Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ – ಡಾ ವಿ ಬಿ ಆರತೀ ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವಂತಿ ವಿತ್ತಸ್ಯ ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ಹಣವನ್ನು ಭೋಗಿಸಬೇಕು ಅಥವಾ ದಾನ ಮಾಡಬೇಕು, ಇಲ್ಲದಿದ್ದರೆ ಅದು ನಾಶವಾಗುತ್ತದೆ ಎನ್ನುತ್ತದೆ ಸುಭಾಷಿತ. ಭಗವದ್ಗೀತೆ ದಾನ ಮಾಡದೆ ಭೋಗಿಸುವುದನ್ನು ಪಾಪವೆಂದೇ ಖಂಡಿಸುತ್ತದೆ- ‘ಭುಂಜತೇ ತೇ ತ್ವಘಂ ಪಾಪಂ ಯೇ ಪಚಂತ್ಯಾತ್ಮಕಾರಣಾತ್‌’ (ಏನನ್ನೂ ಹಂಚಿಕೊಳ್ಳದೇ ತಾನೇ ಭೋಗಿಸುವವನು ಪಾಪವನ್ನೇ ತಿನ್ನುತ್ತಾನೆ). ನಮ್ಮ ಧರ್ಮ […]

ನಿನ್ನ ಉದ್ಧಾರ ನಿನ್ನ ಕೈಯಲ್ಲಿ

‘‘ಹೇ ಪಾಂಡವ! (ಕರ್ಮ)ಸಂನ್ಯಾಸವೇ ‘ಯೋಗ’. ಕರ್ಮಕ್ಕೆ ಕಾರಣವಾಗುವ ಸಂಕಲ್ಪಗಳನ್ನು ತ್ಯಾಗ ಮಾಡದೇ ಇರುವವನು ‘ಯೋಗಿ’ಯಾಗಲಾರ. ಆರುರುಕ್ಷನಾದ ಮುನಿಗೆ (ನಿಷ್ಕಾಮ)ಕರ್ಮವೇ ‘ಯೋಗ’ಕ್ಕೆ ಹೇತು. ಯೋಗಾರೂಢನಿಗೆ ಸಂಕಲ್ಪಗಳ ತ್ಯಾಗವೇ ‘ಶಮ’ಸ್ಥಿತಿಯನ್ನು ತರುತ್ತದೆ’’ (ಭ.ಗೀ.: 6.3).

ಕಲ್ಲುಕಾಂಚನಗಳಲ್ಲಿ ಸಮಭಾವದ ಯೋಗಿ

ಜ್ಞಾನ–ವಿಜ್ಞಾನಗಳಿಂದ ತೃಪ್ತನಾದವನು ಯೋಗಿ’ ಎಂದು ಲಕ್ಷಣೀಕರಿಸಿದ ಕೃಷ್ಣನು ಮುಂದುವರಿಸುತ್ತ ಮತ್ತೊಂದು ಯೋಗಿಲಕ್ಷಣವನ್ನು ಹೆಸರಿಸುತ್ತಾನೆ– ‘ಕೂಟಸ್ಥ’ ಎಂದು.

