Your Cart

Need help? Call +91 9535015489

📖 Print books shipping available only in India. ✈ Flat rate shipping

‘ನಿಜವನ್ನು ಅರಿತು ನಡೆದರೆ ಒತ್ತಡ ಇರದು’

‘ನಿಜವನ್ನು ಅರಿತು ನಡೆದರೆ ಒತ್ತಡ ಇರದು’ ಒತ್ತಡ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತದೆ. ಬಯಕೆಗಳ ಹಿಂದೆ ಓಡಿದಷ್ಟೂ ಒತ್ತಡಗಳ ಕಾಟ ಹೆಚ್ಚು; ಜೀವನದಲ್ಲಿ ಸತ್ಯವಾದುದು ಯಾವುದು ಎಂದು ತಿಳಿದು ಅದನ್ನು ಹಿಂಬಾಲಿಸಿದರೆ ಒತ್ತಡಗಳು ನಮ್ಮನ್ನು ಕಾಡದು. ಶೋಕ, ಕೋಪ, ಭಯಗಳಿಗೆ ತತ್‌ಕ್ಷಣವೇ ಪ್ರತಿಕ್ರಿಯಿಸುವುದೂ ಒತ್ತಡಕ್ಕೆ ಕಾರಣವಾಗಬಲ್ಲದು ಎನ್ನುತ್ತಾರೆ, ಮನೋರೋಗ ಚಿಕಿತ್ಸಕ, ಸಂಸ್ಕೃತಕವಿ ಡಾ. ಶಂಕರ್ ರಾಜಾರಾಮನ್. ಒತ್ತಡವಿಲ್ಲದೆ ಜೀವನವಿಲ್ಲ. ಒಂದೆಡೆ ನಮ್ಮೆಲ್ಲರಿಗೂ ನಮ್ಮದೇ ಆದ ದೇಶ-ಕಾಲ-ವ್ಯಕ್ತಿ ಆಧಾರಿತ ಇತಿಮಿತಿಗಳಿರುತ್ತವೆ. ಇನ್ನೊಂದೆಡೆ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟವಾದ, ನಾವು […]

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ ಓರ್ವ ತಿರುಕ ಊರಮುಂದಿನ ಧರ್ಮಶಾಲೆಯಲ್ಲಿ ಒರಗಿದಾಗ ಕಂಡ ಕನಸಿನಂತೆ ನನ್ನ ಕನಸಿನ ಕುದುರೆಯೂ ನಾಗಾಲೋಟದಲ್ಲಿತ್ತು…. ಏನಾದರೂ ಸಾಹಸ ಮಾಡಿ business  ಒಂದನ್ನು plan  ಮಾಡಿಯೇ ತಿರಬೇಕೆಂಬ ಇತ್ತೀಚಿನ ತುಡಿತಕ್ಕೆ sudden ಆಗಿ “ಅಯ್ಯೋ ಎಲ್ಲಿದೆ ಬಂಡವಾಳ?? ಎಲ್ಲಾ ಬರಿಗೈಲಿ ಮೊಳ ಹಾಕುವದೇ ಆಯಿತು….. ನಿಮ್ಮಪ್ಪನೇನು ಕುಬೇರನೇ?”… ಒಳಮನಸ್ಸು ಉಬ್ಬುತ್ತಿದ್ದ ಬಲೂನಿಗೆ ಸೂಜಿ ಚುಚ್ಚಿ ಕನಸಿನ ಹೂಮಂಚದಿಂದ ಧೊಪ್ಪನೇ ನೆಲಕ್ಕೆ ಕೆಡವಿದ ಪರಿಗೆ ಮರುಗಬೇಕೋ… ವಾಸ್ತವ ತಿಳಿಸಿದಕ್ಕೆ ಧನ್ಯವಾದ […]

ಅನಂತನ ಅಂತರಾಳ

ಅನಂತನ ಅಂತರಾಳ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರದು 65ರ ವಯಸ್ಸಿನಲ್ಲಿಯೂ ಉದ್ಯೋಗ ಅರಸುವ ಹಿರಿ ವ್ಯಕ್ತಿಯ ಪಾತ್ರ. ಈ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಚಿತ್ರವು ಪ್ರತಿ ವ್ಯಕ್ತಿಯೂ ಹೊಟ್ಟೆಪಾಡಿಗಾಗಿ ಜೀವನದಲ್ಲಿ ವಿವಿಧ ಪಾತ್ರ, ಕೆಲಸಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು ಧ್ವನಿಸುತ್ತದೆ. ಅನಂತ್‌ ನಾಗ್‌ ಅವರು ಇತ್ತೀಚೆಗೆ ಎಚ್ಚರಿಕೆಯಿಂದ ಹೊಸ ಬಗೆಯ ಚಿತ್ರಕತೆಗಳನ್ನು ಆಯ್ದುಕೊಳ್ಳುತ್ತಿದ್ದು, ಅವರ ಇತ್ತೀಚಿಗಿನ ಅನೇಕ ಚಿತ್ರಗಳು ಇದನ್ನು ಸಾಬೀತು ಮಾಡಿವೆ. ಈ ಚಿತ್ರದಲ್ಲಿ ಅವರು ಹೊಸ ಬಗೆ […]

