ನೀತಿ ಮತ್ತು ನೈತಿಕತೆ ನಾನು ಆಯ್ಕೆ ಮಾಡಿಕೊಂಡ ವಿಷಯ ನೀತಿ ಮತ್ತು ನೈತಿಕತೆ. ಪುರಾತನ ಕಾಲದಿಂದ ಇಂದಿನವರೆಗೂ ನಾವು ಮಾನವನ ಜೀವನದ ರೀತಿಯತ್ತ ದೃಷ್ಟಿ ಹರಿಸಿದರೆ ಕಂಡುಬರುವ ಒಂದು ಮುಖ್ಯ ಅಂಶವೆಂದರೆ ಒಬ್ಬಂಟಿ ಮಾನವನಿರಲಿ, ಕುಟುಂಬವಿರಲಿ, ಸಮಾಜವಿರಲಿ ಅಥವಾ ದೇಶವೇ ಇರಲಿ, ಅದರ ಸರಳ ನಿರ್ವಹಣೆಗೆ ಒಂದು ನೀತಿ ಸಂಹಿತೆ ಇರಲೇಬೇಕೆಂಬುದು. ನೀತಿ ಸಂಹಿತೆ ಇರದೇ ಹೋದಲ್ಲಿ ಮಾನವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೇ ಸರಿ. ನೀತಿಗಳಲ್ಲಿ ಸಾವಿರಾರು ವರ್ಷಗಳ ನಂತರ ಕೂಡ ಪ್ರಸಿದ್ಧವಿರುವ ನೀತಿಗಳೆಂದರೆ ವಿದುರನೀತಿ […]
