Your Cart

Need help? Call +91 9535015489

📖 Print books shipping available only in India. ✈ Flat rate shipping

ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ

” ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ” ( ಮಹಿಳಾ Special…) ನನ್ನ ಕೋಣೆಯ ಕೊನೆಯಖಾನೆಯ ಏಳನೆಯ ಪೆಟ್ಟಿಗೆ ನನಗೆ ತುಂಬ ಖಾssಸ…ಅದರ ತುಂಬ ನನ್ನವೇ ಸೀರೆಗಳು. ತಿಂಗಳು/ಎರಡು ತಿಂಗಳಿಗೊಮ್ಮೆ ಅದನ್ನು ತೆರೆದು ಹರಡಿಕೊಂಡುಕೂಡುತ್ತೇನೆ.ಅಬ್ಬಾ !!! ಎಷ್ಟೊಂದು ಸೀರೆಗಳು, ಬನಾರಸಿ, ಚಂದೇರಿ, ಮೈಸೂರು ಸಿಲ್ಕ, ಕಾಸ್ಮೀರಿ, ಇಳಕಲ್, ಬಾಂದನಿ, ಮಾಹೇಶ್ವರಿ, ಇಕತ್, ನಾರಾಯಣ ಪೇಟ್, ಗದ್ವಾಲ್, ಶಿಫಾನ್,ಕಲ್ಕತ್ತಾ cotton, ಜೈಪುರ, ರಾಜಕೋಟ್ ಇತ್ಯಾದಿಗಳು. ಓಹೋಹೋ ಅನ್ನುತ್ತ ಆಗ ಬರುತ್ತಾರೆ ಯಜಮಾನರು.-“ಏನು ಇಷ್ಟೊಂದು […]

ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…

“ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…” ‌”ನನಗೆ ಮತ್ತೊಮ್ಮೆ ಹುಟ್ಟಿಬರುವ ಇಚ್ಛೆ ಬಿಲ್ಕುಲ್ ಇಲ್ಲ, ಆದರೆ ಅದು ಅನಿವಾರ್ಯ ಅಂತಾದರೆ ಮತ್ತಾವ ಜನ್ಮದಲ್ಲೂ ನಾನು ಲತಾ ಮಂಗೇಶ್ಕರ್ ಆಗಿ ಅಂತೂ ಹುಟ್ಟ ಬಯಸುವದಿಲ್ಲ, ಅವಳ ಕಷ್ಟಗಳು ಅವಳಿಗೊಬ್ಬಳಿಗೇ ಗೊತ್ತು.” ಇದು ಮುಂದಿನ ಜನ್ಮದಲ್ಲಿ ಏನಾಗ ಬಯಸುತ್ತೀರಿ”-ಎಂಬ ಪ್ರಶ್ನೆಗೆ ಸಂಗೀತದ ದಂತಕತೆ ಎನಿಸಿದ ಲತಾ ಮಂಗೇಶ್ಕರ್ ಅವರು ಕೊಟ್ಟ ಉತ್ತರ. ‌‌‌ ಯಾರನ್ನು ಇಡೀಭಾರತವಾಸಿಗಳು ತಮ್ಮ ಹೃದಯ ಸಿಂಹಾಸನದಲ್ಲಿಟ್ಟು ಪೂಜಿಸುತ್ತಾರೋ, ಯಾರ ದರ್ಶನಕ್ಕಾಗಿ ಹಗಲು- ರಾತ್ರಿ ಜನ […]

