ಗೂಡು…! ಪಕ್ಷಿ ಜಗತ್ತಿನ ಅತಿ ಸೋಜಿಗವೆಂದರೆ ಅದು ಅವುಗಳ ಗೂಡು…! ಅವು ಗೂಡು ಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ, ಕುಶಲತೆಯನ್ನೂ ಪ್ರದರ್ಶಿಸುತ್ತವೆ. ಕೊಕ್ಕು ಕಾಲುಗಳನ್ನು ಕುಶಲತೆಯಿಂದ ಬಳಸುತ್ತಾ, ರೆಕ್ಕೆಗಳನ್ನು ಬಡಿಯುತ್ತಾ ಗೂಡು ನಿರ್ಮಿಸುವುದನ್ನು ನೋಡುವುದೇ ಚೆನ್ನ. ಗೂಡುಗಳ ರಚನೆ, ಕಟ್ಟುವ ಜಾಗದ ಆಯ್ಕೆ, ಕಟ್ಟುವ ವಿಧಾನ, ವಿನ್ಯಾಸ ಇವೆಲ್ಲದರಲ್ಲೂ ಅವುಗಳದ್ದೇ ಆದ ವಿಶೇಷತೆ ಇದೆ. ವಿಸ್ಮಯವೆಂದರೆ ಯಾವ ಹಕ್ಕಿಯೂ ಗೂಡು ಕಟ್ಟುವ ಕಲೆಯನ್ನು ಬೇರೆಯದರಿಂದ ಕಲಿಯುವುದಿಲ್ಲ. ಪ್ರತಿ ಪ್ರಭೇದದ ಹಕ್ಕಿಗೂ ಅದರದ್ದೇ ಆದ ವಿಶಿಷ್ಟ ಗೂಡು ನಿರ್ಮಾಣ ತಂತ್ರ […]
