ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ ನಮ್ಮ ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು. ಶ್ರೀಮದ್ಭಗವದ್ಗೀತೆಯ ಜಗತ್ತಿನ ಅನೇಕ ಧರ್ಮಗ್ರಂಥಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿದೆಯಲ್ಲದೆ ನಮ್ಮ ಭಾರತೀಯರ ಪವಿತ್ರ ಗ್ರಂಥ. ಹಿಂದೂ ತತ್ವಶಾಸ್ತ್ರದ ಮತ್ತು ಆಚಾರಸಂಹಿತೆಯ ಅತ್ಯಂತ ಪ್ರಮಾಣೀಕೃತ ಮೂಲಗ್ರಂಥಗಳಲ್ಲಿ ಇದೂ ಒಂದು. ಭಗವಾನ್ ವಾಸುದೇವನೇ ಇದರ ಕರ್ತೃ.. ಅವನ […]