ಕರ್ಮ ಮತ್ತು ಲೋಕ

ಕರ್ಮ ಮತ್ತು ಲೋಕ ಸಮಾಜದಲ್ಲಿ ‘ದೊಡ್ಡವರು’ ಹೇಗೆ ವರ್ತಿಸುತ್ತಾರೋ ಸಾಮಾನ್ಯರೂ ಹಾಗೆ ವರ್ತಿಸಲಾರಂಭಿಸುತ್ತಾರಾದ್ದರಿಂದ ನಾಯಕರು ತಮ್ಮ ನಡೆನುಡಿಗಳ ವಿಷಯದಲ್ಲಿ ಎಚ್ಚರವಾಗಿರಬೇಕು ಎನ್ನುವ ಬುದ್ಧಿಮಾತನ್ನು ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಿದ್ದನಷ್ಟೆ? ಕೃಷ್ಣನು ತನ್ನದೇ ಉದಾಹರಣೆಯನ್ನು ನೀಡುತ್ತಾನೆ; ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ | ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ || ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ | ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || (ಭ.ಗೀ.: 3.22-23) ‘ಎಲೈ ಪಾರ್ಥನೆ! ನನಗೆ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೧೧:ಕಾವ್ಯ ಮತ್ತು ಸಂಗೀತದ ಸಂಬಂಧ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೧೧:ಕಾವ್ಯ ಮತ್ತು ಸಂಗೀತದ ಸಂಬಂಧ ಚೆನ್ನವೀರ ಕಣವಿ ವೈ.ಕೆ.ಮುದ್ದುಕೃಷ್ಣ ಜಯಶ್ರೀ ಅರವಿಂದ ನಿರ್ದೇಶಕರು : ನಾಗತಿಹಳ್ಳಿ ಚಂದ್ರಶೇಖರ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೯:ಸಾಹಿತ್ಯ ಕೃತಿಗಳ ಮರು ಓದು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೯:ಸಾಹಿತ್ಯ ಕೃತಿಗಳ ಮರು ಓದು ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಅನುಲಕ್ಷಿಸಿ ಬಸವರಾಜ ಕಲ್ಗುಡಿ ಕೆ.ಸಿ.ಶಿವಾರೆಡ್ಡಿ ನಿರ್ದೇಶಕರು : ಟಿ.ಪಿ. ಅಶೋಕ

ಉಪವನ – ತುಟಿಬಣ್ಣ – ಬಿಜಾಪುರ – ಖಚಿತ

ಉಪವನ – ತುಟಿಬಣ್ಣ – ಬಿಜಾಪುರ – ಖಚಿತ ಲಾಲಬಾಗ ಉಪವನದ ಪುಷ್ಪಮೇಳ ……. ಹೆಂಗಳೆಯರ ವಿವಿಧ ತುಟಿ ಬಣ್ಣಗಳ ಛಾಯೆಗಳನ್ನು ಹೋಲುವ ವರ್ಣಮೇಳ … ಹಂಪೆಯ ಕಲ್ಲಿನ ರಥ , ಬಿಜಾಪುರದ ಗೋಲಗುಮ್ಮಟ, ಮೈಸೂರ ಕನ್ನಂಬಾಡಿಯ ಹೂವುಗಳಿಂದಲೇ ಮಾಡಿದ ಮನಮೋಹಕ ಪ್ರತಿಕೃತಿಗಳು, ಖಚಿತವಾಗಿ ಕಲಾಕಾರನ ಕಲಾಪ್ರೌಢಿಮೆಯ ಜೀವಂತ ಸಾಕ್ಷಿಗಳಾಗಿ ಎಲ್ಲರ ಮನಸೂರೆಗೊಂಡದ್ದಲ್ಲದೇ ಕಲಾಸಕ್ತಿಗೆ ಹೊಸದೇ ಆದ ವ್ಯಾಖ್ಯಾನ ಬರೆದಿದ್ದರೆ ಅಚ್ಚರಿಯೇನು..?

ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್

ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್ ಲೇಖಕ : ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌ ಪ್ರಕಾಶಕರು : ಟೋಟಲ್ ಕನ್ನಡ, ಬೆಂಗಳೂರು ಪ್ರಕಟವಾದ ವರ್ಷ : 2018 ಪುಟ : 255 ಪುಟಗಳು ರೂ : ರೂ 250 ‘ಸಿನಿಮಾ ಸಂಭಾಷಣೆ ಸರಳವಾಗಿರಬೇಕು. ಜನರಿಗೆ ಸುಲಭಕ್ಕೆ ಅರ್ಥವಾಗುವ ಹಾಗೆ ಇರಬೇಕು. ಆಗ ಮಾತ್ರ ಸಿನಿಮಾ ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದು ಹುಣಸೂರು ಕೃಷ್ಣಮೂರ್ತಿಗಳು ಯಾವಾಗಲೂ ಹೇಳುತ್ತಿದ್ದರು. ಅವರೇ ಸ್ವತಃ ಆ ಮಾತಿಗೆ ನಿದರ್ಶನವಾಗಿದ್ದರು. ಅವರ ನಂತರ ಸರಳತೆಯ ಈ ಗುಣವನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡವರು ಚಿ. ಉದಯಶಂಕರ್ ಅವರು’ […]