ಸತ್ಯಾನ್ವೇಷಣೆ ನಮ್ಮ ಪುರಾಣಗಳಲ್ಲಿಯ ಸಮುದ್ರ ಮಂಥನ ಪ್ರಸಂಗವು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ದೇವತೆಗಳು ಮತ್ತು ರಾಕ್ಷಸರು ಮಂದಾರ ಪರ್ವತವನ್ನು ಕಡೆಗೋಲಾಗಿ ಆಮೆಯ ಬೆನ್ನಿನ ಮೇಲೆ ಇಟ್ಟು (ಕೂರ್ಮಾವತಾರ) ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರವನ್ನು ಕಡೆದಿದ್ದರು, ಸಮುದ್ರದಲ್ಲಿ ಮಂಥನವು ನಡೆದಿತ್ತು.. ಅದರಲ್ಲಿ ಅನೇಕ ಒಳ್ಳೆಯ ವಸ್ತುಗಳು ದೊರಕಿದ್ದವು.. ಲಕ್ಷ್ಮೀ ದೇವಿ. ಉಚ್ಚೈಶ್ರವ ಇತ್ಯಾದಿ.. ಅದರೊಂದಿಗೆ ಅನೇಕ ಕೆಡುಕನ್ನುಂಟುಮಾಡುವ ವಸ್ತುಗಳೂ ದೊರಕಿದ್ದವು.. ಅವುಗಳನ್ನು ಅರಗಿಸಿಕೊಳ್ಳಬಹುದಾದ ಸಾಮರ್ಥ್ಯವನ್ನು ಹೊಂದಿರುವ ದೇವತೆಗಳು ಅವುಗಳನ್ನು ಸ್ವೀಕರಿಸಿ, ಜಗತ್ತಿನ ನಾಶವನ್ನು ತಪ್ಪಿಸಿದ್ದರು. ಇದನ್ನು […]
