ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ…! ಯ್ಯಾಂಟ್ ಲಯನ್ ಎಂಬ ಇರುವೆಗಳ ಸಿಂಹ ಸ್ವಪ್ನ ಬಳಕೆಯ ಮಾತಿನ ‘ಗುಬ್ಬಚ್ಚಿ ಹುಳ’ ನೆಲದೊಡಲನ್ನು ಮುಳ್ಳಿನಂಥ ತನ್ನ ಕೊಂಬಿನಿಂದ ಸಟಸಟನೆ ಬಗೆಯುವುದನ್ನು ನೋಡಿದರೆ, ಮಾನವ ನಿರ್ಮಿತ ಯಾವುದೋ ಯಂತ್ರಕ್ಕೆ ಸಡ್ಡು ಹೊಡೆಯುವಂತೆ ಭಾಸವಾಗುತ್ತದೆ. ಯರ್ರಾಬಿರ್ರಿಯಾಗಿ ಕುಣಿತೋಡದೇ, ಒಂದು ನಿರ್ದಿಷ್ಟ ಜಾಗದಲ್ಲಿ ಹಲವಾರು ಕುಣಿಗಳನ್ನು ಒಂದು ಹದದಲ್ಲಿ ನಿರ್ಮಿಸುವ ಇವುಗಳ ತಾಂತ್ರಿಕತೆ, ತಲ್ಲೀನತೆಗಳು ವಿಸ್ಮಯಗೊಳಿಸುವುದಂತೂ ನಿಜ. ಈ ಜಗತ್ತು ವಿಸ್ಮಯಗಳ ಗೂಡು. ನಾವು ಯೋಚಿಸಲೂ ಆಗದಂತಹ ಅನೇಕ ಅಚ್ಚರಿಗಳನ್ನು ನಿಸರ್ಗ ಇಲ್ಲಿ ಸೃಷ್ಟಿಸಿದೆ. […]
