Your Cart

Need help? Call +91 9535015489

📖 Print books shipping available only in India. ✈ Flat rate shipping

ಸಾರ್ಥಕದ ಸಾವು!

ಸಾರ್ಥಕದ ಸಾವು! ಅನುದಿನವೂ ದಿನಕ್ಕಿಂತ ಹೆಚ್ಚುತ್ತಿದೆ ಶೋಕ ಮೌನದಲ್ಲೂ ಉಕ್ಕುವ ಕಂಬನಿ ತಡೆಯಲಾಗದ ದುಃಖ ಕೇಳಿದಷ್ಟು ಮತ್ತೆ ಮತ್ತೆ ಕೇಳಲು ಬಯಸುತ್ತಿದೆ ನಿನ್ನದೇ ಮಾತು ಈ ಜೀವ ನೋಡಿದಷ್ಟೂ ನೋಡುತ್ತಲೇ ಇರಬೇಕೆನ್ನುವ ಭಾವ ದಿನ ದಿನವೂ ನೀ ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ಮಾಣಿಕ್ಯ ಸಾವ ಕಂಡ ಕ್ಷಣದಿಂದ ಜೀವಂತವಾದ ಪುನೀತ ರಾಜಕುಮಾರ ಬದುಕುವುದಾದರೆ ಹೀಗೆ ಬದುಕಬೇಕೆಂದು ತೋರಿಸಿದ ಭಾಗ್ಯವಂತ ಕೋಟಿ ಕೋಟಿ ಕನ್ನಡಿಗರಿಗೆ ಪ್ರೇಮದ ಕಾಣಿಕೆ ನೀಡಿದ ಸಿರಿವಂತ ನೊಂದ ಹೆಂಗಳೆಯರ ದಾರಿ ದೀಪವಾಗಿ ದಾರಿ […]

ದೇವರಿಗೊಂದು ಪತ್ರ! ( 42)

ದೇವರಿಗೊಂದು ಪತ್ರ!( 42) ಹೇಗೆ ಇರುವೆ ಹೇಳು ನೀನು ಎನ್ನ ಹೃದಯದ ದೈವ? ಜಗದ್ರಕ್ಷಕ! ನನಗಂತೂ ಹಾದಿ ಬೇರೆಯೇ ತೋರಿದೆ ನೀನು! ಜಗದ್ಬಂಧು! ಈ ಪತ್ರ ಒಂದರ್ಥದಲ್ಲಿ ನಿನ್ನ ಉತ್ತರದ್ದೇ ಇರಬಹುದು! ಜನಾರ್ದನ! ಹೇಳುವುದು ಬಹಳವಿದೆ ಹರಿ ಮಾತು ಬರುತ್ತಿಲ ಅಕ್ಷರ ಸಾಲುತ್ತಿಲ್ಲ ಜಗತ್ಕಾರಣ! ನನ್ನಾತ್ಮದ ಮೂಲೆ ಮೂಲೆಯಲಿ ನಿನ್ನ ನಾಮಸ್ಮರಣೆಯೊಂದೆ ಜಗನ್ನಾಥ! ಗೊತ್ತೆನಗೆ ಈ ದೇಹ ಬಿಡುತ್ತಿಲ್ಲ ವಾಸನೆಗಳ ಮರ್ಕಟನಂತೆ ಮಾಧವ! ಚಿತ್ತ ಚಂಚಲತೆಯಲಿ ತೇಲುವುದು ಆಗೊಮ್ಮೆ ಈಗೊಮ್ಮೆ ಮಧುಸೂದನ! ಮೋಹದ ಬಲೆಯಲ್ಲಿ ಬೀಳುವುದು ಎಡವಿ […]