ಉದ್ದಿನ ವಡೆಗಳೂ…ಶ್ರೀ ಕೃಷ್ಣನಿಗೆ ಅಭಿಷೇಕವೂ…

ಉದ್ದಿನ ವಡೆಗಳೂ…ಶ್ರೀ ಕೃಷ್ಣನಿಗೆ ಅಭಿಷೇಕವೂ… ಉದ್ದಿನ ವಡೆ ಸಾಂಬಾರ್ ನನ್ನ ಬಹು ದೊಡ್ಡ weakness..ಹಾಗೆ ನೋಡಿದರೆ ನನ್ನ ಗಂಟಲಿಗದು ಅಷ್ಟೊಂದು ಮಾನಿಸುವದಿಲ್ಲ.ಆದರೆ ಆ ವಿಷಯದಲ್ಲಿ ನನ್ನ ಬುದ್ಧಿ / ಮನಸ್ಸುಗಳ ಮಧ್ಯೆ ಸದಾ ವೈಮನಸ್ಸು.ಇತ್ತೀಚೆಗೆ ಕೋವಿಡ್ನಿಂದಾಗಿ ಹೊರಗೆ ಹೋಗುವದೇ ದುಸ್ತರವಾಗಿ ನನ್ನ ಆಶೆ ಆಸೆಯಾಗಿಯೇ ಉಳಿದಿತ್ತು. ಈಗ ಕೆಲದಿನಗಳ ಹಿಂದೆ ಮನೆಯಲ್ಲಿ ಒಬ್ಬಳೇ ಇದ್ದೆ.Tiffin ಮಾಡಬೇಕೆಂದುಕೊಂಡಾಗ ವಡೆಯ ತೀವ್ರ ನೆನಪಾಗಿ ಮನಸ್ಸು ಖಿನ್ನವಾಗಿತ್ತು. ಏನೋ ಒಂದು ಮಾಡೋಣವೆಂದು ಯೋಚಿಸುತ್ತಿರುವಾಗ ಹೊರಗೆ ಹೋದ ಮಗಳಿಂದ ಫೋನ್.” ನಮ್ಮದು break […]

ನೂರೊಂದು ನೆನಪು ಎದೆಯಾಳದಿಂದ…

ನೂರೊಂದು ನೆನಪು ಎದೆಯಾಳದಿಂದ… ” ನನಗೆ ಸಾವಿನ ಅಂಜಿಕೆ ಇಲ್ಲ. ಏಕೆಂದರೆ ನಾನು ‘ಇರುವ’-ವರೆಗೂ ಅದು ಬರುವದಿಲ್ಲ, ‘ಅದು’ ಬಂದಾಗ ನಾನೇ ಇರುವದಿಲ್ಲ- ಹೀಗೆಂದವರು ನಮ್ಮ ಧಾರವಾಡ ನೆಲದ ಕವಿ ದ.ರಾ ಬೇಂದ್ರೆಯವರು.ಇದು ಪ್ರತಿಯೊಬ್ಬರ ವಿಷಯದಲ್ಲಿ ನಿಜವಾದರೂ ಅದರ ಪ್ರತ್ಯಕ್ಷ ಅನುಷ್ಠಾನ ಅಷ್ಟು ಸರಳವಲ್ಲ. ‌ ಇನ್ನು ‘ಚುಟುಕು ಬ್ರಮ್ಹ ‘ದಿನಕರ ದೇಸಾಯಿಯವರ ನಿಲುವು ಇದಕ್ಕಿಂತ ಕೊಂಚ ಭಿನ್ನ. ಜೀವಂತವಿದ್ದಾಗ ಸ್ವಾರ್ಥಮಾತ್ರದಿಂದ ವ್ಯರ್ಥವಾಗಿರಬಹುದಾದ ಬದುಕನ್ನು ಸಾವಿನ ತದನಂತರವಾದರೂ ಧನ್ಯವಾಗಿಸುವ ಪರಿಯದು.’ ದೇಹದ ಬೂದಿಯನ್ನು ಗಾಳಿಯಲ್ಲಿ ತೂರಿಬಿಟ್ಟು ಭತ್ತ […]

