ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೬ “ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ್ಲೆಮಿಂಗ್ ಗೂಢಚಾರ/ರಹಸ್ಯ ಏಜೆಂಟ್ ಎಂದರೆ ಜೇಮ್ಸ್ ಬಾಂಡ್ ಎಂದು ಪ್ರಪಂಚದ ಮೂಲೆಮೂಲೆಯಲ್ಲೂ ಚಿಕ್ಕ ಮಕ್ಕಳಿಗೂ ಇಂದು ಪರಿಚಿತ. ಇಂತಾ ಒಬ್ಬ ಲೋಕವೇ ಮರೆಯದ ನಾಯಕ ಪಾತ್ರವನ್ನು ಸೃಷ್ಟಿಸಿದ್ದು ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಖುದ್ದು ಅಧಿಕಾರಿಯಾಗಿ ಸೇವೆ ಸಲ್ಲಿಸಿ ನೈಜ ಅನುಭವ ಪಡೆದ ಪ್ರಸಿದ್ಧ ಲೇಖಕ ಇಯಾನ್( ಅಯಾನ್) ಫ಼್ಲೆಮಿಂಗ್(1908 – 1964). ಎರಡನೇ ಮಹಾಯುದ್ಧದಲ್ಲಿ ತನ್ನ ಸ್ವಂತ ಅನುಭವ […]
