ಬಾವಿಗಳಿಗೆ ಕಾಯಕಲ್ಪ…! ನೀರಿನ ಸೌಕರ್ಯ ಒದಗಿಸುವವನನನ್ನು ಪುಣ್ಯಾತ್ಮ ಎನ್ನುತ್ತೇವೆ. ಬಿರುಬೇಸಗೆಯಲ್ಲಿ ದಾಹವನ್ನು ತಣಿಸಿದರೆ ಅಶ್ವಮೇಧ ಯಾಗ ಮಾಡಿದ ಮಹಾಫಲವಂತೆ ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ… ಮಾಡಿಸು ಎಂದು ಮುಂತಾಗಿ ಒಳ್ಳೆಯ ಕೆಲಸಗಳನ್ನೇ ಮಾಡಬೇಕೆಂಬ ಪಾಠ ಹಿಂದೆ ಎಳವೆಯಲ್ಲೇ ಬೋಧನೆಯಾಗುತ್ತಿತ್ತು ಆದರೆ ಇಂದು…? ಆಯಾ ಊರಿನಲ್ಲಿ ನೀರಿನ ಉಗ್ರಾಣಗಳಂತಿದ್ದ ಕೆರೆ, ಬಾವಿಗಳಿಂದು ಹಾಳು ಬಿದ್ದು ಕಸದ ತೊಟ್ಟಿಗಳಾಗಿವೆ. ಕೊಳವೆ ಬಾವಿಗಳ ಅಬ್ಬರದಲ್ಲಿ ತೆರೆದ ಬಾವಿಗಳನ್ನು ಮರೆತೇಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಅಂತರ್ಜಲ ಕಾಪಾಡುತ್ತಿದ್ದ, ಮಳೆ ನೀರು ಸಂಗ್ರಹಿಸುತ್ತಿದ್ದ ತೆರೆದ […]