ದೇವರಿಗೊಂದು ಪತ್ರ!- 41

ದೇವರಿಗೊಂದು ಪತ್ರ!( 41) ಓ ಯಶೋದಾ ನಂದನ ಈ ಪತ್ರ ಓದಿ ನೀ ನಗಬಹುದು ಇಂದು ಹೇಳುವೆ ಕೇಳು ರಾಧರಮಣ ನಾನಾಚರಿಸಿದ ಪರಿ ನಿನ್ನ ಜನ್ಮದಿನ ಮೊದಲೆರಡು ದಿನದಿಂದ ಅಮಿತ ಆನಂದ ಹರಿ ಮನದೊಳಗೆ ಸಾಲು ಯೋಚನೆ ಹತ್ತು ಹಲವು ಯೋಜನೆ ಏನ ಮಾಡಲಿ ಹರಿಯ ಜನ್ಮದಿನಕ್ಕೆ ಅಂದುಕೊಂಡಿದ್ದೆಲ್ಲ ದೇಹದೊಳಗಿನ ಆತ್ಮ ಮಾಡಿ ಮುಗಿಸಿತ್ತು ಕ್ಷಣಕ್ಕೆ ಇರಲಿ ಕೇಳು ಬಾಹ್ಯ ಆಡಂಬರವು ಮಾಡಲಿಚ್ಚಿಸಿತು ಮನವು ಪೋದೆ ಹುಡುಕುತ ನಿನಗಿಷ್ಟದ ಸುಘಂದ ಭರಿತ ಪುಷ್ಪ ಆಯ್ದು ತರಲು ಮತ್ತೆ […]

ಅಮ್ಮ ಕಲಿಯಲೇ ಇಲ್ಲ!

ಅಮ್ಮ ಕಲಿಯಲೇ ಇಲ್ಲ! ಜನ್ಮ ಕೊಟ್ಟ ಕ್ಷಣದಿಂದ ಮೊಲೆಯುಣಿಸಿದಳು ವರ್ಷಗಟ್ಟಲೆ ಶಕ್ತಿವಂತನಾಗಲಿ ಕೂಸೆಂದೆನಿಸಿ ಬೆಳೆಸಿದಳು ನೋವಾಗುವುದು ಸಾಕು ಬಿಡು ಎನ್ನುವುದ ಕಲಿಯಲಿಲ್ಲ ಅವಳು! ಜಾತ್ರೆ ಉತ್ಸವಗಳಿಗೆ ಬಿಡದೆ ಟೊಂಕದಿ ಹೊತ್ತು ಮೆರೆದಳು ಆ ಕೈಗೊಮ್ಮೆ ಈ ಕೈಗೊಮ್ಮೇ ರಟ್ಟೆ ಬಿಗಿದು ಸೋತರೂ ಹುಸಿನಗುವಳು ಬಿಟ್ಟು ಹೋಗುವೆನಿಲ್ಲೇ ಬಾರದಿರು ಎನ್ನುವುದ ಕಲಿಯಲೇ ಇಲ್ಲ ಅವಳು ಹಾಡಿ ಪಾಡಿ ಅಂಗಳವೆಲ್ಲ ಸುತ್ತಾಡಿ ಚಂದಿರನ ತೋರಿ ತುತ್ತಿಟ್ಟಳು ಜೋಗುಳವ ಹಾಡಿ ತೊಟ್ಟಿಲ ತೂಗಿ ತೂಗಿ ಮಲಗಿಸಿದಳು ಕೂಸು ಉಣ್ಣದೆ ಮಲಗದೆ ಹಸಿವು […]

ದೇವರಿಗೊಂದು ಪತ್ರ! (40)