” ನಾ ‘ನಿನ’-ಗೆಂದೇ ಬರೆದಾ ಪ್ರೇಮದ ಓಲೆ…” ‌‌‌

” ನಾ ‘ನಿನ’-ಗೆಂದೇ ಬರೆದಾ ಪ್ರೇಮದ ಓಲೆ…” ‌‌‌ ಅದು ೧೯೬೮-೬೯ ರ ಸಮಯ. ನನ್ನ B.A ಪದವಿಯ ಫಲಿತಾಂಶ ಅದೇ ತಾನೇ ಬಂದಿತ್ತು. ಪಾಸಾಗಿದ್ದೆ. ಮುಂದೇನು ಎಂಬ ಸಮಸ್ಯೆಯೇನೂ ಇರಲಿಲ್ಲ.ನೌಕರಿಯ ಸಂಭಾವ್ಯತೆ ಇಲ್ಲವೇ ಇಲ್ಲ ಎಂಬಷ್ಟು ದೂರದ ಮಾತು.ಆರು ತಿಂಗಳ ಹಿಂದೆ ಅಕ್ಕನ ಮದುವೆಯಾಗಿ ಮನೆ ನೋಡಿಕೊಳ್ಳುವ ಹೊರೆ ನನ್ನದಾಗಿತ್ತು. ಮನೆಯಲ್ಲಿ ಎಲ್ಲರೂ ದೊಡ್ಡವರೇ ಇದ್ದುದರಿಂದ ಹೆಚ್ಚಿನ ಹೊಣೆ ಏನೂ ಇರಲಿಲ್ಲ.ಆ ವೇಳೆಯನ್ನು ಬಳಸಿಕೊಳ್ಳಲು ಹಾಲಭಾವಿಯವರ school of arts ದಲ್ಲಿ painting class, ಗಾಂಧಿಚೌಕಿನಲ್ಲಿಯ […]

ಮಕರ ಸಂಕ್ರಮಣ…ಈಗೆಲ್ಲಾ ಭಣಭಣ…

ಮಕರ ಸಂಕ್ರಮಣ…ಈಗೆಲ್ಲಾ ಭಣಭಣ… ‌‌‌‌ ‌‌” ಇವತ್ತ ಪ್ರಾರ್ಥನಾ ಆದಮ್ಯಾಲ ಒಂದನೇಯ ಪೀರಿಯಡ್ ನಡಿಯೂದಿಲ್ಲ, ಎಲ್ಲಾರೂ ಆ ಪೀರಿಯಡ್ನ್ಯಾಗ ಹೆಚ್ಚು ಗದ್ದಲಾ ಮಾಡದ ಉಳಿದ ಎಲ್ಲಾರ್ಗೂ ಎಳ್ಳು ಕೊಡಬಹುದು. ಇಡೀ ದಿನ ಕಂಡ ಕಂಡಲ್ಲೆ ಅದೊಂದನ್ನsss ಮಾಡಕೋತ ತಿರಗ್ಬಾರ್ದಂತ ಈ ವ್ಯವಸ್ಥೆ ಮಾಡೇವಿ, ಸರೀಯಾಗಿ ಒಂದು ತಾಸಿಗೆ ಮೊದಲನೇ ಗಂಟೆ ಆಗ್ತದ ,ಆಗ ಎಲ್ಲಿದ್ರೂ ಬಂದು class ಸೇರ್ಕೋಬೇಕು.ಎರಡನೇ ಬೆಲ್ ಗೆ ಟೀಚರ್ ಒಳಗ ಬರೋದ್ರೊಳಗ ಒಬ್ಬನೇ ಒಬ್ಬ ವಿದ್ಯಾರ್ಥಿ ಹೊರಗ ಕಾಣೋ ಹಂಗಿಲ್ಲ.ತಿಳಿತಿಲ್ಲೋ?”- ಶಾಲೆಯೊಳಗ ಪ್ರತಿವರ್ಷ ಜನೆವರಿ […]

ನಮ್ಮ ಮನೆ ಪೂರಾ ನಮ್ಮದಾಗಲಿ…

ನಮ್ಮ ಮನೆ ಪೂರಾ ನಮ್ಮದಾಗಲಿ… ಬಹಳ ದಿನಗಳ ಹಿಂದೆ, ಮರಾಠಿ ಮೂಲದ ಕನ್ನಡ ಅನುವಾದ ,’ ನಮ್ಮ ಮನೆ ನಮ್ಮದೆಷ್ಟು ‘ ಲೇಖನವನ್ನು ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ್ದೆ. ಅಷ್ಟೊಂದು ಆಸೆಪಟ್ಟು, ದುಡಿದ ಹಣವನ್ನೆಲ್ಲ ವ್ಯಯಿಸಿ, ಕಟ್ಟಿಸಿದ ಮನೆಯಲ್ಲಿ ಒಬ್ಬ ಮನುಷ್ಯ ಎಷ್ಟು ಕಾಲ ಇರುತ್ತಾನೆ ಎಂಬುದರ ವಿಶ್ಲೇಷಣೆಯಿತ್ತು ಅದರಲ್ಲಿ. ಒಬ್ಬ ಮನುಷ್ಯ ಪೂರ್ಣವಾಗಿ ನೂರು ವರ್ಷ ಬದುಕಿದರೂ ಬದುಕಿನ ಹೋರಾಟ, ಬದುಕಿಗಾಗಿ ಸಂಪಾದನೆ, ಅನ್ನುತ್ತ ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರರ ವರೆಗೆ ಅಂದರೆ ಮೂರರ ಒಂದು […]

