ಮೋಸ ಹೋಗದಿರಿ! ಜೋಕೆ ಹೊಂಚು ಹಾಕಿ ಸಂಚು ಮಾಡಿ ವಂಚಿಸುವವರು ಇದ್ದಾರೆ ಗುರುವಾರ ಮುಂಜಾನೆ ನನ್ನ ಮೇಲ್ ಬಾಕ್ಸ್ ಗೆ “ಯು ವನ್ ಫ್ರಾಮ್ ಮೈಕ್ರೊಸಾಫ್ಟ್ ಪ್ರ್ರಮೊಷನ್ಸ್” ಅಂತ ಒಂದು ಮೇಲ್ ಬಂತು. ಬೆಳಿಗ್ಗೆ ಬೆಳಿಗ್ಗೆ ಇದೆಂತಾ ಚೋಕ್ ಅಂತೀರಾ. ಅಬ್ಬಾ! ಒಟ್ಟು ಒಂದು ಮಿಲಿಯನ್ ಪೌಂಡ್ಸ್ ಅಂತ ಇತ್ತು. ಇದೆನಪಾ ನನಗೆ ಅಷ್ಟು ಹಣ ಬಂದರೆ ಯಾವ ಕಾರನ್ನು ಕೊಳ್ಳಲಿ, ಮನೆ ಎಲ್ಲಿ ಕಟ್ಟಲಿ ಎಂಬ ನೂರಾರು ಆಸೆಗಳು ತಟ್ಟನೆ ಮನದಲ್ಲಿ ಹುಟ್ಟಿದವು, ಇದು ನಿಜವೇ […]
Month: November 2015
ಏ.ಟಿ.ಎಂ ನಲ್ಲಿ ಸಾಲಾಗಿ ನಿಂತಾಗ!
ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ! ತಿಂಗಳು ಶುರುವಾದರೆ ಎಲ್ಲರೂ ಸಂಬಳವನ್ನು ಡ್ರಾ ಮಾಡುವುದಕ್ಕಾಗಿ ಬ್ಯಾಂಕಿಗೆ ಧಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏ.ಟಿ.ಎಂ (ಅಟೋಮೆಟೆಡ್ ಟೆಲ್ಲರ್ ಮಶಿನ್), (ಆಲ್ ಟೈಂ ಮನಿ ಅಂತಲೂ ಕರೆಯಬಹುದು) ಬಂದಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಂಬಳವನ್ನು ಪಡೆಯಬೇಕಾದ ಪರಿಸ್ಥಿತಿ ಈಗಿಲ್ಲ ಅಂತ ಎಲ್ಲರೂ ನಿಟ್ಟುಸಿರು ಬಿಟ್ಟರೂ ಈ ಸರದಿ ನಿಲ್ಲುವುದು ತಪ್ಪಲಿಲ್ಲ ನೋಡಿ. ಹೌದು ಈಗ ಏ.ಟಿ.ಏಂ. ಕೌಂಟರ್ ಗಳಲ್ಲೂ ಸರದಿ ದೊಡ್ಡದಾಗಿಯೇ ಇರುತ್ತದೆ. ಆ ಸರದಿಯಲ್ಲಿ ಕೆಲವು ಜನರಿಗೆ ಏ.ಟಿ.ಎಂ. […]
ನಿರೀಕ್ಷೆ
