ವರ್ಣವ್ಯವಸ್ಥೆಯಲ್ಲಿ ದುರಭಿಮಾನದ ಅಪಸ್ವರ ಚಾತುರ್ವರ್ಣ್ಯ ವ್ಯವಸ್ಥೆಯ ಬಗ್ಗೆ ರ್ಚಚಿಸುತ್ತಿದ್ದೆವು. ‘ನಮ್ಮದೇ ಸರ್ವಸ್ವ’ ಎನ್ನುವ ಕೂಪಮಂಡೂಕಬುದ್ಧಿಯವರು, ಯಾರನ್ನೂ ತಮ್ಮ ಬಾವಿಯೊಳಗೆ ಬರಗೊಡದೆ ಉಳಿಯುತ್ತಾರೆ. ಇವರಲ್ಲಿ ಎರಡು ಬಗೆ: ಕೆಲವರು ತಮ್ಮ ಕುಲ-ವೃತ್ತಿಗಳಲ್ಲೇ ಆಶ್ರಯವನ್ನೂ ಸುರಕ್ಷೆಯನ್ನೂ ತೃಪ್ತಿಯನ್ನೂ ಕೊಂಡುಕೊಳ್ಳುತ್ತಾರೆ. ತಮ್ಮ ಸಾಂಸ್ಕೃತಿಕವೈಶಿಷ್ಟ್ಯನ್ನು ಉಳಿಸಿ ಬೆಳೆಸಿಕೊಳ್ಳುತ್ತಾರೆ. ಭಾರತದ ಅದೆಷ್ಟೋ ಲಲಿತಕಲೆಗಳೂ ಕುಶಲಕಲೆಗಳೂ ಕೃಷಿ, ಆಹಾರ, ವೇಷಭೂಷಗಳೂ, ಹಬ್ಬಹರಿದಿನಗಳೂ, ಭಾಷೆ-ಸಾಹಿತ್ಯಾದಿ ಪ್ರಕಾರಗಳು ಉಳಿದಿರುವುದು ಇವರುಗಳಿಂದಾಗಿಯೇ. ಹೊರಜಗತ್ತಿನ ಜಾಹೀರಾತು, ಹಣ-ಪದವಿಗಳ ಆಕರ್ಷಣೆಗೆ ಮನಸೋಲದೆ, ಸರ್ಕಾರದ ನೆರವಿಗೂ ಕಾಯದೆ, ಮೂದಲಿಸುವವರಿಗೂ ಮನಗೊಡದೆ, ಕಷ್ಟವಾದರೂ, ಅನನುಕೂಲವಾದರೂ, ಧರ್ಮರಕ್ಷಣೆಯ […]
Month: December 2018
ಚಾತುರ್ವರ್ವಣವನ್ನು ಅಂದಗೆಡಿಸಿದ ದುರಭಿಮಾನ
ಚಾತುರ್ವರ್ವಣವನ್ನು ಅಂದಗೆಡಿಸಿದ ದುರಭಿಮಾನ ಚಾತುರ್ವಣ ವ್ಯವಸ್ಥೆಯನ್ನು ಅರ್ಥಹೀನವಾಗಿಸುವಲ್ಲಿ ನಿರಭಿಮಾನವೊಂದು ಕಾರಣವಾದರೆ, ಮತ್ತೊಂದು ಕಾರಣ ‘ದುರಭಿಮಾನ’ವೆಂಬ ಮನೋವಿಕಾರ. ಈ ದುರಭಿಮಾನವು ಅಸಹನೆ, ತಿರಸ್ಕಾರ, ದ್ವೇಷ, ಮತಾಂಧತೆಗಳನ್ನು ಹುಟ್ಟಿಸಿ ಮನುಷ್ಯನನ್ನು ದಾರಿ ತಪ್ಪಿಸುವಂಥದ್ದು. ದುರಭಿಮಾನವೆಂಬ ಕಸ ಮನದ ಕಣ್ಣನ್ನು ಆವರಿಸಿದಾಗ, ಮನುಷ್ಯ ತನ್ನನ್ನು ನಿಸರ್ಗದಿಂದ ‘ಪ್ರತ್ಯೇಕ’ವೆಂದು ಭಾವಿಸತೊಡಗುತ್ತಾನೆ. ಅನಿರ್ವಚನೀಯ ಸ್ವಾರಸ್ಯಗಳ, ವೈವಿಧ್ಯಗಳ ಈ ಅನಂತ ಸಂಕೀರ್ಣ ಪ್ರಕೃತಿಯಲ್ಲಿ ‘ನಾನೂ ಒಂದು ವಿಶಿಷ್ಟ ಪ್ರಕಾರ’ ಎಂದು ಭಾವಿಸಿ, ಸುಂದರ ಸಂಬಂಧ ಉಳಿಸಿಕೊಳ್ಳುವ ಜವಾಬ್ದಾರಿ ಅವನಲ್ಲಿ ಮರೆಯಾಗುತ್ತದೆ. ‘ನಾನೊಬ್ಬನೇ ಏನೋ ವಿಶೇಷ’ ಎಂಬ […]
ಅಪೂರ್ವ ವಜ್ರ.