ಶ್ರೀಕೃಷ್ಣನ ಈ ಪರಿಯ ಸೊಬಗಾವ ದೇವರಲು ನಾ ಕಾಣೆ

ಶ್ರೀಕೃಷ್ಣನ ಈ ಪರಿಯ ಸೊಬಗಾವ ದೇವರಲು ನಾ ಕಾಣೆ ಶ್ರೀಕೃಷ್ಣನದು ಸರ್ವತೋಮುಖ ವ್ಯಕ್ತಿತ್ವ. ಅವನು ಪೂಜಿಸುವ ಭಕ್ತರಿಗೆ ದೇವ, ತಂಗಿಯರಿಗೆ ಕಾಪಾಡುವ ಅಣ್ಣ, ಮಾತೆಯರಿಗೆ ಮುದ್ದಿನ ಕಂದ, ಕಾಡುವ ದುಷ್ಟರಿಗೆ ಅಂತಕ. ಸಮಾಜ ಹಾಗೂ ಸಂಬಂಧಗಳನ್ನು ಕಟ್ಟುವ ಶ್ರೀಕೃಷ್ಣ ವಾತ್ಸಲ್ಯದ ಸಂಗಾತಿಯೂ ಅಕ್ಕರೆಯ ಪ್ರೇಮಿಯೂ ಆಗುವನು. ಸಮಾಜ ಹಾಗೂ ಸಂಬಂಧಗಳನ್ನು ಕಟ್ಟುವ ಶ್ರೀಕೃಷ್ಣ ವಾತ್ಸಲ್ಯದ ಸಂಗಾತಿಯೂ ಅಕ್ಕರೆಯ ಪ್ರೇಮಿಯೂ ಆಗುವನು. ಕೃಷ್ಣನ ಜನ್ಮದಿನವಾದ ಅಷ್ಟಮಿಯನ್ನು ಭಾರತ ಅತ್ಯಂತ ಇಷ್ಟದಿಂದ ಆಚರಿಸುತ್ತದೆ. ನಮ್ಮ ಜೀವನದ ಧರ್ಮ- ಕರ್ಮಗಳ ಪ್ರೇರಣಶಕ್ತಿಯಾದ […]

ಭಾರತದ ಗುರುಕುಲ ಪದ್ಧತಿಯೂ ಜಪಾನಿನ ಆಧುನಿಕ ಪದ್ಧತಿಯೂ ಸೇರಿದರೆ ಆದರ್ಶ ಶಿಕ್ಷಣ!

ಭಾರತದ ಗುರುಕುಲ ಪದ್ಧತಿಯೂ ಜಪಾನಿನ ಆಧುನಿಕ ಪದ್ಧತಿಯೂ ಸೇರಿದರೆ ಆದರ್ಶ ಶಿಕ್ಷಣ! – ಡಾ.ವಿ.ಬಿ.ಆರತೀ ವ್ಯವಸ್ಥಿತವಾದ ಶಾಲಾ ಶಿಕ್ಷ ಣದ ಪರಿಕಲ್ಪನೆಯು ಮೂಡಿದ್ದೇ ಪ್ರಾಚೀನ ಭಾರತದಲ್ಲಿ. ಆಳಾಗಲಿ ಅರಸನಾಗಲಿ, ಎಲ್ಲರೂ ಬಾಲ್ಯದಲ್ಲೇ ಗುರುಕುಲಕ್ಕೆ ಸೇರಿ, ಸರಳ ಜೀವನ ನಡೆಸುತ್ತ, ಸೇವಾಕಾರ್ಯಗಳಲ್ಲಿ ತೊಡಗುತ್ತ, ಒಮ್ಮನದಿಂದ ವಿದ್ಯೆಗಳನ್ನು ಕಲಿಯುತ್ತ ತಾರುಣ್ಯವನ್ನು ಮುಟ್ಟಬೇಕೆನ್ನುವ ಕಲ್ಪನೆ ನಮ್ಮ ದೇಶ ಸಂಸ್ಕೃತಿಯಲ್ಲಿ ಒಡಮೂಡಿದಂತಹದ್ದು. ಶಿಕ್ಷಣಕ್ಕೂ ಶಿಕ್ಷ ಕನಿಗೂ ಅತ್ಯುನ್ನತ ಗೌರವವನ್ನೂ ಗಮನವನ್ನೂ ಹರಿಸುತ್ತಿದ್ದರೆನ್ನುವುದೂ ವಿದಿತ. ಈ ಕಾರಣದಿಂದಾಗಿಯೇ ನಮ್ಮ ಇತಿಹಾಸದಲ್ಲಿ ಹಲವಾರು ಧೀರೋದಾತ್ತ ನಾಯಕರೂ […]

ವಿಶ್ವೇಶ್ವರಯ್ಯನವರ ಪದವಿಯನ್ನು ಕುತ್ಸಿತ ರಾಜಕೀಯ ಮಾಡಿ ಕಬಳಿಸಿದ ನೆಹರೂ!

