ಬಣ್ಣಿಸಲಾಗದ ಸಂತೆ ಒಂದು ಗೊತ್ತಾದ ಸ್ಥಳದಲ್ಲಿ ವಾರದ ಒಂದು ನಿರ್ದಿಷ್ಟ ದಿನ, ಒಂದು ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಒಂದುಗೂಡಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವ, ಇಲ್ಲವೇ ಕೊಳ್ಳುವ ಆರ್ಥಿಕ ವ್ಯವಸ್ಥೆಯೇ ಸಂತೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂತೆ ಜರುಗುತ್ತಿದ್ದುದಕ್ಕೆ ಶಾಸನಾಧಾರಗಳಿವೆ. ‘ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ….!’ ‘ಚಿಂತಿಲ್ಲದ ಮುಕ್ಕನಿಗೆ ಸಂತೇಲೂ ನಿದ್ದೆ…! ಎಂಬ ಗಾದೆಗಳಂತೆ, ‘ಸಂತೆ ಜನಕೆಲ್ಲ ಒಂದೇ ಹಾಸಿಗೆ ಒಂದೇ ಹೊದಿಕೆ’ (ಭೂಮಿ-ಆಕಾಶ), ‘ಸಂತ್ಯಾಗ್ ತರ್ತಾರೆ ಮನ್ಯಾಗ್ […]