ಅಪೂರ್ವ ವಜ್ರ. ಒಬ್ಬ ಬಡವ ಹೇಗೆ ರಾಜ ಆಗತಾನೆ ಅಂತ ಈ ಕಥೆನಲ್ಲಿ ಕೇಳಿ.
ನಿರಭಿಮಾನವು ಆತ್ಮಘಾತಕ
ನಿರಭಿಮಾನವು ಆತ್ಮಘಾತಕ ‘ನಾಡು-ನುಡಿ-ಕುಲಗಳ ಬಗ್ಗೆಯೂ ಹಿಡಿದ ವೃತ್ತಿಯ ನಿರಭಿಮಾನ ಬೆಳೆದ ವ್ಯಕ್ತಿಯು ಕ್ರಮೇಣ ‘‘ತನ್ನತನ’’ ಕಳೆದುಕೊಳ್ಳುತ್ತ, ಬಾಹ್ಯದ ಪ್ರಭಾವಕ್ಕೆ ವಶವಾಗುತ್ತಾನೆ’ ಎನ್ನುವುದನ್ನು ರ್ಚಚಿಸುತ್ತಿದ್ದೆವು. ಕುಸಂಸ್ಕೃತ ಶಿಕ್ಷಣವ್ಯವಸ್ಥೆ, ಸ್ವಾರ್ಥಪ್ರೇರಿತ ರಾಜಕೀಯ ಶಕ್ತಿಗಳ ಕೈವಾಡ, ಪೋಷಕರ ಔದಾಸೀನ್ಯ – ಇವೆಲ್ಲ ಸೇರಿ ಆಧುನಿಕ ಭಾರತೀಯರ ಮನದಲ್ಲಿ ದೇಶ-ಧರ್ಮ-ಕುಲಾಚಾರಗಳ ಬಗ್ಗೆ ನಿರಭಿಮಾನ ಮೂಡಿಸುತ್ತಿದೆಯಷ್ಟೆ. ಈ ವ್ಯವಸ್ಥೆಯಲ್ಲಿ ಮಕ್ಕಳು ನಾಡನ್ನೂ ಅರಿಯದೆ, ನುಡಿಯನ್ನೂ ಸರಿಯಾಗಿ ಕಲಿಯದೆ, ದೇಶ-ಧರ್ಮ-ಸಂಸ್ಕೃತಿಗಳ ಪರಿಚಯವನ್ನೂ ಪಡೆಯದೆ, ಪಾಶ್ಚಾತ್ಯರ ಕಾರ್ಬನ್ ಕಾಪಿಗಳಾಗುವುದನ್ನೇ ‘ಜೀವನದ ಗುರಿ’ಯೆಂದೂ ಭ್ರಮಿಸತೊಡಗಿದ್ದಾರೆ! ಭಾರತವನ್ನು ಜನಾಂಗೀಯ ದ್ವೇಷ […]
ನಾಲಕ್ಕು ಕಥೆಗಳು ನಿಮಗಾಗಿ.
ನಾಲಕ್ಕು ಕಥೆಗಳು ನಿಮಗಾಗಿ. ಪಂಜರದ ಕೋತಿ+ಸ್ವಾತಂತ್ರ್ಯವೇ ಸ್ವರ್ಗ+ಮೂರ್ಖ ಕಪ್ಪೆ+ಮುಯ್ಯಿಗೆ ಮುಯ್ಯಿ+ಸಿಂಹದ ಪ್ರೀತಿ.