ದೇವರಿಗೊಂದು ಪತ್ರ! (40) ಪತ್ರವಿದು ವಿಶೇಷ ಓ ಹರಿಯೆ ಓದು ಈ ಕ್ಷಣಕ್ಕೆ ತಪ್ಪದೆ ನೀನು! ಈ ನಾಲ್ಕು ದಿನದಿಂದ ಅತೀತ ಆನಂದದಲ್ಲಿ ಮನವೆನ್ನ ಮುಳುಗಿಹುದು! ಅರಿಯದ ಸಂತಸದ ಭಾವ ಅನುಭಾವದಲಿ ಆತ್ಮವಿದು ತೇಲುತಿಗುದು ಆನಂದಭಾಷ್ಪ ಕಣ್ಣಂಚಲಿ ಬಿಡದೆ ಜಿನುಗುತಿಹುದು ನೋಡಿದವರು ಎನೆನ್ನುವರೀಪರಿಯ ಭ್ರಾಂತಿಗೆ ಎಂಬಳಕು ಮನದೊಳಿಹುದು! ನೀ ಹುಟ್ಟಿದಾಷ್ಟಮಿಯು ಇಂದು ಜನ್ಮಾಷ್ಟಮಿ ನಿನ್ನದಿಹುದು! ಇಂದು ಕುಳಿತಲ್ಲಿ ನಿಂತಲ್ಲಿ ನಿನ್ನದೇ ಧ್ಯಾನದಲ್ಲಿ ನಾ ಭಿನ್ನ ಪಾತ್ರದಲ್ಲಿ ಕಲ್ಪಿಸಿಹೆನು ನೀ ಹುಟ್ಟಿದಂತೆ ಈ ಕ್ಷಣಕ್ಕೆ ನಾ ದಾದಿಯಾಗಿ ನಿನ್ನ […]

ದೇವರಿಗೊಂದು ಪತ್ರ (39)

ದೇವರಿಗೊಂದು ಪತ್ರ (39) ಹರಿ “ಮನ” ದ ಮಾತೊಂದು ಹೇಳುವುದಿದೆ ನಿನ್ನಲ್ಲಿ ಹಿಂದೆ ನೊಂದಿರಲಿಲ್ಲ ಈ “ಮನ” ಇಂದು ನೊಂದಿದೆ ನೋವಿನಲಿ ದಿನ ದಿನದ ಮುಖವಾಡ ಅರಿಯುವುದು ಹೇಗೆ ಹೇಳು ನನ್ನಲ್ಲಿ ಯಾರ ಹೇಗೆ ನಂಬುವುದು ಅರಿಯದಾದೆ ನಾ ಈ ಜಗದಲ್ಲಿ ಮುಂದೆ ಹಾಡಿ ಹಿಂದಾಡಿಕೊಳುವರಯ್ಯ ಏನ ಹೇಳಲಿ ಎತ್ತಿ ಹಿಡಿವರು ಒಮ್ಮೆ ಮತ್ತೆ ಎತ್ತಿ ಒಗೆವರು ಕೆಳಗೆ ನೆಲದಲ್ಲಿ ಕಣ್ಣ ಒರೆಸುವರು ಮುಂದೆ, ವ್ಯಂಗ್ಯ ನಗುವರು ಹಿಂದೆ ಏನ ಹೇಳಲಿ ಹೊಗಳುವರು ಹೊಗಳು ಭಟ್ಟರಂತೊಮ್ಮೆ ಮಗದೊಮ್ಮೆ […]

ಬುದ್ಧ ಮತ್ತು ನಾನು

ಬುದ್ಧ ಮತ್ತು ನಾನು! ಹಾ…ಇವತ್ತು ಬುದ್ಧನೊಟ್ಟಿಗೆ ಮಾತಿಗಿಳಿಯುವ ತವಕ ನನಗೆ…ಬುದ್ಧನಿಗೆ ನನ್ನ ಮನದ ಮಾತು ಹೇಳುವುದಿದೆ. ಬುದ್ಧ!… ಈಗಲ್ಲ ಚಿಕ್ಕವಳಿದ್ದಾಗಿನಿಂದ ನಿನ್ನ ಕುರಿತು ಕೇಳುತ್ತಿದ್ದೇನೆ. ಆಗ ನೀನು ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದೆ. ನಿನ್ನೋಟ್ಟಿಗೆ ಆಟವಾಡಿ ಕಾಲ ಕಳೆಯುತ್ತಿದ್ದೆ. ಮುಂದೆ ಪಠ್ಯ ಪುಸ್ತಕಗಳಲ್ಲಿ ಓದಿದಾಗ ಓ…ಬುದ್ಧ ಸಾಮಾನ್ಯನಲ್ಲ ಏನೋ ಸಾಧನೆ ಮಾಡಿ, ಜ್ಞಾನ ಸಂಪಾದನೆ ಮಾಡಿರುವ ವ್ಯಕ್ತಿ ಎಂದು ತಿಳಿಯಿತು. ಮುಂದೆ ಬುದ್ಧನೆಂದಾಗ ಆಸೆ,ದುಃಖ,ಕರುಣೆ ಪ್ರೀತಿ,ಮೋಹ ಇನ್ನೂ ಹಲವಾರು ವಿಷಯಗಳು ತಿಳಿದುಕೊಂಡೆ. ಈಗ ಅರ್ಧ ಆಯಸ್ಸು ಕಳೆಯುವ ಹೊತ್ತಿಗೆ […]

ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು

ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು ಇಡೀ ಜಗವನ್ನೇ ಸ್ತಬ್ಧವಾಗಿಸಿ ತಾನೂ ಮೌನವಾಗಿಹಳು ಜನಸಂದಣಿಯ ಗದ್ದಲಕ್ಕೆ ತಲೇಶೂಲೆ ಅನುಭವಿಸಿದಳು ಅದೆಷ್ಟು ಆಕೆ ವಾಹನಗಳ ಶಬ್ಧಕ್ಕೆ ನಲುಗಿದ್ದಳು ನಿಮಿಷ ನಿಮಿಷಕ್ಕೂ ಅದೆಷ್ಟು ಹೋಗೆ ತುಂಬಿಕೊಂಡಿದ್ದಳು ಅದೆಷ್ಟು ಬಾರಿ ಕೊಡಲಿ ಪೆಟ್ಟಿಗೆ ಹಸಿರು ರವಿಕೆ ಕುಪ್ಪಸ ಕಳಚಿದಳು ಸಹನಮೂರ್ತಿ ಧರೆ ಮತ್ತೂ ಮಳೆ ಬೆಲೆ ಸಕಾಲಕ್ಕೆ ಕೊಟ್ಟವಳು ಎಷ್ಟಾದರೂ ಕೆರೆ ಬಾವಿ ಕಾನನ ನದಿ ಒಂದೂ ಬಿಡದೆ ಮುಚ್ಚಿ ಮರೆದೆವು ನಾವು ಆದರೂ ಬರಡಾಗಿಸದೆ ಬಿಡಲಿಲ್ಲ ಉಳಿಸಲಿಲ್ಲ ನಿರ್ದಯಿ ಮನುಜ ಭಾರ […]

ನನ್ನೊಳಗಿನ ಅವಳು

ನನ್ನೊಳಗಿನ ಅವಳು!? ಹೇಳಲಾಗದು ನನ್ನೊಳಗಿನ ಅವಳ ಮೋಡಿ ಮೌನವಾದರೆ ಸಾಕು ಮಾತಿನ ಮಳೆಗರೆವಳು ಏಕಾಂಗಿಯಾಗಿರಲು ಥಟ್ಟನೆ ಪ್ರತ್ಯಕ್ಷ ಆಗುವಳು ಒಳ್ಳೆ ಜೊತೆಗಾತಿ ನನ್ನೊಳಗಿನ ಅವಳು ನಗುವಾಗ ನಾನು, ಸಂತಸ ಪಡುವಳು ಅವಳು ದುಃಖ ಆವರಿಸಿದಾಗ ಸಂತೈಸುವ ಹೃದಯದವಳು ಆಗದೆಂದು ಕೈಕಟ್ಟಿ ಕುಳಿತರೆ ವ್ಯಂಗ್ಯ ಮಾಡುವಳು ಒಳ್ಳೆಯ ಸ್ಫೂರ್ತಿಯ ಚಿಲುಮೆ ನನ್ನೊಳಗಿನ ಅವಳು ಸೋತಾಗ ಗೆಲುವಿನ ಹಾದಿಗಳ ತೋರುವ ಗುರು ಗೆದ್ದಾಗ ಅಹಂಕಾರ ಬಾರದಂತೆ ಎಚ್ಚರಿಸುವ ಧ್ಯಾನಿ ಸಲ್ಲದ ಮೋಹ ಪಾಶದಲಿ ಸಿಲುಕದಂತೆ ಹಿಡಿವ ಯೋಗಿ ಅಜ್ಞಾನದ ಕೊಳೆಯಿಂದ […]