ಮೋಕ್ಷ ಮೋಕ್ಷವೆಂಬ ಪದ ಬಹಳ ಪರಿಚಿತವಾದರೂ, ಮೋಕ್ಷವು ಯಾರೋ ಕೆಲವು ಅಧ್ಯಾತ್ಮಪರರಾದ ವ್ಯಕ್ತಿಗಳಿಗೆ ಮೀಸಲಾದ ವಿಷಯವಲ್ಲ. ಆದರೆ, ಇದು ಎಲ್ಲರಿಗೂ ಅಗತ್ಯವೇ ಎನ್ನುವ ಪ್ರಶ್ನೆಯೂ ಸಹಜವಾಗೇ ಕಾಡುತ್ತದೆ. ಮೋಕ್ಷ ಪದದ ಅರ್ಥವೇ ಬಿಡುಗಡೆ. ಆದರೆ ಯಾವುದರಿಂದ ಬಿಡುಗಡೆ? ಅಧ್ಯಾತ್ಮ ದೃಷ್ಟಿಕೋನದಲ್ಲಿ ಮೋಕ್ಷವೆಂದರೆ, ಅವಿದ್ಯಾ, ಕಾಮ, ಕರ್ಮ ಸಂಕೋಲೆಯ ಬಂಧನದಿಂದ ಬಿಡುಗಡೆ. ಇಲ್ಲಿ ಅವಿದ್ಯೆ ಎಂದರೆ ಅಜ್ಞಾನ; ಅದರಿಂದಾಗಿ ಬಗೆಬಗೆಯಾದ ಕಾಮನೆಗಳುಂಟಾಗಿ ಅವುಗಳನ್ನು ಪೂರ್ಣಗೊಳಿಸಿಕೊಳ್ಳುಲು ಕರ್ಮಗಳಲ್ಲಿ ತೊಡಗಬೇಕಾಗುತ್ತದೆ. ಈ ಕರ್ಮಗಳೇ ನಮ್ಮ ಜೀವನವನ್ನು ಬಂಧಿಸುತ್ತವೆ. ಉದಾಹರಣೆಗೆ, ನಾವು ಅಂತರ್ಮಗ್ನರಾಗಿ […]