ಎಲ್ಲರೊಳಗೊಂದಾಗು ಮಂಕು ತಿಮ್ಮ…

ಎಲ್ಲರೊಳಗೊಂದಾಗು ಮಂಕು ತಿಮ್ಮ… ನಿನ್ನೆ ಎಲ್ಲಾ ಪೂರ್ತಿ ಹೊಸ ವರ್ಷದ ಮುದ… ಮುಂಬರುವ ಬದುಕಿನಲ್ಲಿ ಬದಲಾವಣೆ ಇರುತ್ತೋ ,ಇಲ್ಲವೋ, ಆ ಒಂದು ದಿನ ಮಾತ್ರ ಒಂದು ವಿಶಿಷ್ಠವಾದ ಭಾವವಂತೂ ಕೆಲಸ ಮಾಡುತ್ತಿರುತ್ತದೆ- ಒಂದು ಸಮೂಹ ಸನ್ನಿಯಂತೆ… ಕೆಲವರಂತೂ ಹೊಸ ವರ್ಷಕ್ಕೆ ಅಂತಾನೇ ಕೆಲವು resolutions ಮಾಡುತ್ತಿರುತ್ತಾರೆ.ಪಾಲಿಸಲು ಅಲ್ಲವಾದರೂ ಮುಂದೊಮ್ಮೆ ಮುರಿಯಲಾದರೂ ಬೇಕಲ್ಲ. ‌‌ ಒಂದು ಮಾತು ಮೊದಲೇ ಹೇಳಿಬಿಡುವದು ವಾಸಿ.ನನಗೆ ಇವೆಲ್ಲವುಗಳ ಬಗ್ಗೆ ಖಾಸಾ ಮೋಹವಾಗಲಿ/ವಿರೋಧವಾಗಲಿ ಇಲ್ಲ. ಬಹುಶಃ ನಮ್ಮ ಬಾಲ್ಯದ ಹಳ್ಳಿಯ ಪರಿಸರದಿಂದ ಇಲ್ಲಿಯವರೆಗೆ ಪಯಣಿಸಿದ […]

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ…

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ… ನಮ್ಮದು ತಾಲೂಕೂ ಅಲ್ಲದ ಅತಿ ಚಿಕ್ಕ ಹಳ್ಳಿ, ರಟ್ಟೀಹಳ್ಳಿ.ಅಲ್ಲಿಂದ ಮೊಟ್ಟ ಮೊದಲಿಗೆ ಧಾರವಾಡಕ್ಕೆ ಬಂದದ್ದು ೧೯೬೫ ರಲ್ಲಿ, ನಾನು ಹತ್ತೊಂಬತ್ತು ವರ್ಷದವಳಿದ್ದಾಗ…ಅದೂ ಪಿ.ಯು.ಸಿ ಗೆ ಅಂದರೆ ಯಾರಿಗೂ ಸಹಜವಾಗಿಯೇ ಆಶ್ಚರ್ಯವಾದೀತು. ಹೌದು, ಶಿಕ್ಷಣ ಇದ್ದುಳ್ಳವರ ಸೊತ್ತು ಎಂಬಂತಿದ್ದ ಕಾಲಮಾನವದು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯಂತೂ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಇದ್ದವರು ಮಕ್ಕಳನ್ನು ಹತ್ತಿರದ ರಾಣೆಬೆನ್ನೂರು, ಹಾವೇರಿ ಹೆಚ್ಚೆಂದರೆ ಧಾರವಾಡದಲ್ಲಿ ಬಂಧುಗಳ ಮನೆಯಲ್ಲಿ ಇಟ್ಟು ಓದಿಸುತ್ತಿದ್ದರು. ಉಳಿದವರು […]