ಎರಡು ಪತ್ರಗಳು ಮಾಲತೀ ಅಕ್ಕಾ, ನೀವು ಬರದ ಕಾಗದ ತಲುಪೇದ ಮತ್ತ ನೀವು ಹೇಳಿದ ಧಾರವಾಡ ನೆನದ ಮನಸ ಮತ್ತ ಚಿತ್ತೀ ಮಳಿಯಾಂಗ ಅತ್ತು ತೋದ ತೊಪ್ಪೀ ಆಗೇದ. ಸಟ್ಟ ಸರಹೊತ್ತಿನಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ನೆನಪಾಗುವ ನನ್ನ ಧಾರವಾಡದ ನೆತ್ತಿಯ ಮೇಲೆ ಆ ಮೊದಲಿನಂತೆಯೇ ಮಳೆ ಸುರಿಯುತ್ತದೆಯೇ ? ಕರ್ನಾಟಕ ಕಾಲೇಜು ಹಿಂಭಾಗದ ಕಳ್ಳ ಕಿಂಡಿಯಂತಹ ದಾರಿಯ ಮರದ ನೆರಳಿಗೇ ಕತ್ತಲೆಯಾಗುವ ಕಾಲುದಾರಿಯಲ್ಲಿ ಆ ಹುಡುಗಿ ಅಂಜುತ್ತಲೇ ಬಾಟನೀ ಕ್ಲಾಸಿಗೆ ಬಂದು ಹಾಜರೀ ಹಾಕುತ್ತಾಳೆಯೇ ? ಮಿಸ್ಕಿನ್ […]
