ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ.. ನಮ್ಮ ಜೀವನವೇ ಒಂದು ಕುರುಕ್ಷೇತ್ರ. ನಾವೆಲ್ಲರೂ ಅರ್ಜುನನಂತೆ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡದಿದ್ದರೂ ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಶ್ನೆಗಳೆದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಯಾವ ರೀತಿಯಲ್ಲಿ ಧರ್ಮ ಸಂಕಟಕ್ಕೊಳಗಾದನೋ ಅದೇ ರೀತಿಯ ಪ್ರಸಂಗಗಳನ್ನು ಅನುಭವಿಸಿದವರೇ. ಆ ಗೋವಿಂದನೇ ನಮ್ಮ ಜೀವನದ ರಥಕ್ಕೂ ಕೂಡ ಸಾರಥಿಯೇ. ಕುರುಕ್ಷೇತ್ರದಲ್ಲಿ ಅಂಥದೊಂದು ಧರ್ಮಕ್ಷೇತ್ರವನ್ನು ನಮಗೆ ತೋರಿಸುವ ಪ್ರಯತ್ನ ನಮ್ಮ ಗೀತಾಚಾರ್ಯನದು. ಐದು ಸಾವಿರ ವರ್ಷಗಳ ನಂತರವೂ […]