ಪುಟ್ಟನ ಪರಿಸರ ಪ್ರೇಮ
ಪುಟ್ಟನ ಪರಿಸರ ಪ್ರೇಮ ಹಿತ್ತಲಲೊಂದು ಪುಟ್ಟನೆಯ ಜಾಗ ಬಿತ್ತು ಕಣ್ಣವನ ಮಣ್ಣಿನ ನೆಲದಾಗ ಹಿಡಿದ ಚಿಕ್ಕದೊಂದು ಗುದ್ದಲಿ ಕೈಯಾಗ ಕೆತ್ತಿ ಹುಡಿಮಾಡಿ ಹದಗೊಳಿಸಿದನೆಲ್ಲ ನೀರ ಹಾಯಿಸಿ ರಾಡಿಮಾಡಿದ ನೆಲವನೆಲ್ಲ ಕೆಸರಾಗಿಸಿದ ಅಂಗಿ, ಚಡ್ಡಿಯನೆಲ್ಲ ಒಳಹೊಕ್ಕು ಹಿಡಿದ ಅಮ್ಮಳ ಸೆರಗು ಕೊಡೆನಗೊಂದು ಕಾಳೆಂದು ಹಾಕಿದನೊಂದು ಕೂಗು ಕೊಟ್ಟು ಸಾಗುತಳಮ್ಮ ಎಂದಳು ಸಾಕು ಹೋಗು ಜಿಗಿಜಿಗಿದು ಪುಟ್ಟ ನಡೆದ ಹಿತ್ತಲಿಗೆ ಗುಂಡಿ ತೆಗೆದ ಹಿಡಿದು ಗುದ್ದಲಿ ಸಲಿಕೆ ಇಟ್ಟ ಬೀಜವನು ನಡು ಮಧ್ಯದೊಳಗೆ ದಿನಗಳುರುಳಿದವು ನಿದ್ದೆ ಮಾಡದಾದ ಘಳಿಗೆಗೊಮ್ಮೆ ನೋಡುವುದ […]
ದುಷ್ಟ ಹುಡುಗ.
ದುಷ್ಟ ಹುಡುಗ. ಯಾವ ತಪ್ಪುಗಳು ನಮ್ಮನ್ನು ದುಷ್ಟರನ್ನಾಗಿ ಮಾಡುತ್ತವೆ ಅಂತ ಈ ಕಥೆನಲ್ಲಿ ಕೇಳಿ.
ಸದಾ ನೆಲೆಸು!
ಸದಾ ನೆಲೆಸು! ಸದಾ ಧ್ಯಾನದಲಿ ನೆಲೆಗೊಳ್ಳಲಿ ಮಸ್ತಕವು ದೇವ ನಿನ್ನ ಆರಾಧನೆಯ ನೇಮದೊಳು ಚಿತ್ತ ಭ್ರಾಂತವಾಗದಿರಲಿ ಈ ಮಾಯಾ ಜಗದೊಳು ಅರಿವಿರದೆ ಬಾಗದಿರಲಿ ಈ ಸೋಗಿನೊಳು ಸೋಲು ಗೆಲುವು, ನೋವು ನಲಿವುಗಳೆಲ್ಲ ಕುಂದು ಕೊರತೆ, ಹೊಂದಾಣಿಕೆ ಎಲ್ಲವೂ ನೀನೆಣಿಸಿದಂತೆ, ನೀ ನಿರ್ದೇಷಿಸಿದಂತಿಹುದಲ್ಲ ಸಾಗಿಸು ಸುಮಾರ್ಗದಲಿ ಮತ್ತೇನೂ ಬೇಡೆನಲ್ಲ ಆಗಿದ್ದೆಲ್ಲ ಒಳಿತೆನ್ನುವುದನು ಹೇಳಲಿ ಮನ ಆಗುವುದೆಲ್ಲ ಒಳಿತೇ ಇನ್ನು ಎನ್ನಲಿ ಪ್ರತಿಕ್ಷಣ ಘಳಿಗೆ, ನಿಮಿಷ, ಕ್ಷಣಕ್ಷಣಗಳು ನನ್ನ ಕೈಯಲಿಲ್ಲ ಎನುವುದನು ನಂಬಿ ತಲ್ಲಣಿಸದಿರಲಿ ಈ ಮನ ದುರಾಲೋಚನೆ, ಹಳಿವ […]
ಬುದ್ದಿವಂತ ರೈತ.
ಬುದ್ದಿವಂತ ರೈತ. ಮೂಕ ಪ್ರಾಣಿ, ಪಕ್ಷಿಗಳಿಗೂ ಪ್ರೀತಿ ಅರ್ಥ ಆಗುತ್ತೆ ಅಂತ ಈ ಕಥೆಯಲ್ಲಿ ಕೇಳಿ