ವಿಶ್ವೇಶ್ವರಯ್ಯನವರ ಪದವಿಯನ್ನು ಕುತ್ಸಿತ ರಾಜಕೀಯ ಮಾಡಿ ಕಬಳಿಸಿದ ನೆಹರೂ! – ಡಾ.ವಿ.ಬಿ.ಆರತೀ ನಂದೀಬೆಟ್ಟದ ಬದಿಯ ಮುದ್ದೇನಹಳ್ಳಿಯೆಂಬ ಕುಗ್ರಾಮ. ಕೆರೆಗಳು ಬತ್ತಿದ್ದವು. ಐದಾರು ಮೈಲಿ ನಡೆದು ನಾಲ್ಕಾರು ಬಿಂದಿಗೆ ನೀರು ಹೊತ್ತು ತಂದಿಟ್ಟುಕೊಳ್ಳಬೇಕಾದ ಪರಿಸ್ಥಿತಿ. ಯಾರಿಗಾದರೂ ಚೊಂಬು ನೀರು ಕೊಡಬೇಕಾದರೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಭಾರತದ ಸಂಪನ್ಮೂಲಗಳ ಲೂಟಿ ಮಾಡುತ್ತ, ಏನೇನೂ ವ್ಯವಸ್ಥೆಗಳನ್ನು ನೀಡದೆ, ಜನಜೀವನವನ್ನು ಹೀಗೆ ದಾರುಣ ದೈನ್ಯಕ್ಕಿಳಿಸಿದ ಬ್ರಿಟಿಷರ ಕಾಲದ ಭಾರತದ ಚಿತ್ರವಿದು. ಆ ಹಳ್ಳಿಯ ಬಡ ಮನೆಯೊಂದರಲ್ಲಿ ಪುಟ್ಟ ಬಾಲಕ ಜ್ವರದಿಂದ ಹಾಸಿಗೆ […]

ಹಬ್ಬದ ದಿನವಾದರೂ ಕನ್ನಡಿಗರಂತೆ ಉಂಡು ಉಟ್ಟು ಕನ್ನಡದಲ್ಲೇ ಮಾತನಾಡೋಣ

ಹಬ್ಬದ ದಿನವಾದರೂ ಕನ್ನಡಿಗರಂತೆ ಉಂಡು ಉಟ್ಟು ಕನ್ನಡದಲ್ಲೇ ಮಾತನಾಡೋಣ – ಡಾ. ಆರತೀ ವಿ.ಬಿ. ಪರಾಶಕ್ತಿಯ ಪೂಜಾಪರ್ವ ಪ್ರಾರಂಭವಾಗಿದೆ. ಜಗನ್ಮಾತೆಯ ಬಗೆಬಗೆಯ ನಾಮರೂಪಗಳನ್ನು ಬಗೆಬಗೆಯ ವಿಧಿವಿಧಾನ ಗೀತ ನೃತ್ಯ ಉತ್ಸವಾದಿಗಳಿಂದ ಪೂಜಿಸಲಾಗುತ್ತಿದೆ. ಭಾರತೀಯನ ಪಾಲಿಗೆ ದೇವರೆಂದರೆ ‘ಮೋಡದ ಮೇಲೆ ಕುಳಿತು ಶಾಸಿಸುವ ಕಾಣದ ಶಕ್ತಿ’ ಅಲ್ಲ. ನಮ್ಮ ಪಾಲಿಗೆ ದೇವರೆಂದರೆ ನಮ್ಮ ಆತ್ಮಸ್ವರೂಪ! ನಮ್ಮ ಸುತ್ತಲ ಪ್ರಕೃತಿ! ನಮ್ಮನ್ನು ಪೋಷಿಸುವ ನೆಲ ಜಲ ಭೂ ಗಗನ ಗಾಳಿಗಳು! ದವಸ ಧಾನ್ಯ ಹಣ್ಣು ತರಕಾರಿಗಳನ್ನಿತ್ತು ಪಾಲಿಸುವ ಮರಗಿಡ ವನಸ್ಪತಿ […]

ಕಾವೇರಿಯ ಪ್ರೀತಿ ಹರಿಯಲಿ ಕನ್ನಡಿಗರ ಮನಗಳಲ್ಲಿ; ಬಳಸುವುದರ ಜೊತೆಗೆ ಉಳಿಸುವ ಕುರಿತೂ ಚಿಂತಿಸೋಣ!

