ಶ್ರಾವಣ ಬಂತು ಶ್ರಾವಣ ಬಂತು ಆನಂದ ತಂತು ಹಬ್ಬ ಹರಿದಿನಗಳ ಶುಭವೇಳೆ ತಂತು ಕಡಬು ಹೋಳಿಗೆ ಪಾಯಸಗಳ ಆಗರ ಮನೆ ಮನೆಯಲೂ ಆನಂದದ ಸಾಗರ ನೀಲಾಕಾಶ ಬದಲಾಯಿತು ಮೈಬಣ್ಣ ಕಪ್ಪಾಯಿತು ಕಪ್ಪು ಮೈಯ್ಯಲಿ ಮೇಘಗಳಾವೃತ ಗಿರಿಪರ್ವತಗಳಿಗೂ ಮುತ್ತನಿಕ್ಕುತ ಸುರಿಸುತಿಹ ಜಲಧಾರೆ ಭುವಿಗೆ ಧರೆಯಲ್ಲಿ ಮೆರೆದೀತು ತಂಪು ರಮಣೀಯತೆಯ ಕಂಪು ಹಕ್ಕಿಗಳ ಉಲಿಯುವಿಕೆಯ ಇಂಪು ಭೂತಾಯಿ ಮೈಬಸಿರು ಅದಕಾಗೇ ತೊಡೆವಳು ಹಸಿರು ಭೂಗಿರಿ ಕಂದರಗಳೆಲ್ಲದರ ಮೇಲೆ ಹಸಿರು ಹೊದಿಕೆ ಶುಭ್ರ ಜಲಧಾರೆ ಆಗಸದಿ ಭೂಮಡಿಲ ಪದರಕೆ ರವಿ ತಾ […]
