾವದಿ ೩೬೫ ದಿವಸ ೧೫ ಘಟಿಕ ೨೨ ಪಳ ೫೨.೫೮ ವಿಪಳ ಎಂದು ಹೇಳಲಾಗಿದೆ. ಚಂದ್ರ ಹಾಗೂ ರವಿ ಒಂದು ಯುತಿ ಬಿಂದುವಿನಿಂದ (ಅಮಾವಾಸ್ಯೆ) ತಮ್ಮ ದೈನಂದಿನ ಗತಿಯಿಂದ ಸಂಚರಿಸುತ್ತ ಮುಂದಿನ ಯುತಿ ಬಿಂದುವಿನ (ಅಮಾವಾಸ್ಯೆ) ವರೆಗೆ ತಲುಪುವ ಕಾಲಕ್ಕೆ ಒಂದು ಚಾಂದ್ರಮಾಸ ಎನ್ನುತ್ತಾರೆ. […]