ಎನ್ನೊಳಗೆ ಹುದುಗಿದ್ದ ನಿರೀಕ್ಷೆಗಳನಿಂದು ಎಳೆ ಎಳೆಯಾಗಿ ಭಿತ್ತರಿಸುವೆ ಬೇಸರಿಸದಿರು ಕ್ಷಮೆ ಇರಲಿ ಎನಗೆ ಓ ಗೆಳೆಯ ಎಲ್ಲೊ ಇರುವ ಬಂಧಕೆ ಬೆಸೆಯುವ ನಿರೀಕ್ಷೆ ಜನ್ಮ ಜನ್ಮಗಳ ಅನುಬಂಧವಿದೆಂದು ಸಪ್ತ ಪದಿಯಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ನಡೆವಾಗ ನೂರು ನಿರೀಕ್ಷೆಗಳ ಹೊತ್ತು ನಾ ಬಂದೆ ಪ್ರೀತಿ ಅಂಕುರಿಸುವ ನಿರೀಕ್ಷೆ ನಿನ್ನೊಲವಿನ ಉಡುಗೊರೆಗಳ ನಿರೀಕ್ಷೆ ಬಂಧಗಳ ಸರಪಳಿಯಲಿ ಬಿಗಿದು ನನ್ನದು ನನ್ನದೆಂಬ ಭ್ರಮೆಯಲಿ ಹೊತ್ತು ನಾ ತಂದೆ ಹಲವು ನಿರೀಕ್ಷೆ ಕೈ ಕೈ ಹಿಡಿದು ಜಗವೆಲ್ಲ ಸುತ್ತಲು ನಿನ್ನೊಡನೆ ಜನ್ಮ […]
ರುದ್ರಾಕ್ಷ ಶಿವನ ಕಣ್ಣ ಹನಿ
ರುದ್ರಾಕ್ಷ ಶಿವನ ಕಣ್ಣ ಹನಿ ವೀರಭದ್ರಪ್ಪ ಧೋತರದ ಚುಂಗು ಎತ್ತಿ ಹಿಡಿದು ಭರಭರ ಹೊರಟನೆಂದರೆ ಮೈಲು ದೂರ ಇರುವ ಮುರುಘಾಮಠ ಮಾರು ದೂರವಾಗುತ್ತದೆ. ಎತ್ತರದ ಬಡಕುದೇಹಿ ವೀರಭದ್ರಪ್ಪನನ್ನು ‘ಉದ್ದಾನ ವೀರಭದ್ರ’ ಎಂದು ಓಣಿ ತುಂಟ ಹುಡುಗುರು ಅವನ ಹಿಂದಿನಿಂದ ಆಡಿಕೊಳ್ಳಲು ಅದೇ ಓಣಿಯ ‘ಗಿಡ್ಡ ವೀರಭದ್ರ’ನೂ ಒಂದು ಕಾರಣ. ಹೆಬ್ಬಳ್ಳಿ ಅಗಸಿಯ ಕರೆ ಹಂಚಿನ ನಾಲ್ಕು ಪಾಲಾದ ಹಿರೇರ ಮನಿಯು ಮೂರು ಫೂಟು ಅಗಲದ ಓಣಿಯಲ್ಲಿತ್ತು. ಒಂದು ಹಾಲ್ಕಮ್ ಡೈನಿಂಗ್ ಆದರೆ ಇನ್ನೊಂದು ಕಿಚಿನ್ ಕಮ್ ಬೆಡರೂಮ್ […]
ಬೆಂಗಳೂರಿನ ಕನ್ನಡಿಗರಿಗಾಗಿ
ಬೆಂಗಳೂರಿನ ಕನ್ನಡಿಗರಿಗಾಗಿ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ……. ಇದು ನಮ್ಮ ಕರುನಾಡು…….. ಆದರೂ ಇಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ಬೇರೆ ರಾಜ್ಯದವರಿಗೆ ಇಲ್ಲಿ ಸುಲಭವಾಗಿ ಉದ್ಯೋಗ ದೊರಕುತ್ತಿವೆ. ಕನ್ನಡಿಗರಿಗೆ ಬೆಂಗಳೂರಿನಲ್ಲಿ ಪ್ಲಾಟ್ ಕೊಳ್ಳುವುದು ಕಷ್ಟ. ಅನ್ಯ ಭಾಷಿಗರಿಗೆ ಅದು ಸುಲಭ, ಕಾರಣ […]