ಕಾವೇರಿಯ ಪ್ರೀತಿ ಹರಿಯಲಿ ಕನ್ನಡಿಗರ ಮನಗಳಲ್ಲಿ; ಬಳಸುವುದರ ಜೊತೆಗೆ ಉಳಿಸುವ ಕುರಿತೂ ಚಿಂತಿಸೋಣ! – ಡಾ. ಆರತೀ ವಿ.ಬಿ. ಭಾರತೀಯರು ಅನಾದಿಯಿಂದಲೂ ನದಿಯನ್ನು ಬಹಳವಾಗಿ ಪ್ರೀತಿಸುತ್ತ ಬಂದವರು. ಆದರೆ ಅರ್ವಾಚೀನ ದಶಕಗಳಲ್ಲಿ ಈ ಭಾವ ಕುಗ್ಗುತ್ತಿದೆ. ಆಂಗ್ಲರು ಹೇರಿದ ಶಿಕ್ಷಣ ಪದ್ಧತಿಯಲ್ಲಿ ನಮಗೆ ನದಿಯನ್ನು ‘ಚೈತನ್ಯಮಯ ಜೀವಧಾರೆ’ಯೆಂದು ಕಂಡು ಆದರಿಸುವುದನ್ನು ಕಲಿಸುವುದಿಲ್ಲ. ಉಪಭೋಗಕ್ಕಾಗಿ ಇರುವ ‘water resource’ ಎಂದೇ ‘ಕಲಿಸಲಾಗುತ್ತಿದೆ. ಹೀಗಾಗಿ ಸುತ್ತಲ ಪ್ರಕೃತಿಯನ್ನು ‘ಬೇಕೆಂಬಂತೆ ಬಳಸು, ಸಾಕಾದರೆ ಬಿಸಾಡು’ ಎನ್ನುವ ಸ್ವಾರ್ಥ, ಉಡಾಫೆ, ಅಹಂಕಾರಗಳು ನಮ್ಮಲ್ಲಿ […]

ದೀಪಾವಳಿ ಬೆಳಕಿಗೆ ಅದೆಷ್ಟು ಅರ್ಥ; ತಿಳಿಯೋಣ ಬನ್ನಿ

ದೀಪಾವಳಿ ಬೆಳಕಿಗೆ ಅದೆಷ್ಟು ಅರ್ಥ; ತಿಳಿಯೋಣ ಬನ್ನಿ ಡಾ.ವಿ.ಬಿ.ಆರತೀ ಋತುಗಳನ್ನು ಅನುಸರಿಸಿಯೇ ನಮ್ಮ ಭಾರತದ ಹಬ್ಬಗಳೂ ಬರುತ್ತವೆ. ಪ್ರಕೃತಿಧಿಯನ್ನು ‘ಉಪಭೋಗದ ವಸ್ತು’ ಎಂದು ಭಾವಿಸದೆ ‘ಲಕ್ಷ್ಮೀ’ ಎಂದು ಆದರಿಸುವುದೇ ಅಪ್ಪಟ ಭಾರತೀಯ ಮನೋಭಾವ. ಹಾಗಾಗಿ ನಿಸರ್ಗವನ್ನೇ ದೈವವೆಂದು ಬಗೆಯುವುದು, ನಿಸರ್ಗದ ಪ್ರತಿಯೊಂದು ಚಿಕ್ಕಧಿದೊಡ್ದ ಪ್ರಕ್ರಿಯೆಗಳಲ್ಲೂಲಕ್ಷ್ಮೀ ವಿಲಾಸವನ್ನು ಕಾಣುವುದೇ ನಮ್ಮ ಪರಿ. ದಿನ ರಾತ್ರಿಗಳನ್ನೂ ಋುತು- ಮಾಸ-ಪಕ್ಷಗಳನ್ನೂ ಗ್ರಹತಾರೆಗಳನ್ನೂ ಸುತ್ತಲ ವನ ರಾಜಿಯನ್ನೂ ಪಶುಅರಿವಿನ ಪ್ರಜ್ಞೆಯೇ ದೀಪಾವಳಿ; ಬೆಳಗಿಸೋಣ ಆತ್ಮಜ್ಯೋತಿ ಪಕ್ಷಿ ಸಂಕುಲವನ್ನೂ ಮಾನವರನ್ನೂ ನಾವು ಪ್ರತ್ಯಕ್ಷ-ಪರದೈವವೆಂದೇ ನೋಡುತ್ತೇವೆ. […]