ಆರೋಗ್ಯವರ್ಧಕ ಕೆಂಪು ಬಾಳೆ…! ಪ್ರಪಂಚದಲ್ಲಿ ಹೆಚ್ಚು ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡಾ ಒಂದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಪರಿಪೂರ್ಣ ಆಹಾರಕ್ಕೆ ಸುಮನಾಗಿರುವುದೂ ಹೌದು. ಒಂದು ಸಂಶೋಧನೆಯ ಪ್ರಕಾರ ತೊಂಭತ್ತು ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು ಕೇವಲ ಎರಡು ಬಾಳೆಹಣ್ಣುಗಳು ಸಾಕಂತೆ. ಕಾರಣ ಇದರಲ್ಲಿ ಶಕ್ತಿಯ ಜೊತೆಗೆ ನಾರಿನಂಶ ಹಾಗೂ ಮೂರು ವಿಧದ ಪ್ರಾಕೃತಿಕ ಸಕ್ಕರೆಗಳಿವೆ ಕಡಿಮೆ ಬೆಲೆಯಲ್ಲಿ ಅಧಿಕ ಪೌಷ್ಟಿಕಾಂಶವನ್ನು ಕೊಡುವ ಜನಪ್ರಿಯ ಹಣ್ಣು ಎಂದರೆ ಅದು ಬಾಳೆಹಣ್ಣು. ಸಾಮಾನ್ಯವಾಗಿ ಬಾಳೆ ಹಣ್ಣು ಎಂದ […]
